More

    ಶ್ರಮ ಸಂಸ್ಕೃತಿಯ ಪ್ರತೀಕ ಗಾಣಿಗ ಸಮಾಜ

    ಗದಗ: ಶ್ರಮ ಸಂಸ್ಕೃತಿಯ ಪ್ರತೀಕವಾದ ಗಾಣಿಗ ಸಮಾಜದ ಕೊಡುಗೆ ಭಾರತ ದೇಶ ಹಾಗೂ ಕನ್ನಡ ನಾಡಿಗೆ ಅಪಾರವಾಗಿದೆ ಎಂದು ಡಾ. ಹೇಳಿದರು.

    ಸ್ಥಳೀಯ ವಿವೇಕಾನಂದ ನಗರದಲ್ಲಿ ಅಖಿಲ ಭಾರತ ಗಾಣಿಗ ವಿದ್ಯಾ ಹಾಗೂ ಉದ್ಯೋಗ ವರ್ಧಕ ಟ್ರಸ್ಟ್ ಆಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗಾಣಿಗ ಸಮುದಾಯ ಭವನ ಉದ್ಘಾಟನೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

    ಗಾಣಿಗ ಸಮಾಜದ ಸಂತರು, ಮಹನೀಯರು ಶ್ರಮ ಪಟ್ಟು ಸಮಾಜದ ಹೆಸರು ಶಾಶ್ವತಗೊಳಿಸಿದ್ದಾರೆ. ರಾಷ್ಟ್ರಸಂತರಾದ ಡಾ.ಸಿದ್ಧೇಶ್ವರ ಶ್ರೀಗಳು, ಅಭಿನವ ವಿಶ್ವೇಶ್ವರಯ್ಯ ಎಂದೇ ಪ್ರಸಿದ್ಧರಾದ ಎಸ್.ಜಿ. ಬಾಳೇಕುಂದರಗಿ ಅವರು ಅಪಾರ ಸಾಧನೆ ಮಾಡಿದ್ದಾರೆ. ದಾನವೀರ ಬಸರೀಗಿಡದ ವೀರಪ್ಪನವರ ದಾನದಿಂದ ಇಂದು ಗದಗ ನಗರದಲ್ಲಿ ವೀರೇಶ್ವರ ಪುಣ್ಯಾಶ್ರಮದ ನಿರ್ವಣವಾಗಿದೆ ಎಂದರು.

    ನೂತನ ಗಾಣಿಗ ಭವನ ಕೇವಲ ಮದುವೆ, ಮುಂಜಿವೆಗಳಿಗೆ ಬಳಕೆಯಾಗದೆ ಜನರಲ್ಲಿ ಸಂಸ್ಕೃತಿ, ನೈತಿಕ ಮೌಲ್ಯಗಳನ್ನು ಬೆಳೆಸುವ ಕೇಂದ್ರವಾಗಿ ಬೆಳೆಯಬೇಕು. ಕರ್ತವ್ಯ ನಿಷ್ಠೆ, ಪ್ರಾಮಾಣಿಕತೆ ಮತ್ತು ದಕ್ಷತೆಗೆ ಹೆಸರಾದ ಸಮಾಜದ ಮುಖಂಡರು ಶ್ರಮಪಟ್ಟು ಅತ್ಯಂತ ಸುಸಜ್ಜಿತ ಭವನ ನಿರ್ವಿುಸಿದ್ದಾರೆ ಎಂದರು.

    ಸಮುದಾಯ ಭವನ ನಿರ್ವಣದ ಜತೆಗೆ ಸಮಾಜದ ಮಕ್ಕಳಿಗೆ ಪ್ರೋತ್ಸಾಹ ನೀಡುತ್ತ ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ನೆರವಾಗುತ್ತಿರುವುದು ಶ್ಲಾಘನೀಯವಾಗಿದೆ. ಸಮುದಾಯದ ಜನರ ಸಾಮಾಜಿಕ, ಶೈಕ್ಷಣಿಕ ಅಭಿವೃದ್ಧಿಗೆ ಮುಖಂಡರು ಹತ್ತು ಹಲವು ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಅವರ ಎಲ್ಲ ಕಾರ್ಯಗಳು ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

    ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜ ಮಾತನಾಡಿ, ಗಾಣಿಗ ಸಮಾಜದ ಕೆಲಸ ಖುಷಿಯಾಗಿದ್ದು, ಅಲ್ಪ ಸಮಯದಲ್ಲಿ ಮಾದರಿ ಸಮುದಾಯ ಭವನ ನಿರ್ವಿುಸಿ ಉತ್ತಮ ಕೆಲಸ ಮಾಡಿದ್ದಾರೆ. ಮದುವೆ ಮತ್ತಿತರ ಶುಭ ಕಾರ್ಯಗಳು ಇಲ್ಲಿ ನಡೆಯಲಿ. ಸಮಾಜ ಬಾಂಧವರು ದಾನ ಧರ್ಮಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

    ಅಧ್ಯಾತ್ಮ ವಿದ್ಯಾಶ್ರಮದ ನೀಲಮ್ಮ ತಾಯಿ ಅಸುಂಡಿ ಮಾತನಾಡಿ, ವಿಜಯಪುರದ ವನಶ್ರೀ ಮಠದ ಜಯದೇವ ಶ್ರೀಗಳು ಗಾಣಿಗ ಸಮಾಜವನ್ನು ಮೇಲೆತ್ತಲು ಅವಿರತವಾಗಿ ಶ್ರಮಿಸಿದ್ದಾರೆ ಎಂದರು.

    ರಾಜ್ಯದಲ್ಲಿ ಗಾಣಿಗ ಸಮಾಜದ ಜನಸಂಖ್ಯೆ 45 ಲಕ್ಷ ಇದೆ. ಸಮಾಜ ನಿರೀಕ್ಷಿಸಿದಷ್ಟು ಬೆಳವಣಿಗೆ ಕಂಡಿಲ್ಲ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಸಮಾಜದವರು ಇನ್ನಷ್ಟು ಬೆಳೆಯಬೇಕು. ಸಮಾಜಕ್ಕೆ ಮಾರ್ಗದರ್ಶನ ಮಾಡಲು ಸಮರ್ಥ ಗುರುಗಳ ಅವಶ್ಯಕತೆ ಇದೆ ಎಂದರು.

    ಪ್ರಾಸ್ತಾವಿಕವಾಗಿ ಮಾತನಾಡಿದ ಸಮದಾಯ ಭವನ ಕಟ್ಟಡ ಕಾರ್ಯಕಾರಿ ಸಮಿತಿ ಅಧ್ಯಕ್ಷ ನಿಂಗಪ್ಪ ಕೆಂಗಾರ, ಗಾಣಿಗ ಸಮುದಾಯ ಭವನ ನಿರ್ವಿುಸಿದ ಜಾಗೆಯನ್ನು 1985ರಲ್ಲಿ ಮುಳಗುಂದ ಡಾಕ್ಟರ್, ಬಿ.ಎಸ್. ಬೆಳಹಾರ ಅವರು ಖರೀದಿಸಿದರು. 2015ರಲ್ಲಿ ಸಮುದಾಯ ನಿರ್ಮಾಣ ಆರಂಭಿಸಲಾಯಿತು. ಅನೇಕ ಜನಪ್ರತಿನಿಧಿಗಳು ಹಾಗೂ ಸಮಾಜ ಬಾಂಧವರ ನೆರವಿನಿಂದ 3.5 ಕೋಟಿ ರೂ. ವೆಚ್ಚದಲ್ಲಿ ಸಮುದಾಯ ಭವನ ನಿರ್ವಿುಸಲಾಗಿದೆ. ಊಟದ ಹಾಲ್​ಗೆ ಸಿ.ಬಿ. ಬಡ್ನಿ ಅವರು 25 ಲಕ್ಷ ರೂ. ನೀಡಿದ್ದಾರೆ ಎಂದರು.

    ತೋಂಟದಾರ್ಯ ನವದೆಹಲಿ ಶಾಖಾಮಠದ ಡಾ. ಮಹಾಂತ ದೇವರು ಮಾತನಾಡಿದರು.

    ಇದೇ ಸಂದರ್ಭದಲ್ಲಿ ಪಿಯುಸಿ, ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಜ್ಯೋತಿ ಸಿಂದಗಿ, ನಯನಾ ಹಡಗಲಿ, ಆಕಾಶ ಹಡಗಲಿ, ಸೌಮ್ಯ ಲಿಂಗನಗೌಡ್ರ, ಸಾಗರ ಮುಳಗುಂದ, ಶಾರದಾ ಜಂಗಣ್ಣವರ, ಗಿರಿಜಾ ಬಡಗಿ, ಅಶ್ವಿನಿ ಹಡಗಲಿ, ಮಲ್ಲಣ್ಣ ಹಳ್ಳಿ, ಮಧು ಉಮಚಗಿ, ಸುದೀಪ ಮಂಡಸೊಪ್ಪಿ, ವೀರೇಶ ಕರೆಕುಳದ, ನೀಲಮ್ಮ ಹನುಮಂತಗೌಡ್ರ ಸೇರಿ 20 ಪ್ರತಿಭಾವಂತರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

    ಟ್ರಸ್ಟ್ ಗೌರವಾಧ್ಯಕ್ಷ ಚಂದ್ರಶೇಖರಪ್ಪ ಬಡ್ನಿ, ಗಾಣಿಗ ಸಮಾಜದ ಜಿಲ್ಲಾಧ್ಯಕ್ಷ ಬಸವರಾಜ ಬಿಂಗಿ, ಗಿರಿಯಪ್ಪ ಅಸೂಟಿ, ಅಶೋಕ ಮಂದಾಲಿ, ಮುರುಘರಾಜೇಂದ್ರ ಬಡ್ನಿ ಮತ್ತಿತರರು ಇದ್ದರು. ತನುಶ್ರೀ, ತೇಜಶ್ರೀ ಪ್ರಾರ್ಥಿಸಿದರು.

    ಬೆಳಕು ಕೊಟ್ಟವರು: ಭೈರನಹಟ್ಟಿ ಶಾಂತಲಿಂಗ ಸ್ವಾಮೀಜಿ ಮಾತನಾಡಿ, ಸರ್ವ ಜನಾಂಗದವರಿಗೂ ಬೆಳಕು ಕೊಟ್ಟವರು ಗಾಣಿಗ ಸಮಾಜದವರು. ಬಸವಾದಿಶರಣರ ಕಾಲದಲ್ಲಿ ಕಣ್ಣಪ್ಪಯ್ಯ ಅವರು ಬಸವಣ್ಣನವರ ಮನೆಗೆ ದೀಪದ ಎಣ್ಣೆ ತಂದು ಕೊಡುತ್ತಿದ್ದರು. ಹೀಗಾಗಿ ಎಲ್ಲರಿಗೂ ಬೆಳಕು ಕೊಟ್ಟವರು ಗಾಣಿಗ ಸಮಾಜದವರು ಎಂದು ಹೆಮ್ಮೆಯಿಂದ ಹೇಳಬಹುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts