More

    ನೆರೆಯಲ್ಲೇ ಸಾಗಿದ ಅಂತಿಮಯಾತ್ರೆ!; ಜೀವದ ಹಂಗು ತೊರೆದು ಶವಸಂಸ್ಕಾರ

    ಕಲಬುರಗಿ: ಉತ್ತರ ಕರ್ನಾಟಕ ಭಾಗದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಭಾರಿ ಮಳೆಯಿಂದಾಗಿ ಹಲವಾರು ಪ್ರದೇಶಗಳು ಜಲಾವೃತವಾಗಿದ್ದು, ಅಂತಿಮಯಾತ್ರೆ ಕೂಡ ನೆರೆಯಲ್ಲೇ ಸಾಗುವಂತಾಗಿದೆ.

    ಕಲಬುರಗಿ ಜಿಲ್ಲೆಯಾದ್ಯಂತೆ ಭಾರಿ ಮಳೆ ಸುರಿದಿದ್ದು, ಬಹುತೇಕ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಅಂಥ ತುಂಬಿ ಹರಿಯುವ ಹಳ್ಳದಲ್ಲೇ ಜನರು ಜೀವದ ಹಂಗು ತೊರೆದು ಪಾರ್ಥಿವ ಶರೀರವನ್ನು ಸ್ಮಶಾನದತ್ತ ಕೊಂಡೊಯ್ಯುವ ದೃಶ್ಯ ಕಂಡುಬಂದಿದೆ.

    ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಚಿಂಚೋಳಿ (ಎಚ್) ಗ್ರಾಮದಲ್ಲಿ ಈ ವಿದ್ಯಮಾನ ಕಾಣಿಸಿದೆ. ಇಲ್ಲಿನ ಹಳೆಯ ಸೇತುವೆ‌ ಮಳೆಗೆ ಪದೇಪದೆ ಮುಳುಗುತ್ತಿದ್ದರಿಂದ ಹೊಸ ಸೇತುವೆ ನಿರ್ಮಾಣ ಕಾಮಗಾರಿ ಆರಂಭಗೊಂಡಿದೆ. ಆದರೆ ಕಾಮಗಾರಿ ಆರಂಭವಾಗಿ ವರುಷ ಕಳೆದರೂ ಪೂರ್ಣಗೊಳ್ಳದ್ದರಿಂದ ಹಳೆಯ ಸೇತುವೆ ಮೇಲೆಯೇ ಜನರು ರಿಸ್ಕ್​ ತೆಗೆದುಕೊಂಡು ಓಡಾಡುವ ಅನಿವಾರ್ಯತೆ ಸೃಷ್ಟಿಯಾಗಿದೆ.

    ಸಿಎಂ ಬಿಎಸ್​ವೈ ಕಡೆಯಿಂದ ಕೊಡಲಾದ ಲಕೋಟೆ​ಯಲ್ಲೇನಿತ್ತು?; ಸ್ವಾಮೀಜಿಯೊಬ್ಬರಿಂದ ಸ್ಪಷ್ಟನೆ ಹೊರಬಿತ್ತು..

    ಪಕ್ಷಕ್ಕಾಗಿ ಹಗಲಿರುಳು ಶ್ರಮಿಸಿದ ಜಿ. ಪರಮೇಶ್ವರ್ ಅವರನ್ನು ಸಿದ್ದರಾಮಯ್ಯ ಮೂಲೆಗುಂಪು ಮಾಡಿದ್ರು: ಕಟೀಲ್

    ‘ತಂದೆಗೆ ಒಳ್ಳೆಯ ಮಗಳಾಗಲಿಲ್ಲ, ಗಂಡನಿಗೆ ತಕ್ಕ ಹೆಂಡತಿಯಾಗಲಿಲ್ಲ..’: ಮೋಹನಕುಮಾರಿ ಇನ್ನಿಲ್ಲ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts