More

    ಚಿಕ್ಕಚೊಕ್ಕ ಗಣೇಶೋತ್ಸವ! ಆಯೋಜಕರು ಲಸಿಕೆ ಪಡೆದಿರಬೇಕು, ಜನಜಂಗುಳಿ ಸಲ್ಲ… ಇಲ್ಲಿವೆ, ಮಾರ್ಗಸೂಚಿಗಳು!

    ಬೆಂಗಳೂರು: ಸಾರ್ವಜನಿಕ ಗಣೇಶೋತ್ಸವ ನಡೆಸಲು ರಾಜ್ಯ ಸರ್ಕಾರ ಷರತ್ತುಬದ್ಧವಾದ ಅನುಮತಿ ನೀಡಿದೆ. ಈ ಬಾರಿ ಕರೊನಾ ಪರಿಸ್ಥಿತಿ ಕಡಿಮೆ ಇದೆ. ಆದರೆ ಜೊತೆಗೇ ಮೂರನೇ ಅಲೆಯ ಭೀತಿ ಕೂಡ ಇದೆ. ಆದ್ದರಿಂದ ಕರೊನಾ ಮುನ್ನೆಚ್ಚರಿಕೆಯ ಕ್ರಮಗಳನ್ನು ಪೂರ್ಣವಾಗಿ ಕೈಗೊಂಡು, ಸೀಮಿತ ಪ್ರಮಾಣದಲ್ಲಿ ಆಚರಣೆ ನಡೆಸಬೇಕು ಎಂದು ಕಂದಾಯ ಸಚಿವ ಆರ್​.ಅಶೋಕ್ ತಿಳಿಸಿದ್ದಾರೆ.

    ಇಂದು ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯ ನಂತರ ಗಣೇಶೋತ್ಸವ ನಡೆಸಲು ಪಾಲಿಸಬೇಕಾದ ಮಾರ್ಗಸೂಚಿಗಳ ಬಗ್ಗೆ ಅಶೋಕ್ ಮಾಹಿತಿ ನೀಡಿದರು. ಬೀದಿಬೀದಿಗಳಲ್ಲಿ ಗಣೇಶ ಕೂರಿಸುವ ಹಾಗಿಲ್ಲ. ಬೆಂಗಳೂರು ಸೇರಿದಂತೆ ನಗರ ಪ್ರದೇಶಗಳಲ್ಲಿ ಒಂದು ವಾರ್ಡ್​ಗೆ ಒಂದೇ ಗಣೇಶ ಮೂರ್ತಿ ಕೂರಿಸಲು ಅನುಮತಿ ನೀಡಲಾಗುವುದು. ತಾಲೂಕು ಕೇಂದ್ರ ಹಾಗೂ ಹಳ್ಳಿಗಳಲ್ಲಿ ಗಣೇಶ ಪ್ರತಿಷ್ಠಾಪನೆ ಸಂಬಂಧ ಸ್ಥಳೀಯ ಆಡಳಿತಕ್ಕೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಸೂಚಿಸಲಾಗುವುದು. ಗಡಿ ಜಿಲ್ಲೆಗಳಲ್ಲಿ ಕರೊನಾ ಪಾಸಿಟಿವಿಟಿ ಶೇ.2 ಕ್ಕಿಂತ ಕಡಿಮೆ ಇರುವ ಪ್ರದೇಶಗಳಲ್ಲಿ ಮಾತ್ರ ಅವಕಾಶ ನೀಡಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗುವುದು ಎಂದು ಹೇಳಿದರು.

    ಇದನ್ನೂ ಓದಿ: ಗಣಪತಿ ಬಪ್ಪ ಮೋರಯ! ರಾಜ್ಯದಲ್ಲಿ ಷರತ್ತುಬದ್ಧ ಗಣೇಶೋತ್ಸವಕ್ಕೆ ಅನುಮತಿ

    ಸಾರ್ವಜನಿಕ ಸ್ಥಳಗಳಲ್ಲಿ, ಜನರಿಗೆ ತೊಂದರೆಯಾಗದಂತಹ ಜಾಗದಲ್ಲಿ ಮಾತ್ರ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ನೀಡಲಾಗುವುದು. ಬಹಳ ಮುಖ್ಯವಾಗಿ, ಯಾವುದೇ ಶಾಲೆ ಅಥವಾ ಕಾಲೇಜುಗಳಲ್ಲಿ ಗಣೇಶ ಮೂರ್ತಿಯನ್ನು ಇಡುವ ಹಾಗಿಲ್ಲ. ಸಾರ್ವಜನಿಕವಾಗಿ ಗಣೇಶ ಪ್ರತಿಷ್ಠಾಪನೆ ಮಾಡುವ ಮುನ್ನ ಆಯಾ ಸಂಬಂಧಿತ ಗ್ರಾಮ ಪಂಚಾಯಿತಿ ಅಥವಾ ಪೊಲೀಸ್​ ಠಾಣೆಗಳಲ್ಲಿ ಅನುಮತಿ ಪಡೆದು ಪ್ರತಿಷ್ಠಾಪನೆ ಮಾಡಬೇಕು. ಸರ್ಕಾರ ವಿಧಿಸಿರುವ ಷರತ್ತುಗಳನ್ನು ಉಲ್ಲಂಘಿಸಿದರೆ ಅಂತಹವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು.

    ಪ್ರತಿಷ್ಠಾಪನೆಗೆ ನಿಯಮಗಳು: ಗಣೇಶೋತ್ಸವಕ್ಕೆ 50 ಬೈ 50 ಅಡಿ ಪಂಡಾಲ್​ ಹಾಕಬಹುದು. 4 ಅಡಿಗಿಂತ ಹೆಚ್ಚು ದೊಡ್ಡ ಮೂರ್ತಿ ಇಡುವ ಹಾಗಿಲ್ಲ. ಗರಿಷ್ಠ 5 ದಿನಗಳ ಕಾಲ ಗಣೇಶ ಪ್ರತಿಷ್ಠಾಪನೆಗೆ ಅವಕಾಶವಿರುತ್ತದೆ. ಗಣೇಶೋತ್ಸವಕ್ಕೆ 50 ಕ್ಕಿಂತ ಹೆಚ್ಚು ಜನರು ಸೇರುವ ಹಾಗಿಲ್ಲ. ಜನಜಂಗುಳಿ ತಡೆಯುವ ನಿಟ್ಟಿನಲ್ಲಿ ಮನೋರಂಜನಾ ಕಾರ್ಯಕ್ರಮಕ್ಕೆ ಅವಕಾಶವಿರುವುದಿಲ್ಲ. ಆರ್ಕೆಸ್ಟ್ರಾ, ನೃತ್ಯ ಕಾರ್ಯಕ್ರಮ, ಡಿಜೆ ಕಾರ್ಯಕ್ರಮಗಳನ್ನು ನಡೆಸುವ ಹಾಗಿಲ್ಲ.

    ಇದನ್ನೂ ಓದಿ: ಜಾವೆದ್​ ಅಕ್ತರ್​ ಹೇಳಿಕೆ ಬಗ್ಗೆ ಆಕ್ರೋಶ; ಸಂಘ ಪರಿವಾರದ ಕ್ಷಮೆ ಕೇಳಿ ಎಂದ ಬಿಜೆಪಿ ವಕ್ತಾರ

    ಸಾರ್ವಜನಿಕ ಗಣೇಶೋತ್ಸವಗಳು ನಡೆಯುವ ಸ್ಥಳಗಳಲ್ಲಿ ಕಡ್ಡಾಯವಾಗಿ ಕರೊನಾ ಲಸಿಕಾ ಅಭಿಯಾನ ನಡೆಸಬೇಕು. ಜಿಲ್ಲಾಡಳಿತ ಈ ಲಸಿಕಾ ಕಾರ್ಯಕ್ರಮ ಆಯೋಜಿಸಲು ಕ್ರಮ ತೆಗೆದುಕೊಳ್ಳಬೇಕು. ಹಾಗೂ ಗಣೇಶ ಪ್ರತಿಷ್ಠಾಪನೆಗೆ ಮುಂದಾಗುವ ಜನರು ಅಥವಾ ಗಣೇಶ ಪ್ರತಿಷ್ಠಾಪನಾ ಸಮಿತಿಗಳ ಸದಸ್ಯರು ಕಡ್ಡಾಯವಾಗಿ ಕರೊನಾ ಲಸಿಕೆ ಪಡೆದಿರಬೇಕು. ಇಲ್ಲವೇ ಸ್ಥಳದಲ್ಲೇ ಪಡೆಯಬೇಕು.

    ವಿಸರ್ಜನಾ ಮೆರವಣಿಗೆ ಇಲ್ಲ: ಬಿಬಿಎಂಪಿ ಮತ್ತು ಜಿಲ್ಲಾಡಳಿತ ಹೇಳಿದ ಕಡೆ ವಿಸರ್ಜನೆಗೆ ಅವಕಾಶವಿರುತ್ತದೆ. ವಿಸರ್ಜನೆಗಾಗಿ ಜನ ಸೇರಿಸಿ ಮೆರವಣಿಗೆ ಮಾಡುವ ಹಾಗಿಲ್ಲ. ಸೀಮಿತ ಸಂಖ್ಯೆಯಲ್ಲಿ ಗಣಪತಿಯನ್ನು ವಿಸರ್ಜನಾ ಸ್ಥಳಕ್ಕೆ ಒಯ್ಯಬೇಕು. ಗ್ರಾಮಾಂತರ ಪ್ರದೇಶಗಳಲ್ಲಿ ಕೆರೆಗಳಲ್ಲಿ ಗಣಪತಿ ವಿಸರ್ಜನೆ ಮಾಡಬಹುದು.

    ಫೋಟೋ ಪೋಸ್​ ಕೊಟ್ಟು ಹೊರಟೇಬಿಟ್ಟ ಹಣಕಾಸು ಸಚಿವೆ!

    ಪೂರ್ಣ ಲಸಿಕೀಕರಣದಲ್ಲಿ ಕರ್ನಾಟಕ 6ನೇ ಸ್ಥಾನದಲ್ಲಿದೆ! ಎರಡೂ ಡೋಸ್​ ಪಡೆದ ಜನರೆಷ್ಟು?

    ಒಂದೇ ಆಟದಲ್ಲಿ ಭಾರತಕ್ಕೆ ಎರಡು ಪದಕ! ಚಿನ್ನ ಗೆದ್ದ ಪ್ರಮೋದ್​ ಭಗತ್​​… ಕಂಚು ಗೆದ್ದ ಮನೋಜ್​ ಸರ್ಕಾರ್​!​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts