More

    IPL 2024; ಲಖನೌ ತೊರೆದು ಮೆಂಟರ್​ ಆಗಿ ಕೆಕೆಆರ್​ಗೆ ಮರಳಿದ ಗೌತಮ್​ ಗಂಭೀರ್

    ಕಲ್ಕತ್ತಾ: ಭಾರತದ ಆತಿಥ್ಯದಲ್ಲಿ ನಡೆದ ಏಕದಿನ ವಿಶ್ವಕಪ್​ ಟೂರ್ನಿಯನ್ನು ಯಶಸ್ವಿಯಾಗಿ ಆಯೋಜಿಸಿದ ಬಿಸಿಸಿಐ ಇದೀಗ 2024ರಲ್ಲಿ ನಡೆಯುವ ಇಂಡಿಯನ್​ ಪ್ರೀಮಿಯರ್​ ಲೀಗ್​ಗೆ ತಯಾರಿ ಆರಂಭಿಸಿದೆ. ಮುಂಬರುವ ಆವೃತ್ತಿಗೆ ಈಗಾಗಲೇ ಆಟಗಾರರ ಟ್ರೇಡಿಂಗ್ ಪ್ರಕ್ರಿಯೆಯೂ ಆರಂಭವಾಗಿದೆ. ಇದರಡಿಯಲ್ಲಿ ಕೆಲವು ತಂಡಗಳು ಸಹ ತಮಗೆ ಅವಶ್ಯಕವಿರುವ ಆಟಗಾರರನ್ನು ಬೇರೆ ತಂಡದಿಂದ ತಮ್ಮ ತಂಡಕ್ಕೆ ಸೇರಿಸಿಕೊಳ್ಳುತ್ತಿದ್ದಾರೆ. 

    ಇನ್ನು ಕೆಲ ತಂಡಗಳು ಈ ಬಾರಿಯಾದರೂ ಟ್ರೋಫಿ ಗೆಲ್ಲಬೇಕೆಂಬ ನಿಟ್ಟಿನಲ್ಲಿ ತಯಾರಿ ನಡೆಸಲು ಶುರು ಮಾಡಿದ್ದು, ತಂಡದಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡತೊಡಗಿವೆ. ಕೋಚಿಂಗ್​ ಸಿಬ್ಬಂದಿ, ಆಡಳಿತ ಮಂಡಳಿ ಸೇರಿದಂತೆ ಹಲವು ಬದಲಾವಣೆಗಳನ್ನು ಮಾಡುತ್ತಿವೆ. ಇದೀಗ ಹೊಸ ವಿಚಾರ ಒಂದರಲ್ಲಿ ಲಖನೌ ಸೂಪರ್​ಜೈಂಟ್ಸ್​ ಮೆಂಟರ್​ ಆಗಿದ್ದ ಗೌತಮ್​ ಗಂಭೀರ್​ ಅವರು ತಂಡವನ್ನು ತೊರೆದಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

    ಇದನ್ನೂ ಓದಿ: ಚಿಕಿತ್ಸೆ ಹೆಸರಲ್ಲಿ ನವಜಾತ ಶಿಶುವಿಗೆ 40 ಕಡೆ ಬರೆ ಎಳೆದ ಪಾಪಿ

    ಲಖನೌ ಸೂಪರ್​ಜೈಂಟ್ಸ್​ ತೊರೆದಿರುವ ಗೌತಮ್​ ತಾವು ಈ ಹಿಂದೆ ಪ್ರತನಿಧಿಸುತ್ತಿದ್ದ ಕಲ್ಕತ್ತಾ ನೈಟ್​ರೈಡರ್ಸ್​ ತಂಡದ ಮೆಂಟರ್​ ಆಗಿ ಕೂಡಿಕೊಂಡಿದ್ದಾರೆ ಎಂಬ ವಿಚಾರ ಹೊರಬಿದ್ದಿದೆ. ಈ ಕುರಿತು ಸ್ವತಃ ಕೆಕೆಆರ್​ ಫ್ರಾಂಚೈಸಿ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದೆ. ಈ ಹಿಂದಿನಿಂದಲೂ ಗಂಭೀರ್ ಮತ್ತೆ ಕೆಕೆಆರ್ ತಂಡವನ್ನು ಸೇರಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಆದರೆ ಈ ಬಗ್ಗೆ ಫ್ರಾಂಚೈಸಿ ಆಗಲಿ ಗಂಭೀರ್ ಆಗಲಿ ಯಾವುದೇ ಮಾಹಿತಿಯನ್ನು ಹಂಚಿಕೊಂಡಿರಲಿಲ್ಲ. ಆದರೀಗ ಗಂಭೀರ್ ಕೆಕೆಆರ್ ಸೇರಿರುವುದು ಖಚಿತವಾಗಿದೆ.

    ಎರಡು ಬಾರಿ ಚಾಂಪಿಯನ್

    ಕಲ್ಕತ್ತಾ ನೈಟ್​ರೈಡರ್ಸ್​ ತಂಡವು 2012 ಹಾಗೂ 2014ರಲ್ಲಿ ಗೌತಮ್ ಗಂಭೀರ್ ನಾಯಕತ್ವದಲ್ಲಿ ಎರಡು ಬಾರಿ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿತ್ತು. ಒಂದು ರೀತಿಯಲ್ಲಿ ಗಂಭೀರ್ ತವರಿಗೆ ಮರಳಿದ್ದಾರೆ ಎಂದು ಹೇಳಬಹುದಾಗಿದೆ. ಆದರೆ, ಮುಂದಿನ ಐಪಿಎಲ್‌ನಲ್ಲಿ ಕೆಕೆಆರ್ ತಂಡವನ್ನು ಮುಂದಕ್ಕೆ ಕೊಂಡೊಯ್ಯುವಲ್ಲಿ ಮೆಂಟರ್ ಆಗಿ ಅವರು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತಾರೆ ಎಂಬುದು ಖದು ನೋಡಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts