More

    ಹಬ್ಬದಲ್ಲಿ ಪರಸ್ಪರ ಸಹಕಾರ ಅಗತ್ಯ

    ಗಂಗಾವತಿ: ಶಾಂತಿ ಮತ್ತು ಸೌಹಾರ್ದತೆಯಿಂದ ಎಲ್ಲ ಧರ್ಮದ ಹಬ್ಬಗಳನ್ನು ಆಚರಿಸಲು ಸಮುದಾಯದ ನಡುವೆ ಸಾಮರಸ್ಯತೆ ಮುಖ್ಯ ಎಂದು ಡಿವೈಎಸ್ಪಿ ಸಿದ್ದಲಿಂಗಪ್ಪ ಗೌಡ ಪಾಟೀಲ್ ಹೇಳಿದರು.

    ನಗರದ ನಗರ ಠಾಣೆ ಆವರಣದಲ್ಲಿ ರಂಜಾನ್ ಹಬ್ಬದ ನಿಮಿತ್ತ ಭಾನುವಾರ ಹಮ್ಮಿಕೊಂಡಿದ್ದ ಸರ್ವಧರ್ಮದ ಶಾಂತಿ ಸಭೆಯಲ್ಲಿ ಮಾತನಾಡಿದರು. ಹಬ್ಬಗಳನ್ನು ಪ್ರತಿಯೊಬ್ಬರು ಸಂಭ್ರಮಿಸಬೇಕಿದ್ದು, ಸಹಕಾರ ಮನೋಭಾವನೆಯೊಂದಿಗೆ ಆಚರಣೆಗೆ ಆದ್ಯತೆ ನೀಡಬೇಕು. ಸಣ್ಣಪುಟ್ಟ ಕಾರಣಕ್ಕೆ ಸಂಘರ್ಷಗಳಿಗೆ ಅವಕಾಶ ನೀಡಬಾರದು. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಮನವಿ ಮಾಡಿದರು.

    ಹಬ್ಬದ ಆಚರಣೆ ಸಂದರ್ಭದಲ್ಲಿ ನಗರದ ಸ್ವಚ್ಛತೆ, ಕುಡಿವ ನೀರಿನ ಪೂರೈಕೆ, ಬಿಸಿಲಿನ ತಾಪ ನಿಯಂತ್ರಣಕ್ಕೆ ರಸ್ತೆಗೆ ನೀರು ಸಿಂಪಡಣೆ ಮಾಡುವುದು ಸೇರಿ ಮೂಲ ಸೌಕರ್ಯಗಳನ್ನು ಒದಗಿಸುವಂತೆ ವಿವಿಧ ಸಮುದಾಯದವರು ಮನವಿ ಮಾಡಿದರು.

    ಪರಸ್ಪರ ಹೊಂದಾಣಿಕೆಯೊಂದಿಗೆ ಹಬ್ಬಗಳನ್ನು ಆಚರಿಸಲಾಗುತ್ತಿದ್ದು, ಧರ್ಮ ಬೇರೆಯಾದರೂ ಬಾಂಧವ್ಯ ಮಾತ್ರ ಗಟ್ಟಿಯಾಗಿದೆ ಎಂದು ಎಪಿಎಂಸಿ ಮಾಜಿ ಸದಸ್ಯ ಜೋಗದ ನಾರಾಯಣಪ್ಪ ನಾಯಕ, ನಗರಸಭೆ ಸದಸ್ಯ ಶಾಮೀದ್ ಮನಿಯಾರ್ ಹೇಳಿದರು. ವಿವಿಧ ಸಮುದಾಯದವರಿಂದ ಅಭಿಪ್ರಾಯ ಸಂಗ್ರಹಿಸಲಾಯಿತು.

    ಗ್ರೇಡ್ 2 ತಹಸೀಲ್ದಾರ್ ಮಹಾಂತಗೌಡ ಗೌಡರ್, ನಗರಸಭೆ ವ್ಯವಸ್ಥಾಪಕ ಷಣ್ಮುಖಪ್ಪ, ನಗರ ಪಿಐ ವಾಸುಕುಮಾರ, ನಗರಸಭೆ ಸದಸ್ಯರಾದ ವಾಸುದೇವ ನವಲಿ, ಪರಶುರಾಂ ಮಡ್ಡೇರ್, ವಿವಿಧ ಸಮುದಾಯದ ಮುಖಂಡರಾದ ಸೈಯ್ಯದ್ ಜೀಲಾನಿ ಪಾಶಾ ಖಾದ್ರಿ, ದುರುಗಪ್ಪ ದಳಪತಿ, ಬಿಚ್ಚುಕತ್ತಿ ಅಲ್ತ್ಾ ಹುಸೇನ್, ಪಿ.ಲಕ್ಷ್ಮಣನಾಯ್ಕ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts