More

    ‘ಪ್ಲಾಸ್ಟಿಕ್​ ಲಾವೊ ಖಾನಾ ಖಾವೊ’ ಒಂದು ಕೆಜಿ ಪ್ಲಾಸ್ಟಿಕ್​ ಕಸ ತಂದರೆ ಊಟ ಫ್ರೀ!

    ನವದೆಹಲಿ: ಪ್ಲಾಸ್ಟಿಕ್​ ಬಳಕೆಯನ್ನು ಸಂಪೂರ್ಣ ಪ್ರಮಾಣದಲ್ಲಿ ನಿಷೇಧಿಸುವುದು ಇನ್ನೂ ಸಾಧ್ಯವಾಗದ ಕೆಲಸ. ಎಲ್ಲೆಂದರಲ್ಲಿ ಪ್ಲಾಸ್ಟಿಕ್​ ಕಸ ಬೀಳುವುದನ್ನು ಇಂದಿಗೂ ನಾವು ನೋಡುತ್ತಲೇ ಇದ್ದೇವೆ. ಈ ಪ್ಲಾಸ್ಟಿಕ್​ ಕಸವನ್ನು ಕಡಿಮೆ ಮಾಡುವ ಸಲುವಾಗಿ ದಕ್ಷಿಣ ದೆಹಲಿ ಸಿವಿಕ್​ ಬಾಡಿ(ಎಸ್​ಡಿಎಂಸಿ) ಹೊಸ ಕ್ರಮವೊಂದನ್ನು ಕಂಡುಕೊಂಡಿದೆ. ಒಂದು ಕೆಜಿ ಪ್ಲಾಸ್ಟಿಕ್​ ಕಸ ತನ್ನಿ ಫ್ರೀಯಾಗಿ ಊಟ ಮಾಡಿ ಎನ್ನುವ ಮೂಲಕ ನಗರದ ಜನತೆಗೆ ಹೊಸ ಆಫರ್​ ನೀಡುತ್ತಿದೆ.

    ಈ ರೀತಿಯ ವಿಶೇಷ ಹೋಟೆಲ್​ಗಳನ್ನು ಎಸ್​ಡಿಎಂಸಿ ಜನವರಿ 23ರಿಂದ ಆರಂಭಿಸಿದೆ. ಗುರುವಾರದಂದು 23 ಹೋಟೆಲ್​ಗಳನ್ನು ಇದಕ್ಕೆ ಸೇರ್ಪಡಿಸಲಾಗಿದೆ. ನೀವು ನೀರು ಕುಡಿದು ಇಟ್ಟಿರುವ ವಾಟರ್​ ಬಾಟೆಲ್​ಗಳು, ಜ್ಯೂಸ್​ ಬಾಟೆಲ್​ಗಳು, ಪ್ಲಾಸ್ಟಿಕ್​ ಕವರ್​ಗಳಂತದ್ದನ್ನು ಇಲ್ಲಿಗೆ ತೆಗೆದುಕೊಂಡು ಹೋದರೆ ನಿಮಗೆ ಉಚಿತವಾಗಿ ಊಟ ಸಿಗಲಿದೆ. ಊಟ, ತಿಂಡಿ ಅಥವಾ ಉಪಹಾರದ ಕೂಪನ್​ನ್ನು ನೀವು ಪಡೆಯಬಹುದಾಗಿದೆ.

    “ಪ್ಲಾಸ್ಟಿಕ್ ಲಾವೊ ಖಾನಾ ಖಾವೊ” ಎಂಬ ವಿಶಿಷ್ಟ ಕ್ರಮವನ್ನು ಹೆಚ್ಚಿಸುವ ನಿಟ್ಟಿನಲ್ಲಿ, ದಕ್ಷಿಣ, ಮಧ್ಯ ಮತ್ತು ಪಶ್ಚಿಮ ವಲಯಗಳಲ್ಲಿ ಇನ್ನೂ 23 ಕಸ ಕೆಫೆಗಳನ್ನು ತೆರೆಯಲಾಗಿದೆ” ಎಂದು ಎಸ್‌ಡಿಎಂಸಿ ಹೇಳಿಕೆಯಲ್ಲಿ ತಿಳಿಸಿದೆ. ದಕ್ಷಿಣ ವಲಯದಲ್ಲಿ 12 ಕೆಫೆಗಳು, ಮಧ್ಯ ವಲಯದಲ್ಲಿ 10 ಕೆಫೆಗಳನ್ನು ತೆರೆಯಲಾಗಿದ್ದು, ಪಶ್ಚಿಮ ವಲಯದಲ್ಲಿ ಒಂದು ಕೆಫೆಯನ್ನು ತೆರೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್​)

    ಧಾರ್ಮಿಕ ಭಾವನೆಗೆ ಧಕ್ಕೆ ತರುವ ಕೆಲಸ ಯಾಕೆ ಮಾಡ್ತೀರಿ: ‘ತಾಂಡವ’ ತಂಡಕ್ಕೆ ಸುಪ್ರೀಂಕೋರ್ಟ್ ಪ್ರಶ್ನೆ

    ಹೋರಾಟಗಾರನಿಗೆ ಕಪಾಳ ಮೋಕ್ಷ ಮಾಡಿದ ರೈತ ಸಂಘಟನೆ ನಾಯಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts