More

    ಅಮೃತ್​ಪಾಲ್​ ಸಿಂಗ್​ಗೆ ರಕ್ಷಣೆ; ಪಟಿಯಾಲದಲ್ಲಿ ಮಹಿಳೆ-ಸಹಚರ ಬಂಧನ

    ಪಟಿಯಾಲ: ವಾರಿಸ್​ ಪಂಜಾಬ್​ ದೇ ಸಂಘಟನೆಯ ಮುಖ್ಯಸ್ಥ, ಸಿಖ್​ ಮೂಲಭೂತವಾದಿ ಧರ್ಮ ಪ್ರಚಾರಕ ಅಮೃತ್​ಪಾಲ್​ ಸಿಂಗ್​ ಹಾಗೂ ಆತನ ಸಹಚರ ಪಪಲ್​ಪ್ರೀತ್​ ಸಿಂಗ್​ಗೆ ಆಶ್ರಯ ನೀಡಿದ ಆರೋಪದ ಮೇಲೆ ಪಟಿಯಾಲ ಪೊಲೀಸರು ಮಹಿಳೆ ಹಾಗೂ ಸಹಚರನನ್ನು ಬಂಧಿಸಿದ್ದಾರೆ.

    ಬಂಧಿತ ಮಹಿಳೆಯನ್ನು ಬಲ್ಬೀರ್​ ಕೌರ್​ ಎಂದು ಗುರುತಿಸಲಾಗಿದ್ದು ಮಾರ್ಚ್​ 19ರಂದು ಪಟಿಯಾಲದ ಹರಗೋಬಿಂದ್​ ನಗರದಲ್ಲಿ ಅಮೃತ್​ಪಾಲ್​ ಹಾಗೂ ಪಪಲ್​ಪ್ರೀತ್​ಗೆ ಆಶ್ರಯ ನೀಡಿದ್ದಳು ಎಂದು ತಿಳಿದು ಬಂದಿದೆ.

    ಅಮೃತ್​ಪಾಲ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಆಶ್ರಯ ನೀಡಿದ ಆರೋಪದ ಮೇಲೆ ಗುರುವಾರ ಪೊಲೀಸರು ಹರಿಯಾಣದ ಕುರುಕ್ಷೇತ್ರ ಮೂಲದ ಮಹಿಳೆ ಬಲ್ಜಿತ್​ ಕೌರ್​ರನ್ನು ಬಂಧಿಸಿದ್ದರು.

    ಅಮೃತ್​ಪಾಲ್​ ಸಿಂಗ್​ಗೆ ರಕ್ಷಣೆ; ಪಟಿಯಾಲದಲ್ಲಿ ಮಹಿಳೆ-ಸಹಚರ ಬಂಧನ

    ಇದನ್ನೂ ಓದಿ: ಅಮೃತ್​ಪಾಲ್​ ಸಿಂಗ್​ ಓಡಾಟದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ; ಪಟಿಯಾಲದಲ್ಲಿ ಅಡಗಿರುವ ಶಂಕೆ?

    ಶನಿವಾರ ಪೊಲೀಸರು ಅಮೃತ್​ಪಾಲ್​ನ ಸಹಚರ ತೇಜಿಂದ್ರ್ ಸಿಂಗ್​ ಗಿಲ್​ಗೆ ಆಶ್ರಯ ನೀಡಿದ ಆರೋಪದ ಮೇಲೆ ಬಲ್ವಂತ್​ ಸಿಂಗ್​ ಎಂಬುವವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಹರ್​​ಸಿಮ್ರತ್​ ಸಿಂಗ್​ ಅಮೃತ್​ಪಾಲ್​ಗೆ ಆಶ್ರಯ ನೀಡಿದ ಆರೋಪದ ಮೇಲೆ ಕುಲಿ-ಕುರ್ದ್​ ಗ್ರಾಮದ ಬಲ್ವಂತ್​ ಸಿಂಗ್​ ಎಂಬುವವರನ್ನು IPC ಸೆಕ್ಷನ್​​ 212ರ ಅಡಿಯಲ್ಲಿ ಪ್ರಕರಣವನ್ನ ದಾಖಲಿಸಿಕೊಂಡು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

    ಶನಿವಾರ ಅಮೃತ್​ಪಾಲ್​ ಸಿಂಗ್​ಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಣಾದಲ್ಲಿ ವೈರಲ್​ ಆಗಿದ್ದವು. ಆದರೆ, ಪೊಲೀಸರು ಈ ಬಗ್ಗೆ ಯಾವುದೇ ಪ್ರತಿಕ್ರಿಯೆಯನ್ನ ನೀಡಿರಲಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts