More

    ಗಂಗೂಲಿ ಅಧಿಕಾರಾವಧಿ ಮುಕ್ತಾಯವಾದರೂ, ಯಥಾಸ್ಥಿತಿ ಮುಂದುವರಿಕೆ

    ನವದೆಹಲಿ: ಲೋಧಾ ಸಮಿತಿ ಶಿಫಾರಸಿನಂತೆ ಬಿಸಿಸಿಐ ಸಂವಿಧಾನದಲ್ಲಿ ಅಳವಡಿಕೆಯಾಗಿರುವ ಕೂಲಿಂಗ್-ಆಫ್​ ನಿಯಮದ ಅನ್ವಯ ಅಧ್ಯಕ್ಷ ಸೌರವ್ ಗಂಗೂಲಿ ಅವರ ಅಧಿಕಾರಾವಧಿ ಸೋಮವಾರಕ್ಕೆ ಅಂತ್ಯಗೊಂಡಿದೆ. ಆದರೆ ಅವಧಿ ವಿಸ್ತರಣೆಯ ಬಗ್ಗೆ ಬಿಸಿಸಿಐ ಪದಾಧಿಕಾರಿಗಳು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯ ವಿಚಾರಣೆ ಇನ್ನೂ ನಡೆಯದಿರುವ ಕಾರಣ ಯಥಾಸ್ಥಿತಿ ಮುಂದುವರಿಯಲಿದೆ.

    ಕಳೆದ ವರ್ಷ ಅಕ್ಟೋಬರ್‌ನಲ್ಲಿ ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದರು. ಅದಕ್ಕೆ ಮುನ್ನ ಅವರು ಬಂಗಾಳ ಕ್ರಿಕೆಟ್ ಸಂಸ್ಥೆಯಲ್ಲಿ ಕಾರ್ಯದರ್ಶಿ ಮತ್ತು ಅಧ್ಯಕ್ಷರಾಗಿ ಅಧಿಕಾರದಲ್ಲಿದ್ದರು. ಕೂಲಿಂಗ್-ಆಫ್​ ನಿಯಮದ ಅನ್ವಯ ಸತತ 6 ವರ್ಷಗಳ (ತಲಾ 3 ವರ್ಷಗಳ ಸತತ 2 ಅವಧಿ) ನಂತರ ಕ್ರಿಕೆಟ್ ಆಡಳಿತದಲ್ಲಿ ಮುಂದುವರಿಯುವಂತಿಲ್ಲ. ಇದರ ಬಳಿಕ 3 ವರ್ಷಗಳ ಬಿಡುವು ಕಡ್ಡಾಯ. ಹೀಗಾಗಿ ಗಂಗೂಲಿ ಇನ್ನು 3 ವರ್ಷಗಳ ಕಾಲ ಭಾರತದ ಕ್ರಿಕೆಟ್ ಆಡಳಿತದಿಂದ ದೂರ ಉಳಿಯಬೇಕಾಗುತ್ತದೆ.

    ಇದನ್ನೂ ಓದಿ: ಇಂಗ್ಲೆಂಡ್ ಸರಣಿ ಜಯದ ಆಸೆಗೆ ಮಳೆ ಅಡಚಣೆ, 4ನೇ ದಿನದಾಟ ರದ್ದು

    ಕೂಲಿಂಗ್-ಆಫ್​ ನಿಯಮ ರದ್ದುಗೊಳಿಸಿ ಗಂಗೂಲಿ ಜತೆಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಷಾ ಅವರಿಗೂ ಅಧಿಕಾರವಾಧಿ ವಿಸ್ತರಿಸುವಂತೆ ಮೇ ಅಂತ್ಯದಲ್ಲೇ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಲಾಗಿದೆ. ಈ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ಕಳೆದ ವಾರ ಕೈಗೆತ್ತಿಕೊಳ್ಳಬೇಕಾಗಿದ್ದರೂ, 2 ವಾರಗಳ ನಂತರ ವಿಚಾರಣೆ ನಡೆಸುವುದಾಗಿ ತಿಳಿಸಿತ್ತು. ಹೀಗಾಗಿ ಸುಪ್ರೀಂ ಕೋರ್ಟ್ ವಿಚಾರಣೆ ಕೈಗೆತ್ತಿಕೊಳ್ಳುವವರೆಗೆ ಯಥಾಸ್ಥಿತಿ ಮುಂದುವರಿಯಲಿದೆ. ಗಂಗೂಲಿ ಬಳಗ 2023ರಲ್ಲಿ ಭಾರತದಲ್ಲಿ ನಡೆಯಲಿರುವ ವಿಶ್ವಕಪ್‌ವರೆಗೂ ಬಿಸಿಸಿಐ ಆಡಳಿತದಲ್ಲಿ ಮುಂದುವರಿಯಬೇಕೆಂದು ದಿಗ್ಗಜ ಸುನೀಲ್ ಗಾವಸ್ಕರ್ ಇತ್ತೀಚೆಗೆ ಅಭಿಪ್ರಾಯಪಟ್ಟಿದ್ದರು.
    ಬಿಸಿಸಿಐ ಅಧಿಕಾರದಲ್ಲಿ ಮುಂದುವರಿಯಲು ಸುಪ್ರೀಂ ಕೋರ್ಟ್ ಅವಕಾಶ ಕಲ್ಪಿಸದಿದ್ದರೆ 48 ವರ್ಷದ ಗಂಗೂಲಿ, ಐಸಿಸಿ ಚೇರ್ಮನ್ ಹುದ್ದೆಗೇರಲಿದ್ದಾರೆ ಎಂದೂ ಹೇಳಲಾಗುತ್ತಿದೆ. ಐಸಿಸಿ ಪದವಿಗೆ ಕೂಲಿಂಗ್-ಆಫ್​ ನಿಯಮ ಅನ್ವಯಿಸುವುದಿಲ್ಲ.

    ಎಲ್ಲಿಸ್ ಪೆರ‌್ರಿ ವಿಚ್ಛೇದನಕ್ಕೆ ಮುರಳಿ ವಿಜಯ್ ಕಾರಣವಂತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts