More

    ಪಂಜಾಬ್​ ಪೊಲೀಸರ ಮುಂದೆ ಶರಣಾದ ಸಿಖ್​ ಮೂಲಭೂತವಾದಿ ಅಮೃತ್​ಪಾಲ್​ ಸಿಂಗ್!

    ನವದೆಹಲಿ: ಸಿಖ್​ ಮೂಲಭೂತವಾದಿ ಧರ್ಮ ಪ್ರಚಾರಕ, ವಾರಿಸ್​ ಪಂಜಾಬ್​ ದೇ ಸಂಘಟನೆಯ ಮುಖ್ಯಸ್ಥ ಅಮೃತ್​ಪಾಲ್​ ಸಿಂಗ್ ಪಂಜಾಬ್​ ಪೊಲೀಸರ ಮುಂದೆ ಇಂದು (ಏಪ್ರಿಲ್​ 23) ಶರಣಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ.

    ಮಾರ್ಚ್​ 18ರಿಂದ ಅಮೃತ್​ಪಾಲ್​ ಸಿಂಗ್​​ ನಾಪತ್ತೆಯಾಗಿದ್ದ. ಇದೀಗ ಪಂಜಾಬ್​ನ ಮೋಗಾ ಪೊಲೀಸರ ಮುಂದೆ ಶರಣಾಗಿದ್ದು, ಆತನನ್ನು ಬಂಧಿಸಲಾಗಿದೆ. ಪಂಜಾಬ್​ನಲ್ಲಿ ಖಾಲಿಸ್ತಾನಿ ಉಗ್ರ ಚಟುವಟಿಕೆಗಳಿಗೆ ಪ್ರಚೋದನೆ ನೀಡುತ್ತಿರುವ ಆರೋಪ ಅಮೃತ್​ಪಾಲ್​​ ಮೇಲಿದೆ.

    ಇದನ್ನೂ ಓದಿ: ಭ್ರಷ್ಟ ಸಿಎಂ ಎಂದ ಸಿದ್ದರಾಮಯ್ಯಗೆ ಟ್ವೀಟ್​ ಮೂಲಕ ಬಸವರಾಜ ಬೊಮ್ಮಾಯಿ ತಿರುಗೇಟು

    ಅಸ್ಸಾಂಗೆ ಸ್ಥಳಾಂತರ

    ರಾಷ್ಟ್ರೀಯ ಭದ್ರತಾ ಕಾಯ್ದೆ ಅಡಿಯಲ್ಲಿ ಈಗಾಗಲೇ ಬಂಧನವಾಗಿರುವ 8 ಸಹಚರರು ಇರುವ ಅಸ್ಸಾಂನ ದಿಬ್ರುಗಢಕ್ಕೆ ಅಮೃತ್​ಪಾಲ್​ನನ್ನು ಸ್ಥಳಾಂತರ ಮಾಡಲಾಗಿದೆ.

    ಭಿಂದ್ರನ್‌ವಾಲೆ ಅನುಯಾಯಿ

    ಅಮೃತ್​ಪಾಲ್​ ಓರ್ವ ಖಲಿಸ್ತಾನಿ-ಪಾಕಿಸ್ತಾನ ಏಜೆಂಟ್​ ಎಂದು ಸರ್ಕಾರ ಹೇಳಿದೆ. ಕಳೆದ ಕೆಲವು ವರ್ಷಗಳಿಂದ ಆತ ಪಂಜಾಬ್​ನಲ್ಲಿ ಸಕ್ರೀಯನಾಗಿದ್ದ ಮತ್ತು ಶಸ್ತ್ರಸಜ್ಜಿತ ಬೆಂಬಲಿಗರಿಂದ ಬೆಂಗಾವಲು ಪಡೆಯುತ್ತಿದ್ದ. ಖಲಿಸ್ತಾನಿ ಪ್ರತ್ಯೇಕತಾವಾದಿ ಮತ್ತು ಭಯೋತ್ಪಾದಕ ಜರ್ನೈಲ್ ಸಿಂಗ್ ಭಿಂದ್ರನ್‌ವಾಲೆ ಅನುಯಾಯಿ ಎಂದು ಅಮೃತ್​ಪಾಲ್​ ಹೇಳಿಕೊಳ್ಳುತ್ತಿದ್ದ ಮತ್ತು ಆತನನ್ನು ಬೆಂಬಲಿಗರು “ಭಿಂದ್ರನ್‌ವಾಲೆ 2.0” ಎಂದು ಕರೆಯುತ್ತಿದ್ದರು.

    ಮಾರ್ಚ್​ 18ರಂದು ದಾಳಿ

    ಅಂಜಾಲದಲ್ಲಿರುವ ಪೊಲೀಸ್​ ಠಾಣೆಯ ಮೇಲೆ ಅಮೃತ್​ಪಾಲ್​ ಬೆಂಬಲಿಗರು ದಾಳಿ ಮಾಡಿದ ಒಂದು ತಿಂಗಳ ಬಳಿಕ ಪಂಜಾಬ್​ ಪೊಲೀಸರು ಅಮೃತ್​ಪಾಲ್​ ಮತ್ತು ಆತನ ವಾರಿಸ್​ ಪಂಜಾಬ್​ ದೇ ಸಂಘಟನೆಯ ಬೆಂಬಲಿಗರ ಮೇಲೆ ಮಾರ್ಚ್​ 18ರಂದು ದಾಳಿ ನಡೆಸಿತು. ಬಳಿಕ ಅಮೃತ್​ಪಾಲ್​ ನಾಪತ್ತೆಯಾಗಿದ್ದ.

    ವಿವಿಧ ಪ್ರಕರಣ

    ಅಮೃತ್​ಪಾಲ್​ ಮತ್ತು ಆತನ ಸಹಚರರ ವಿರುದ್ಧ ಸಮುದಾಯಗಳ ನಡುವೆ ಸಾಮರಸ್ಯ ಕದಡುವುದು, ಕೊಲೆ ಯತ್ನ, ಪೊಲೀಸ್​ ಸಿಬ್ಬಂದಿ ಮೇಲೆ ಹಲ್ಲೆ ಮತ್ತು ಸಾರ್ವಜನಿಕ ಸೇವಕರ ಕಾನೂನುಬದ್ಧ ಕರ್ತವ್ಯ ನಿರ್ವಹಣೆಯಲ್ಲಿ ಅಡೆತಡೆಗಳನ್ನು ಸೃಷ್ಟಿಸುವುದು ಸೇರಿದಂತೆ ಹಲವು ಪ್ರಕರಣಗಳನ್ನು ಪಂಜಾಬ್​ ಪೊಲೀಸರು ದಾಖಲಿಸಿದ್ದರು.

    ಇದನ್ನೂ ಓದಿ: ಏರುಗತಿಯಲ್ಲಿ ಬಿಜೆಪಿ ಮತಗಳಿಕೆ: 2ರಿಂದ 110 ಶಾಸಕರ ತನಕ ಕಮಲ ಪಯಣ; ಕಾಂಗ್ರೆಸ್, ಜನತಾಪಕ್ಷದ್ದೂ ದಾಖಲೆ

    ಬಂದೂಕು ಸಂಸ್ಕೃತಿ

    ಅಮೃತಪಾಲ್ ಸಿಂಗ್, ಪಾಕಿಸ್ತಾನದಿಂದ ಶಸ್ತ್ರಾಸ್ತ್ರಗಳನ್ನು ಪಡೆಯುತ್ತಿದ್ದಾನೆ ಮತ್ತು ಪಂಜಾಬ್ ಅನ್ನು ಕೋಮುವಾದದ ಆಧಾರದ ಮೇಲೆ ವಿಭಜಿಸಲು ಪ್ರಯತ್ನಿಸುತ್ತಿದ್ದಾನೆ ಎಂದು ಗುಪ್ತಚರ ಸಂಸ್ಥೆಗಳು ಹೇಳುತ್ತವೆ. ಅಮೃತಪಾಲ್ ಸಿಂಗ್ ಯುವಕರನ್ನು “ಬಂದೂಕು ಸಂಸ್ಕೃತಿ” ಯತ್ತ ಕೊಂಡೊಯ್ಯುತ್ತಿದ್ದ ಎಂದು ಆರೋಪಿಸಲಾಗಿದೆ. (ಏಜೆನ್ಸೀಸ್​)

    ಅಮೃತ್​ಪಾಲ್​ ಸಿಂಗ್​ ಸಹಚರನ ಬಂಧನ; ಜಂಟಿ ಕಾರ್ಯಾಚರಣೆ ನಡೆಸಿದ ಪೊಲೀಸರು

    ಪಂಜಾಬ್​ ಸರ್ಕಾರಕ್ಕೆ ನನ್ನನ್ನು ಬಂಧಿಸುವ ಉದ್ದೇಶ ಇದ್ದಿದ್ದರೆ ಪೊಲೀಸರು ನನ್ನ ಮನೆಗೆ ಬರುತ್ತಿದ್ದರು: ಅಮೃತ್​ಪಾಲ್​ ಸಿಂಗ್​

    ಅಮೃತ್​ಪಾಲ್​ ಸಿಂಗ್​ಗೆ ರಕ್ಷಣೆ; ಪಟಿಯಾಲದಲ್ಲಿ ಮಹಿಳೆ-ಸಹಚರ ಬಂಧನ

    ಅಮೃತ್​ಪಾಲ್​ ಸಿಂಗ್​ ಓಡಾಟದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ; ಪಟಿಯಾಲದಲ್ಲಿ ಅಡಗಿರುವ ಶಂಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts