More

    ಮತ್ತೆ ಟೈಗರ್ ಜತೆಯಾದ ಕತ್ರಿನಾ ಕೈಫ್​

    ಬಾಲಿವುಡ್​ನ ಜನಪ್ರಿಯ ಫ್ರಾಂಚೈಸಿಗಳ ಪೈಕಿ ಸಲ್ಮಾನ್ ಖಾನ್ ಅಭಿನಯದ ‘ಟೈಗರ್’ ಸಿರೀಸ್ ಸಹ ಒಂದು. ಈಗಾಗಲೇ ಈ ಸರಣಿಯಲ್ಲಿ ಎರಡು ಸಿನಿಮಾಗಳು ಬಂದಿವೆ. ಮೊದಲನೆಯದು ‘ಏಕ್ ಥಾ ಟೈಗರ್’, ಎರಡನೆಯದು ‘ಟೈಗರ್ ಜಿಂದಾ ಹೈ’. ಇದೀಗ ಮೂರನೇ ‘ಟೈಗರ್’ ಚಿತ್ರದ ಶೂಟಿಂಗ್​ಗೆ ಸಿದ್ಧತೆ ಶುರುವಾಗಿದೆ. ಅದಕ್ಕಾಗಿ ಮುಂಬೈನಲ್ಲಿ ಅದ್ದೂರಿ ಸೆಟ್ ನಿರ್ಮಾಣ ಮಾಡಲಾಗುತ್ತಿದ್ದು, ಮಾರ್ಚ್​ನಲ್ಲಿ ನಡೆಯಲಿರುವ ಶೂಟಿಂಗ್​ನಲ್ಲಿ ಸಲ್ಮಾನ್ ಜತೆ ಕತ್ರಿನಾ ಕೈಫ್ ಸಹ ಭಾಗವಹಿಸಲಿದ್ದಾರೆ.

    ಈ ಮೊದಲು ಅರಬ್ ನಾಡಿನ ಟರ್ಕಿ, ಇಸ್ತಾಂಬುಲ್, ದುಬೈ ಸೇರಿ ಹಲವೆಡೆ ಚಿತ್ರೀಕರಣ ನಡೆಯಲಿದೆ ಎನ್ನಲಾಗಿತ್ತು. ಇದೀಗ ಅದರಲ್ಲಿ ಮಹತ್ವದ ಬದಲಾವಣೆ ಆಗಿದೆ. ಮಾರ್ಚ್ ಪೂರ್ತಿ ಮುಂಬೈನಲ್ಲಿಯೇ ಚಿತ್ರೀಕರಣ ನಡೆಯಲಿದೆಯಂತೆ. ಜೂನ್​ನಲ್ಲಿ ಯುಎಇ ಬದಲು ಯೂರೋಪ್​ನತ್ತ ಇಡೀ ತಂಡ ಹಾರಲಿದೆ ಎನ್ನಲಾಗುತ್ತಿದೆ. ಈ ಮೊದಲ ಎರಡು ಸರಣಿಗಳಲ್ಲಿ ನಾಯಕಿಯಾಗಿದ್ದ ಕತ್ರಿನಾ, ಇಲ್ಲಿಯೂ ಮುಂದುವರಿಯಲಿದ್ದಾರೆ. 2019ರಲ್ಲಿ ತೆರೆಕಂಡಿದ್ದ ‘ಭಾರತ್’ ಚಿತ್ರದಲ್ಲಿ ಸಲ್ಮಾನ್ ಜತೆ ಕೊನೆಯದಾಗಿ ನಟಿಸಿದ್ದ ಕತ್ರಿನಾ, ಈಗ ಎರಡು ವರ್ಷಗಳ ನಂತರ ಮತ್ತೊಮ್ಮೆ ಅವರ ಜತೆ ತೆರೆಹಂಚಿಕೊಳ್ಳಲಿದ್ದಾರೆ. ಯಶ್​ರಾಜ್ ಬ್ಯಾನರ್​ನಲ್ಲಿ ನಿರ್ವಣವಾಗಲಿರುವ ‘ಟೈಗರ್ 3’ ಚಿತ್ರವನ್ನು ಮನೀಷ್ ಶರ್ಮಾ ನಿರ್ದೇಶಿಸಲಿದ್ದಾರೆ. ಸದ್ಯ ಕತ್ರಿನಾ, ‘ಫೋನ್ ಭೂತ್’ ಚಿತ್ರದ ಶೂಟಿಂಗ್​ನಲ್ಲಿದ್ದಾರೆ. ಇತ್ತ ‘ಅಂತಿಮ್ ದಿ ಫೈನಲ್ ಟ್ರೂಥ್’ ಚಿತ್ರದ ಚಿತ್ರೀಕರಣದಲ್ಲಿರುವ ಸಲ್ಮಾನ್ ಖಾನ್, ಇದು ಮುಗಿಯುತ್ತಿದ್ದಂತೆ ಇಬ್ಬರೂ ‘ಟೈಗರ್ 3’ ತಂಡ ಸೇರಿಕೊಳ್ಳಲಿದ್ದಾರೆ. -ಏಜೆನ್ಸೀಸ್

    ನ್ಯೂಯಾರ್ಕ್​ನಲ್ಲಿ ಶಾರುಖ್​ ಖಾನ್​ ಮಗಳಿರುವ ಡ್ರೀಮ್​ ಅಪಾರ್ಟ್​ಮೆಂಟ್​ ಹೇಗಿದೆ ಗೊತ್ತಾ? ಫೋಟೋ ಇಲ್ಲಿದೆ ನೋಡಿ..

    ಮೋಸ ಮಾಡಿದ್ರಾ ನಟಿ ಸನ್ನಿ ಲಿಯೋನ್​?; ದೂರು ದಾಖಲಾಗುತ್ತಿದ್ದಂತೆ ನಿರೀಕ್ಷಣಾ ಜಾಮೀನಿಗೆ ಅರ್ಜಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts