More

    ಆರ್‌ಟಿಒ-ಪೊಲೀಸರಿಗೆ ಹೆದರುವ ಅಗತ್ಯವಿಲ್ಲ: ಲಾರಿ ಮಾಲೀಕರ ಸಂಘದ ಅಧ್ಯಕ್ಷ ಸಿ.ನವೀನ್ ರೆಡ್ಡಿ ಹೇಳಿಕೆ

    ಗಂಗಾವತಿ: ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿಗಳನ್ನು ತಡೆಯುವ ಆರ್‌ಟಿಒ ಮತ್ತು ಪೊಲೀಸರಿಗೆ ಹೆದರುವ ಅಗತ್ಯವಿಲ್ಲ. ಕಿರುಕುಳ ನೀಡಿದರೆ ಸಂಘಟನಾತ್ಮಕವಾಗಿ ಎದುರಿಸೋಣ ಎಂದು ೆಡರೇಷನ್ ಆ್ ಕರ್ನಾಟಕ ಲಾರಿ ಓನರ್ಸ್‌ ಅಸೋಸಿಯೇಷನ್ ಅಧ್ಯಕ್ಷ ಸಿ.ನವೀನ್ ರೆಡ್ಡಿ ಹೇಳಿದರು.

    ಇಲ್ಲಿನ ವಿದ್ಯಾನಗರದಲ್ಲಿ ೆಡರೇಷನ್ ಆ್ ಕರ್ನಾಟಕ ಲಾರಿ ಓನರ್ಸ್‌ ಅಸೋಸಿಯೇಷನ್ ಭಾನುವಾರ ಏರ್ಪಡಿಸಿದ್ದ ರಾಜ್ಯಮಟ್ಟದ ಮಹಾಸಭೆ ಉದ್ಘಾಟಿಸಿ ಮಾತನಾಡಿದರು. ಸಂಘಟನೆ ದೊಡ್ಡದಾಗಿ ಬೆಳೆದಿದ್ದು, ಮಾಲೀಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸಭೆ ಮೂಲಕವೇ ಸರ್ಕಾರಕ್ಕೆ ಸಂದೇಶ ರವಾನಿಸಲಾಗುತ್ತಿದೆ. ಸಾಗಣೆ, ಇಂಧನ ಬೆಲೆ ಏರಿಕೆ ಸೇರಿ ಗೊಂದಲಗಳು ಸಾಕಷ್ಟಿದ್ದು, ಒಮ್ಮತದ ಅಭಿಪ್ರಾಯಕ್ಕೆ ಬಂದಾಗ ಮಾತ್ರ ಇತ್ಯರ್ಥ ಸಾಧ್ಯವಿದೆ. ಸಂಬಂಧಪಟ್ಟ ಸಚಿವರೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.

    ಪ್ರಧಾನ ಕಾರ್ಯದರ್ಶಿ ಜಿ.ನಾರಾಯಣ ಪ್ರಸಾದ ಮಾತನಾಡಿ, ಪ್ರತಿ ಜಿಲ್ಲೆಯಲ್ಲೂ ಮಹಾಸಭೆ ಆಯೋಜಿಸುವ ಮೂಲಕ ಸಂಘಟನೆ ಬಲಪಡಿಸಲಾಗುತ್ತಿದೆ. ಅವೈಜ್ಞಾನಿಕವಾಗಿ ಏರಿಕೆಯಾಗುತ್ತಿರುವ ಡೀಸೆಲ್ ಬೆಲೆ ನಿಯಂತ್ರಣಕ್ಕೆ ಸರ್ಕಾರ ಜತೆ ಸಂಪರ್ಕ ಸಾಧಿಸಲಾಗುವುದು. ಲೆಕ್ಕಪರಿಶೋಧಕರ ನೇಮಕ ಮೂಲಕ ೆಡರೇಷನ್ ಹಣಕಾಸಿನ ವಿಚಾರದಲ್ಲಿ ಪಾರದರ್ಶಕತೆ ಕಾಯ್ದುಕೊಂಡಿದ್ದು, ಜಿಲ್ಲಾವಾರು ಸಮಸ್ಯೆಗಳ ಇತ್ಯರ್ಥಕ್ಕೆ ಆದ್ಯತೆ ನೀಡಲಾಗಿದೆ ಎಂದರು. ಕಳೆದ ವರ್ಷ ಮಹಾಸಭೆಯಲ್ಲಿ ಕೈಗೊಂಡ ನಿರ್ಣಯಗಳನ್ನು ಅಂಗೀಕರಿಸಲಾಯಿತು.

    ಗೌರವಾಧ್ಯಕ್ಷ ಬಿ.ಚನ್ನರೆಡ್ಡಿ, ಉಪಾಧ್ಯಕ್ಷ ಸಿಂಗನಾಳ ಸುರೇಶ, ಜಿಲ್ಲಾಧ್ಯಕ್ಷ ಮಹ್ಮದ್ ಗೌಸ್ ಮುಲ್ಲಾ, ತಾಲೂಕು ಘಟಕದ ಗೌರವಾಧ್ಯಕ್ಷ ಕೆ.ಪಂಪಾಪತಿ ಪಾಟೀಲ್, ವಿವಿಧ ಜಿಲ್ಲೆಯ ಪದಾಧಿಕಾರಿಗಳಾದ ಮನ್ಸೂರ್ ಇಬ್ರಾಹಿಂ, ಕೆ.ಕೃಷ್ಣಮೂರ್ತಿ, ಎ.ನಾಗರಾಜ್, ಎನ್.ಶ್ರೀನಿವಾಸರಾವ್ ಇತರರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts