More

    ಮಾನವ ಹಕ್ಕುಗಳ ಅಸ್ತಿತ್ವ ಪ್ರಶ್ನಾರ್ಹ ಹಂತದಲ್ಲಿದೆ

    ರಾಯಚೂರು: ಹಾಡುಹಗಲೇ ಕಾಲೇಜು ಆವರಣದಲ್ಲಿ ವಿದ್ಯಾರ್ಥಿನಿಯ ಕೊಲೆಯಾಗುತ್ತದೆ ಎಂದರೆ ಮಾನವ ಹಕ್ಕುಗಳ ಅಸ್ತಿತ್ವ ಮತ್ತು ರಕ್ಷಣೆ ನಮ್ಮ ಸಮಾಜದಲ್ಲಿ ಇನ್ನೂ ಪ್ರಶ್ನಾರ್ಹ ಹಂತದಲ್ಲಿದೆ ಎನ್ನುವ ಅರ್ಥವಾಗುತ್ತದೆ ಎಂದು ಬಳ್ಳಾರಿ ಜಿಲ್ಲೆ ಮೋಕಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಧ್ಯಾಪಕಿ ಪ್ರೊ.ಬಿ.ಸರೋಜಾ ಹೇಳಿದರು.
    ನಗರದ ಹೊರವಲಯದ ರಾಯಚೂರು ವಿವಿಯ ಸಭಾಂಗಣದಲ್ಲಿ ಮಾನವ ಹಕ್ಕುಗಳ ಕುರಿತು ಶುಕ್ರವಾರ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ನಮ್ಮ ಕಾನೂನು ಸುವ್ಯವಸ್ಥೆ ನಮ್ಮ ಪಾತ್ರ ಏನೂ ಎಂಬುದನ್ನು ಚಿಂತನೆ ಮಾಡಬೇಕು ಎಂದರು.
    ಕಾನೂನು ನಮ್ಮನ್ನು ಸಂರಕ್ಷಣೆ ಮಾಡುವುದಕ್ಕೆ ಉಂಚೆ ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕಾದ ಸನ್ನಿವೇಶ ಕಂಡು ಬರುತ್ತಿದೆ. ಸರ್ಕಾರ, ಪೊಲೀಸರ ಮೂಲಕ ಪಾಲನೆಯಾಗಬೇಕಾದ ಸಾಮಾಜಿಕ ಸುವ್ಯವಸ್ಥೆ ಇನ್ನೂ ಚರ್ಚಾಸ್ಪದ ಸನ್ನಿವೇಶದಲ್ಲಿದೆ.
    ಮಾನವನಿಗೆ, ಆತನ ಅಸ್ತಿತ್ವಕ್ಕೆ, ಬದುಕಿಗೆ, ಸ್ವಾತಂತ್ರಕ್ಕೆ ಧಕ್ಕೆಯಾಗಿದೆಯೋ ಅಲ್ಲಿ ಮಾನವ ಹಕ್ಕುಗಳು ಚರ್ಚೆಗೆ ಬಂದಿವೆ. ಧರ್ಮಗಳಲ್ಲಿ ಕೂಡಾ ಮಾನವನ ನೆಮ್ಮದಿಯ ಬದುಕಿಗೆ ಭಂಗ ತರುವ ಸಂಗತಿಗಳ ಬಗ್ಗೆ ವಿರೋಧ ತೋರಲಾಗಿದೆ ಎಂದು ಪ್ರೊ.ಬಿ.ಸರೋಜಾ ಹೇಳಿದರು.
    ವಿಜ್ಞಾನ ವಿಭಾಗದ ಮುಖ್ಯಸ್ಥೆ ಪ್ರೊ.ಸಿ.ಎಸ್.ಪಾರ್ವತಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯಶಾಸ ವಿಭಾಗದ ಮುಖ್ಯಸ್ಥ ಪ್ರೊ.ಪಿ.ಭಾಸ್ಕರ, ವಿದ್ಯಾರ್ಥಿ ಕಲ್ಯಾಣಾಕಾರಿ ಡಾ.ಜಿ.ಎಸ್.ಬಿರಾದರ, ಉಪನ್ಯಾಸಕರಾದ ನಾಗವೇಣಿ ಸರೋದೆ, ಡಾ.ಪದ್ಮಜಾ ದೇಸಾಯಿ, ಡಾ.ನರಸಿಂಹ, ಡಾ.ವಿಜಯ ಸರೋದೆ, ಡಾ.ಶಿವರಾಜ ಯತಗಲ್, ಡಾ.ಶಿವಲೀಲ ಬಸನಗೌಡ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts