More

    ಅಬುಧಾಬಿ ಟಿ10 ಲೀಗ್‌ನಲ್ಲಿ ಆಡಲಿದ್ದಾರೆ ಟಿ20 ಸ್ಟಾರ್ ಕ್ರಿಕೆಟಿಗರು

    ಅಬುಧಾಬಿ: ಕ್ರಿಸ್ ಗೇಲ್, ಶಾಹಿದ್ ಅಫ್ರಿದಿ ಮತ್ತು ಡ್ವೇನ್ ಬ್ರಾವೊ ಅವರಂಥ ಚುಟುಕು ಕ್ರಿಕೆಟ್ ಪ್ರಕಾರದ ಸ್ಟಾರ್ ಆಟಗಾರರು ಜನವರಿ 28ರಿಂದ ಫೆಬ್ರವರಿ 6ರವರೆಗೆ ನಡೆಯಲಿರುವ 4ನೇ ಆವೃತ್ತಿಯ ಅಬುಧಾಬಿ ಟಿ10 ಕ್ರಿಕೆಟ್ ಟೂರ್ನಿಯಲ್ಲಿ ಆಡಲಿದ್ದಾರೆ. 8 ತಂಡಗಳ ಟೂರ್ನಿಯ ಎಲ್ಲ ಪಂದ್ಯಗಳು ಜಯೆದ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿವೆ.

    ಟಿ20 ಕ್ರಿಕೆಟ್ ಪ್ರಕಾರದ ಯಶಸ್ಸಿನ ಬಳಿಕ ಹುಟ್ಟಿಕೊಂಡಿರುವ ತಲಾ 10 ಓವರ್‌ಗಳ ಟಿ10 ಕ್ರಿಕೆಟ್ ಕೂಡ ಸಾಕಷ್ಟು ಜನಪ್ರಿಯತೆ ಗಳಿಸುತ್ತಿದೆ. ಟಿ20 ಕ್ರಿಕೆಟ್‌ನಲ್ಲಿ ಸಾವಿರಕ್ಕೂ ಅಧಿಕ ಸಿಕ್ಸರ್ ಸಿಡಿಸಿರುವ ವೆಸ್ಟ್ ಇಂಡೀಸ್‌ನ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಟೀಮ್ ಅಬುಧಾಬಿ ಪರ ಕಣಕ್ಕಿಳಿಯಲಿದ್ದಾರೆ. ಪಾಕಿಸ್ತಾನದ ಮಾಜಿ ಆಲ್ರೌಂಡರ್ ಶಾಹಿದ್ ಅಫ್ರಿದಿ ಖಲಂದರ್ಸ್‌ ತಂಡದ ಐಕಾನ್ ಆಟಗಾರರಾಗಿರುತ್ತಾರೆ. ವೆಸ್ಟ್ ಇಂಡೀಸ್ ಆಲ್ರೌಂಡರ್ ಡ್ವೇನ್ ಬ್ರಾವೊ ಡೆಲ್ಲಿ ಬುಲ್ಸ್, ಆಂಡ್ರೆ ರಸೆಲ್ ನಾರ್ಥರ್ನ್ ವಾರಿಯರ್ಸ್‌ ಮತ್ತು ಸುನೀಲ್ ನಾರಾಯಣ್ ಡೆಕ್ಕನ್ ಗ್ಲಾಡಿಯೇಟರ್ಸ್‌ ಪರ ಆಡಲಿದ್ದಾರೆ.

    ಇದನ್ನೂ ಓದಿ: ದ್ರಾವಿಡ್ ಅವರನ್ನು ಕೂಡಲೆ ಆಸ್ಟ್ರೇಲಿಯಾಕ್ಕೆ ಕಳುಹಿಸಿ ಎಂದು ವೆಂಗ್ಸರ್ಕಾರ್ ಹೇಳಿದ್ದೇಕೆ?

    ಪಾಕಿಸ್ತಾನದ ಮಾಜಿ ನಾಯಕ ಶೋಯಿಬ್ ಮಲಿಕ್ ಹಾಲಿ ಚಾಂಪಿಯನ್ ಮರಾಠ ಅರೇಬಿಯನ್ಸ್ ಮತ್ತು ಶ್ರೀಲಂಕಾದ ಥಿಸ್ಸರ ಪೆರೇರ ಪುಣೆ ಡೆವಿಲ್ಸ್, ಇಸುರು ಉದಾನ ಬಾಂಗ್ಲಾ ಟೈಗರ್ಸ್‌ ಪರ ಆಡಲಿದ್ದಾರೆ. ಅಬುಧಾಬಿ ಟಿ10 ಲೀಗ್ ಟೂರ್ನಿಯು ವಿಶ್ವದ ಮೊಟ್ಟ ಮೊದಲ ಟಿ10 ಕ್ರಿಕೆಟ್ ಟೂರ್ನಿಯಾಗಿದೆ.

    ಇದು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಮತ್ತು ಎಮಿರೇಟ್ಸ್ ಕ್ರಿಕೆಟ್ ಮಂಡಳಿಯ (ಇಸಿಬಿ) ಮಾನ್ಯತೆಯನ್ನೂ ಹೊಂದಿದೆ. ಅಬುಧಾಬಿ ಟಿ10 ಕ್ರಿಕೆಟ್ ಟೂರ್ನಿಯ ಮೊದಲ ಆವೃತ್ತಿ 2017ರಲ್ಲಿ ನಡೆದಿತ್ತು. 2019ರ ಆವೃತ್ತಿಯಲ್ಲಿ ಯುವರಾಜ್ ಸಿಂಗ್ ಅವರನ್ನು ಒಳಗೊಂಡ ಮರಾಠ ಅರೇಬಿಯನ್ಸ್ ತಂಡ ಪ್ರಶಸ್ತಿ ಜಯಿಸಿತ್ತು. 2017ರಲ್ಲಿ ಕೇರಳ ಕಿಂಗ್ಸ್ ಮತ್ತು 2018ರಲ್ಲಿ ನಾರ್ಥರ್ನ್ ವಾರಿಯರ್ಸ್‌ ಚಾಂಪಿಯನ್ ಆಗಿತ್ತು.

    ಟೀಮ್​ ಇಂಡಿಯಾ ಕೋಚ್ ರವಿಶಾಸ್ತ್ರಿ ವಜಾಗೊಳಿಸಲು ಕ್ರಿಕೆಟ್ ಪ್ರೇಮಿಗಳ ಆಗ್ರಹ

    ಬಾಕ್ಸಿಂಗ್ ಡೇ ಟೆಸ್ಟ್‌ಗೆ ಟೀಮ್ ಇಂಡಿಯಾದಲ್ಲಿ ಏನೇನು ಬದಲಾವಣೆಯಾಗಲಿದೆ ಗೊತ್ತಾ?

    ದೆಹಲಿ ರಣಜಿ ತಂಡದ ತರಬೇತುದಾರರಾಗಿ ವಿರಾಟ್ ಕೊಹ್ಲಿ ಬಾಲ್ಯದ ಕೋಚ್..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts