More

    ಐತಿಹ್ಯಗಳ ರಕ್ಷಣೆ ಆದ್ಯತೆಯಾಗಲಿ

    ಗಂಗಾವತಿ: ತಾಲೂಕಿನ ಹಿರೇಬೆಣಕಲ್ ಮೋರೆರ್ ಬೆಟ್ಟದಲ್ಲಿ ಐತಿಹಾಸಿಕ ಮೋರೆರ್ ಮನೆಗಳ ಸಂರಕ್ಷಣಾ ಸಂಘದಿಂದ ಸ್ವಚ್ಛತಾ ಅಭಿಯಾನ ಮತ್ತು ಅನ್ವೇಷಣಾ ಕಾರ್ಯಕ್ರಮ ಭಾನುವಾರ ಹಮ್ಮಿಕೊಳ್ಳಲಾಗಿತ್ತು.

    ಮೂರು ಸಾವಿರ ವರ್ಷಗಳ ಇತಿಹಾಸವಿರುವ ಬೆಟ್ಟದಲ್ಲಿ ಪ್ರಾಗೈತಿಹಾಸಿಕ ಕುರಹುಗಳಿದ್ದು, ಪ್ರವಾಸಿಗರಿಗೆ ನೆಚ್ಚಿನ ತಾಣವಾಗಿದೆ. ಭೇಟಿ ನೀಡುವ ಪ್ರವಾಸಿಗರು ಪ್ಲ್ಯಾಸ್ಟಿಕ್ ಇತರ ತ್ಯಾಜ್ಯಗಳನ್ನು ಹಾಕುತ್ತಿದ್ದು, ಸಂಘದ ಸದಸ್ಯರು ಒಂದುದಿನ ಸ್ವಚ್ಛತಾ ಅಭಿಯಾನ ನಡೆಸಿ ಶುಚಿಗೊಳಿಸಿದರು.

    ಅಧ್ಯಕ್ಷ ಚಂದ್ರಶೇಖರ್ ಹಿರೇಲಿಂಗಪ್ಪ ಕುಂಬಾರ ಮಾತನಾಡಿ, ಸಮಾನ ಮನಸ್ಕರೊಂದಿಗೆ ಸ್ವಚ್ಛತಾ ಅಭಿಯಾನ ಹಮ್ಮಿಕೊಂಡಿದ್ದು, ಎಲ್ಲೆಂದರಲ್ಲಿ ಬಿದಿದ್ದ ತ್ಯಾಜ್ಯವನ್ನು ಸಂಗ್ರಹಿಸಲಾಗಿದೆ.

    ಇದೇ ಸಂದರ್ಭದಲ್ಲಿ ಬೆಟ್ಟದ ಕಲ್ಲು ಬಂಡೆಗಳ ಮೇಲಿನ ವರ್ಣ ಚಿತ್ರ ಪತ್ತೆ ಹಚ್ಚಲಾಗಿದ್ದು, ಅಂದಿನ ಕಾಲದಲ್ಲಿ ಬಳಸುತ್ತಿದ್ದ ಮಣ್ಣಿನ ಒಡೆದ ಮಡಕೆಗಳ ಚೂರುಗಳನ್ನು ಸಂಗ್ರಹಿಸಲಾಗಿದೆ. ಸಂರಕ್ಷಿಸಬೇಕಿದ್ದ ಪ್ರಾಚ್ಯ ವಸ್ತು ಇಲಾಖೆ ನಿರ್ಲಕ್ಷ್ಯವಹಿಸುತ್ತಿದ್ದು, ಅಧಿಕಾರಿಗಳು ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕಿದೆ ಎಂದರು.

    ಪದಾಧಿಕಾರಿಗಳಾದ ವೆಂಕಟೇಶ, ನಾಗರಾಜ್, ಹನುಮೇಶ, ಶ್ರೀಕಾಂತ, ಮಹೇಶ, ಖಾಜಾಸಾಬ್, ರಾಜಾಸಾಬ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts