More

    Video: ಗಣಪತಿ ಹಬ್ಬವನ್ನ ರಾಗಿಣಿ ಹೀಗೆ ಆಚರಿಸಿದರು ನೋಡಿ …

    ‘ಈ ಹಿಂದೆ ನಮ್ಮ ಮನೆಯಲ್ಲಿ ಮೂರು ದಿನ ಗೌರಿ-ಗಣೇಶನನ್ನು ಕೂರಿಸುತ್ತಿದ್ದೆವು. ಈ ವರ್ಷ ಕಾರಣಾಂತರಗಳಿಂದ ಮಿಸ್ ಆಗುತ್ತಿದೆ …’

    ಇದನ್ನೂ ಓದಿ: ‘ಆಲಿಯಾ ಬದ್ಲಾಗಲ್ಲ …’ ಎಂದ ರಾಜಮೌಳಿ ನಾಯಕಿ ಹುಡುಕ್ತಿರೋದು ಏಕೆ?

    ಹಾಗಂತ ಎರಡು ದಿನಗಳ ಹಿಂದಷ್ಟೇ ನಟಿ ರಾಗಿಣಿ ಹೇಳಿಕೊಂಡಿದ್ದರು. ಈ ಬಾರಿಯ ಗಣೇಶ ಚತುರ್ಥಿ ಹೇಗಿರುತ್ತದೆ ಎಂದು ಕೇಳಿದಾಗ ಅವರು ಹೀಗೆ ಹೇಳಿದ್ದರು. ಹಾಗಂತ ಪೂಜೆ ನಿಲ್ಲುವುದಿಲ್ಲ ಎಂದು ಸಹ ಹೇಳಿದ್ದರು.

    ‘ಹಾಗಂತ ಪೂಜೆ ನಿಲ್ಲುವುದಿಲ್ಲ. ಅಮ್ಮ ಗಣೇಶನ ಭಕ್ತೆ. 30ಕ್ಕೂ ಹೆಚ್ಚು ಗಣೇಶನ ಮೂರ್ತಿಗಳು ಮನೆಯಲ್ಲಿವೆ. ಈ ಬಾರಿ ನಾನೇ ವಿಶೇಷ

    ಪೂಜೆ ಮಾಡಲಿದ್ದೇನೆ’ ಎಂದು ರಾಗಿಣಿ ಹೇಳಿಕೊಂಡಿದ್ದರು.

    Video – ರಾಗಿಣಿ ಮನೆಯಲ್ಲಿ ಗಣಪತಿ ಹಬ್ಬ …

    ಗಣಪತಿ ಹಬ್ಬ ಈ ಬಾರಿ ಸರಳವಾಗಿ ಮುಗಿದಿದೆ. ಈ ಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸುವ ಸ್ಯಾಂಡಲ್​ವುಡ್​ ತಾರೆಯರು, ಈ ಬಾರಿ ಕರೊನಾ ಹಾವಳಿಯಿಂದ ಚಿಕ್ಕದಾಗಿ, ಚೊಕ್ಕದಾಗಿ ಆಚರಿಸಿದ್ದಾರೆ. ರಾಗಿಣಿ ಮನೆಯಲ್ಲಿ ಗಣಪತಿ ಹಬ್ಬ ಹೇಗೆ ಆಚರಿಸಲಾಯಿತೆಂದು, ಅವರೇ ಸೋಷಿಯಲ್​ ಮೀಡಿಯಾದಲ್ಲಿ ಒಂದು ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ. ಆ ವಿಡಿಯೋ ನಿಮಗಾಗಿ …

    Posted by Vijayavani on Sunday, August 23, 2020

    ಇದನ್ನೂ ಓದಿ: ಎಸ್​ಪಿಬಿ ಆರೋಗ್ಯ ಸ್ಥಿರ; ಆಸ್ಪತ್ರೆಯಿಂದ ಪ್ರಕಟಣೆ

    ಅದರಂತೆ ಶನಿವಾರ ತಮ್ಮ ಮನೆಯಲ್ಲಿ ನಡೆದ ಗಣೇಶ ಪೂಜೆಯ ವಿಡಿಯೋವೊಂದನ್ನು ರಾಗಿಣಿ ತಮ್ಮ ಸೋಷಿಯಲ್​ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ. ಈ ಮೂಲಕ ಈ ಬಾರಿಯ ಗಣೇಶ ಚತುರ್ಥಿ ಹಬ್ಬವು ತಮ್ಮ ಮನೆಯಲ್ಲಿ ಹೇಗಿತ್ತು ಎಂದು ತೋರಿಸಿದ್ದಾರೆ.

    ಇನ್ಮುಂದೆ ಹೊಸ ಇನ್ನಿಂಗ್ಸ್​ ಆಡ್ತಾರಂತೆ ಸೋನು … ಏನದು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts