More

    ಖಾಸಗಿ ಜೀವನದಲ್ಲಿಯೂ ಮೂಗು ತೂರಿಸಿದ ಸರ್ಕಾರದ ವಿರುದ್ಧ ಚೀನಾ ಜನತೆಯ ಆಕ್ರೋಶ!

    ಬೀಜಿಂಗ್​: ಚೀನಾ ಸರ್ಕಾರವು ಹೊಸ ಕಾನೂನೊಂದನ್ನು ಜಾರಿಗೆ ತಂದಿದ್ದು, ಅದರನ್ವಯ ವಿಚ್ಛೇದನ ಬಯಸುವ ದಂಪತಿ 30 ದಿನಗಳ ಕೂಲಿಂಗ್​ ಆಫ್​ ಪೀರಿಯಡ್ (ಭಿನ್ನಾಭಿಪ್ರಾಯ ಬಗೆಹರಿಸುವ ಸಮಯ) ಪೂರ್ಣಗೊಳಿಸಬೇಕಿದೆ. ಈ ಕಾನೂನು ಚೀನಾ ಜನತೆಯ ಕೆಂಗಣ್ಣಿಗೆ ಗುರಿಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳು ವ್ಯಕ್ತವಾಗಿವೆ.

    ಇದನ್ನೂ ಓದಿ: VIDEO| ದೇಶದ ಅರ್ಧಕ್ಕರ್ಧ ಜನ್ರಿಗೆ ಕರೊನಾ ಗ್ಯಾರೆಂಟಿ ಎನ್ನುತ್ತಿದೆ ವರದಿ: ಆದ್ರೂ ಗುಡ್​ ನ್ಯೂಸ್​ ಸಹ ಇದೆ!

    ವಿವಾಹಿತ ದಂಪತಿಯ ವಿಚ್ಛೇದನ ಮನವಿಯು ಅಧಿಕೃತವಾಗಿ ಅನುಮೋದನೆ ಪಡೆದುಕೊಳ್ಳುವವರೆಗೂ ಕಾಯಲೇಬೇಕೆಂಬುದು ಹೊಸ ಕಾನೂನಿನ ನಿಯಮವಾಗಿದೆ. ಇದರಿಂದ ದಿನೇ ದಿನೇ ಹೆಚ್ಚಾಗುತ್ತಿರುವ ವಿಚ್ಛೇದನ​ ಪ್ರಕರಣಗಳಿಗೆ ಕಡಿವಾಣ ಹಾಕಬಹುದೆಂದು ಸರ್ಕಾರ ನಂಬಿದೆ. ಆಘಾತಕಾರಿಯೆಂದರೆ ಲಾಕ್​ಡೌನ್​ ಮುಗಿಯುವಷ್ಟರಲ್ಲಿ ಚೀನಾದಲ್ಲಿ ಬರೋಬ್ಬರಿ 10 ಸಾವಿರ ಡೈವರ್ಸ್​ ಪ್ರಕರಣಗಳು ಬೆಳಕಿಗೆ ಬಂದಿದೆ.

    ಮಸೂದೆ ಅಂಗೀಕಾರವಾಗುತ್ತಿದ್ದಂತೆ ಹೊಸ ಕಾನೂನು ವಿಚಾರ ಚೀನಾದ ಟ್ವಿಟರ್​ ರೀತಿಯ ವೇದಿಕೆ ವೈಬೋದಲ್ಲಿ ಟ್ರೆಂಡ್​ ಸೃಷ್ಟಿ ಆಗಿದೆ. ಈ ಸಂಬಂಧ 25 ಮಿಲಿಯನ್​​ ಪೋಸ್ಟ್​ಗಳ ಹರಿದುಬಂದಿದ್ದು, ವಿಚ್ಛೇದನ ನೀಡಲು ಇರುವ ಕೂಲಿಂಗ್​ ಆಫ್​ ಪೀರಿಯಡ್ ಅನ್ನು ವಿರೋಧಿಸಿದ್ದಾರೆ.

    ಇದನ್ನೂ ಓದಿ: ಸುಮಲತಾರನ್ನು ನೆನಪಿಸಿ ಮಾಜಿ ಸಚಿವ ಎಚ್​.ಡಿ.ರೇವಣ್ಣರಿಗೆ ಜಿಪಂ ಅಧ್ಯಕ್ಷೆ ಶ್ವೇತಾ ದೇವರಾಜ್ ಸವಾಲು!

    ವಿಚ್ಛೇದನ​ ನೀಡುವ ಸ್ವತಂತ್ರವು ನಮಗಿಲ್ಲವಾ? ಎಂದು ನೆಟ್ಟಿಗರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಜಾಲತಾಣಗಳಲ್ಲಿ ಕೂಲಿಂಗ್​ ಆಫ್​ ಪೀರಿಯಡ್ ಬಗ್ಗೆ ಭಾರಿ ವಿರೋಧ ವ್ಯಕ್ತವಾಗುತ್ತಿದ್ದರೂ ಗಮನಿಸದ ಸರ್ಕಾರ ಸಾರ್ವಜನಿಕರ ಅಭಿಪ್ರಾಯವನ್ನು ಮೇಲ್ನೋಟಕ್ಕೆ ಮಾತ್ರ ಗೌರವಿಸುತ್ತದೆ ಎಂಬು ಗೊತ್ತಾಗುತ್ತದೆ ಎಂದು ಜರಿದಿದ್ದಾರೆ.

    ಹೊಸ ಕಾನೂನು ಕೌಟಂಬಿಕ ಹಿಂಸೆಯಿಂದ ವಿಚ್ಛೇದನಾ ಬಯಸುವವರಿಗೆ ಅನ್ವಯ ಆಗುವುದಿಲ್ಲ. ಜನವರಿ 1, 2021ರಿಂದ ಕಾನೂನು ಜಾರಿಗೆ ಬರಲಿದೆ. ವಿಚ್ಛೇದನ ಪ್ರಕರಣಗಳು ಹೆಚ್ಚಾಗುತ್ತಿದ್ದರಿಂದ 2018ರಲ್ಲಿ ಕಾನೂನು ಜಾರಿಗೆ ತರಲು ಪ್ರಸ್ತಾವನೆ ಸಲ್ಲಿಸಲಾಗಿತ್ತು.

    ಇದನ್ನೂ ಓದಿ: ಫ್ರೆಂಡ್ಸ್​ ಪಾರ್ಟಿಯಲ್ಲಿ ಬಿಜೆಪಿ ಮುಖ್ಯಸ್ಥನ ಸೊಸೆ ನಿಗೂಢ ಸಾವು

    ಕಳೆದ ವರ್ಷ ಸುಮಾರು 4.15 ಮಿಲಿಯನ್​ ದಂಪತಿ ವಿಚ್ಛೇದನ ಪಡೆದುಕೊಂಡಿದ್ದಾರೆ. 2003ರಲ್ಲಿ ನ್ಯಾಯಲಯಕ್ಕೆ ಹೊಗದೆ ಪರಸ್ಪರ ಒಪ್ಪಿಗೆ ಮೇರೆಗೆ ಬೇರೆಯಾಗಲು ಅನುಮತಿ ನೀಡಲಾಗಿತ್ತು. ಅದೇ ವರ್ಷ 1.3 ಮಿಲಿಯನ್​ ದಂಪತಿ ಬೇರೆಯಾಗಿದ್ದರು. ಅಂದಿನಿಂದ ವಿಚ್ಛೇದನ​ ಪ್ರಕರಣಗಳು ಏರುತ್ತಲೇ ಇದ್ದು, ಕಡಿವಾಣ ಹಾಕುವ ನಿಟ್ಟಿನಲ್ಲಿ ಹೊಸ ಕಾನೂನು ಜಾರಿಗೆ ತರಲಾಗಿದೆ. (ಏಜೆನ್ಸೀಸ್​)

    ಭಾರತದ ಆ್ಯಪ್​ಗೆ ಹೆದರಿ​ ಚೀನಾದ ಟಿಕ್​ಟಾಕ್​ ರೇಟಿಂಗ್​ ಹೆಚ್ಚಿಸೇಬಿಟ್ಟಿತಲ್ಲ ಗೂಗಲ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts