More

    ಟೈಗರ್ ಶ್ರಾಫ್​ ‘ಗಣಪತ್​’ ಪಾರ್ಟ್ 1 ಫಸ್ಟ್​ ಲುಕ್​ ಬಹಿರಂಗ

    ಮುಂಬೈ: ಬಾಲಿವುಡ್​ ನಟ ಟೈಗರ್ ಶ್ರಾಫ್​ ಇದೀಗ ಗಣಪತ್​ ಆಗಲು ಹೊರಟಿದ್ದಾರೆ. ಶೀರ್ಷಿಕೆ ಮೂಲಕವೇ ಸದ್ದು ಮಾಡುತ್ತಿರುವ ಈ ಸಿನಿಮಾ ಇದೀಗ ಫಸ್ಟ್ ಲುಕ್ ಬಿಡುಗಡೆ ಮಾಡಿಕೊಂಡು ಕುತೂಹಲಕ್ಕೆ ಒಗ್ಗರಣೆ ಹಾಕಿದೆ.

    ಇದನ್ನೂ ಓದಿ: ಈ ಚಿತ್ರಗಳನ್ನು ಚಿತ್ರಮಂದಿರಗಳಲ್ಲಿ ಪುಕ್ಕಟ್ಟೆಯಾಗಿ ನೋಡಬಹುದು …

    ಈಗಾಗಲೇ ಭಾಗಿ, ಭಾಗಿ 2, ಭಾಗಿ 3 ಚಿತ್ರಗಳಲ್ಲಿ ಟೈಗರ್​ ನಟಿಸಿದ್ದರು. ಅತ್ಯಾಕರ್ಷಕ ಆ್ಯಕ್ಷನ್​ ಸನ್ನಿವೇಶಗಳ ಮೂಲಕವೇ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದರು. ಇದೀಗ ಗಣಪತ್ ಶೀರ್ಷಿಕೆ ಸರಣಿ ಸಿನಿಮಾಗಳನ್ನು ಟೈಗರ್​ ಆಯ್ದುಕೊಂಡಿದ್ದಾರೆ.

    ಟೈಗರ್ ಶ್ರಾಫ್​ 'ಗಣಪತ್​' ಪಾರ್ಟ್ 1 ಫಸ್ಟ್​ ಲುಕ್​ ಬಹಿರಂಗ

    ಮೊದಲಾರ್ಥವಾಗಿ ಗಣಪತ್ ಪಾರ್ಟ್​ 1 ಚಿತ್ರದ ಫಸ್ಟ್ ಲುಕ್​ ಬಿಡುಗಡೆಯಾಗಿದ್ದು, ಮಾಸ್​ ಅವತಾರದಲ್ಲಿ ಟೈಗರ್​ ಎದುರಾಗಿದ್ದಾರೆ. ಸ್ನೇಹಿತರಿಗೆ ಸ್ನೇಹಿತಮ ಶತ್ರುಗಳಿಗೆ ಅವರಪ್ಪ.. ಎಂಬ ಕ್ಯಾಪ್ಶನ್​ ಅಡಿಯಲ್ಲಿ ಬರೆದುಕೊಂಡು ಚಿತ್ರದ ಲುಕ್​ಅನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡಿದ್ದಾರೆ.

    ಇದನ್ನೂ ಓದಿ: ಆರ್​ಆರ್​’ ಚಿತ್ರಕ್ಕಾಗಿ ಬೃಹತ್​ ಫೈಟ್​ ಚಿತ್ರೀಕರಣ

    ಈ ಹಿಂದೆ ಹೃತಿಕ್ ರೋಷನ್ ನಾಯಕತ್ವದ ಸೂಪರ್ 30 ಚಿತ್ರ ನಿರ್ದೇಶನ ಮಾಡಿದ್ದ ವಿಕಾಸ್ ಬಹ್ಲ, ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ವಶು ಭಗ್ನಾನಿ ಮತ್ತು ಪೂಜಾ ಎಂಟರ್​ಟೈನ್​ಮೆಂಟ್ ಬ್ಯಾನರ್​ ಅಡಿಯಲ್ಲಿ ಚಿತ್ರ ನಿರ್ಮಾಣವಾಗುತ್ತಿದೆ. 2021ರ ಮಧ್ಯ ಭಾಗದಿಂದ ಶೂಟಿಂಗ್​ ಶುರುವಾಗಲಿದ್ದು, 2022ಕ್ಕೆ ಸಿನಿಮಾ ಬಿಡುಗಡೆ ಆಗಲಿದೆ. (ಏಜೆನ್ಸೀಸ್​)

    ಶಾರೂಖ್​ ಖಾನ್​ಗೆ ಆಕ್ಷನ್​-ಕಟ್​ ಹೇಳಿದ ಆಮೀರ್​ ಖಾನ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts