More

    ದೇವನಹಳ್ಳಿಯಲ್ಲಿ ಜಿ20 ಶೃಂಗ ಸಭೆ; ಯಾರೆಲ್ಲ ಬರಲಿದ್ದಾರೆ..?

    ಬೆಂಗಳೂರು: 2023ರ ಜಿ20 ಶೃಂಗ ಸಭೆಯ ಅಧ್ಯಕ್ಷತೆಯನ್ನು ಭಾರತ ವಹಿಸಿಕೊಂಡಿದ್ದು ಇಂಡೊನೇಷ್ಯಾದಿಂದ ಸಾಂಕೇತಿಕವಾಗಿ ಅಧ್ಯಕ್ಷತೆಯನ್ನು ಪ್ರಧಾನಿ ಮೋದಿ ಪಡೆದುಕೊಂಡಿದ್ದಾರೆ.

    ಈ ಹಿನ್ನೆಲೆ ದೇಶಾದ್ಯಂತ ವಿವಿಧ ಕಡೆಗಳಲ್ಲಿ ಶೃಂಗ ಸಭೆಗಳನ್ನು ಸರ್ಕಾರ ಆಯೋಜಿಸಿದ್ದು ಅದರಲ್ಲಿ ಬೆಂಗಳೂರಿನ ದೇವನಹಳ್ಳಿ ಕೂಡ ಸೇರಿದೆ. ದೇವನಹಳ್ಳಿಯ ಜೆ.ಡಬ್ಲ್ಯೂ ಹೊಟೆಲ್ ಬಳಿ ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಶೃಂಗ ಸಭೆ ಬಗ್ಗೆ ಮಾಹಿತಿ ನೀಡಿದ್ದಾರೆ.

    ’13 ರಿಂದ 17 ರ ವರೆಗು 2 ಸಭೆಗಳು ಹೋಟೆಲ್ ನಲ್ಲಿ ನಡೆಯಲಿದ್ದು ಯುರೋಪಿಯನ್ ಯೂನಿಯನ್​ನ 40 ದೇಶಗಳ ಗಣ್ಯರು ಆಗಮಿಸುತ್ತಿದ್ದಾರೆ. ಎಲ್ಲಾ ರೀತಿಯ ಪೊಲೀಸ್ ಬಂದೋ ಬಸ್ತ್ ಮಾಡಿಕೊಂಡಿದ್ದೇವೆ. ಒಟ್ಟು 700 ಕ್ಕೂ ಅಧಿಕ ಪೊಲೀಸರನ್ನ ಭದ್ರತೆಗೆ ನಿಯೋಜನೆ ಮಾಡಿಕೊಳ್ಳಲಾಗಿದೆ. ಹೋಟೆಲ್ ಸುತ್ತಾಮುತ್ತ 6 ಕಡೆ ಚೆಕ್ ಪೋಸ್ಟಗಳನ್ನ‌ ಮಾಡಲಾಗಿದೆ.

    ನಂದಿ ಬೆಟ್ಟಕ್ಕೆ ಹೋಗುವವರಿಗೆ ಹೋಟೆಲ್ ಮುಂಭಾಗ ನಿರ್ಬಂಧಿಸಲಾಗಿದೆ. ನಂದಿಕ್ರಾಸ್ ನಿಂದ ನಂದಿಬೆಟ್ಟಕ್ಕೆ ತೆರಳಲು ಅವಕಾಶ ನೀಡಲಾಗಿದೆ. ಜೆ.ಡಬ್ಲ್ಯೂ ಹೋಟೆಲ್ ನ ಎಲ್ಲಾ ಕೊಠಡಿಗಳನ್ನ ಜಿ20 ಗಣ್ಯರಿಗಾಗಿ ಬುಕ್ ಮಾಡಲಾಗಿದ್ದು ಬೇರೆ ಗ್ರಾಹಕರಿಗೆ ಹೋಟೆಲ್ ನಲ್ಲಿ 13 ರಿಂದ 17 ರ ವರೆಗೂ ಅವಕಾಶವಿಲ್ಲ’ ಎಂದು ದೇವನಹಳ್ಳಿ ಬಳಿ ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ್ ಬಾಲದಂಡಿ ಸಂಪೂರ್ಣ ಮಾಹಿತಿ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts