ದೆಹಲಿ ರಣಜಿ ತಂಡದ ತರಬೇತುದಾರರಾಗಿ ವಿರಾಟ್ ಕೊಹ್ಲಿ ಬಾಲ್ಯದ ಕೋಚ್..!

ನವದೆಹಲಿ: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಬಾಲ್ಯದ ಕೋಚ್ ರಾಜ್‌ಕುಮಾರ್ ಶರ್ಮ, 2020-21ನೇ ಸಾಲಿನ ದೇಶೀಯ ಕ್ರಿಕೆಟ್‌ನ ಋತುವಿಗೆ ದೆಹಲಿ ರಣಜಿ ತಂಡದ ಕೋಚ್ ಆಗಿ ನೇಮಕಗೊಂಡಿದ್ದಾರೆ. ಮಾಜಿ ಆಟಗಾರನಾಗಿರುವ 55 ವರ್ಷದ ರಾಜ್‌ಕುಮಾರ್, ಕಳೆದ ವರ್ಷ ದೆಹಲಿ ತಂಡಕ್ಕೆ ಬೌಲಿಂಗ್ ಸಲಹೆಗಾರರಾಗಿದ್ದರು. ಈ ವೇಳೆ ಕೆಪಿ ಭಾಸ್ಕರ್ ತಂಡದ ಮುಖ್ಯಕೋಚ್ ಆಗಿದ್ದರು. ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತರೂ ಆಗಿರುವ ರಾಜ್‌ಕುಮಾರ್ ಶರ್ಮ, ಐಸಿಸಿ ಸಹಾಯಕ ಸದಸ್ಯತ್ವ ಹೊಂದಿರುವ ಮಾಲ್ಟಾ ತಂಡದ ಕೋಚ್ ಆಗಿದ್ದರು. ಇದನ್ನೂ … Continue reading ದೆಹಲಿ ರಣಜಿ ತಂಡದ ತರಬೇತುದಾರರಾಗಿ ವಿರಾಟ್ ಕೊಹ್ಲಿ ಬಾಲ್ಯದ ಕೋಚ್..!