More

    ಮೀಸಲು ಪ್ರಮಾಣ ಪತ್ರ ರದ್ದುಪಡಿಸಲು ಬಲಿಜ, ಕಾಪು ಸಮಾಜದ ತಾಲೂಕು ಘಟಕದ ಸದಸ್ಯರ ಮನವಿ

    ಗಂಗಾವತಿ: ಲಿಂಗಾಯತ ಬಣಜಿಗ ಸಮುದಾಯಕ್ಕೆ 2ಎ ಮತ್ತು 3ಎ ಮೀಸಲು ಪ್ರಮಾಣ ಪತ್ರ ವಿತರಿಸದಂತೆ ಒತ್ತಾಯಿಸಿ ಬಲಿಜ, ಕಾಪು ಸಮಾಜದ ತಾಲೂಕು ಘಟಕದ ಸದಸ್ಯರು ನಗರದ ತಾಲೂಕು ಆಡಳಿತದ ಸೌಧದ ಮುಂದೆ ಬುಧವಾರ ಪ್ರತಿಭಟನೆ ನಡೆಸಿದರು.

    ತಾಲೂಕು ಘಟಕದ ಕಚೇರಿಯಿಂದ ಪ್ರತಿಭಟನೆ ರ‌್ಯಾಲಿ ಮೂಲಕ ಆಗಮಿಸಿ, ಬೇಡಿಕೆ ಮನವಿಯನ್ನು ಗ್ರೇಡ್ 2 ತಹಸೀಲ್ದಾರ್ ವಿ.ಎಚ್.ಹೊರಪೇಟಿಗೆ ಸಲ್ಲಿಸಿದರು. ನೇತೃತ್ವವಹಿಸಿದ್ದ ತಾಲೂಕು ಘಟಕದ ಅಧ್ಯಕ್ಷ ಬಿ.ರಮೇಶ ಮಾತನಾಡಿ, ರಾಜ್ಯದಲ್ಲಿ ಬಲಿಜ ಕಾಪು ಸಮುದಾಯಕ್ಕೆ 2ಎ ಮತ್ತು ಉದ್ಯೋಗಕ್ಕಾಗಿ 3ಎ ಮೀಸಲು ಪ್ರಮಾಣ ವಿತರಿಸಲಾಗುತ್ತಿದೆ. ಉಪಜಾತಿಗಳಾದ ಬಲಿಜ, ಬಣಜಿಗ, ಗೌಡಬಣಜಿಗ, ನಾಯ್ಡು, ತೆಲಗುಬಣಜಿಗ, ಶೆಟಿ ್ಟಬಣಜಿಗ, ಕಾಪು, ರೆಡ್ಡಿ ಬಲಿಜ ಬರುತ್ತಿದ್ದು, ಲಿಂಗಾಯತ ಬಣಜಿಗರು ಬರಲ್ಲ. ಇತ್ತೀಚಿನ ದಿನಗಳಲ್ಲಿ ಲಿಂಗಾಯತ ಬಣಜಿಗರು ಜಾತಿ ತೋರಿಸಿ ಪ್ರವರ್ಗ 2ಎ ಮತ್ತು 3ಎ ವರ್ಗಗಳ ಜಾತಿ ಪ್ರಮಾಣ ಪತ್ರ ಪಡೆದು ಸರ್ಕಾರದ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ. ಇದರಿಂದ ಅರ್ಹ ಸಮುದಾಯ ಸರ್ಕಾರದ ಸೌಲಭ್ಯಗಳಿಂದ ವಂಚಿತವಾಗುತ್ತಿದೆ. ಲಿಂಗಾಯತ ಬಣಜಿಗ ಇವರಿಗೆ 2ಎ ಮತ್ತು 3ಎ ಮೀಸಲು ನೀಡದಂತೆ ಸಿಎಂ ಅಧಿವೇಶನದಲ್ಲಿ ಚರ್ಚಿಸಿದ್ದರೂ, ಸ್ಥಳೀಯವಾಗಿ ವಿತರಿಸಲಾಗುತ್ತಿದೆ. ಇದುವರೆಗೂ ನೀಡಿದ ಪ್ರಮಾಣ ಪತ್ರ ರದ್ದುಪಡಿಸುವಂತೆ ಒತ್ತಾಯಿಸಿದರು.

    ಪದಾಧಿಕಾರಿಗಳಾದ ಬಿ. ಜಯರಾಂ, ಟಿ.ಜಿ.ಬಾಬು, ಬಿ. ಅಮಾತೆಪ್ಪ, ಟಿ. ವೆಂಕಟನಾರಾಯಣ, ಹರೀಶ ಸಣಾಪುರ, ಬಿ. ಪಂಪಣ್ಣ, ಬಿ. ಶರಣಪ್ಪ, ಮೆಟ್ರಿ ನಾಗಪ್ಪ, ಟಿ. ಚಂದ್ರಪ್ಪ, ರಾಘವೇಂದ್ರ ಇಸ್ಲಾಂಪುರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts