More

    20ನೇ ದಿನವೂ ಏರುಗತಿಯತ್ತ ಪೆಟ್ರೋಲ್‌, ಡೀಸೆಲ್‌: ಎಲ್ಲೆಲ್ಲಿ ಎಷ್ಟೆಷ್ಟು?

    ನವದೆಹಲಿ: ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ದೈನಂದಿನ ಬೆಲೆ ಪರಿಷ್ಕರಣೆಗೆ ಮರುಚಾಲನೆ ನೀಡಿರುವ ಪರಿಣಾಮವಾಗಿ, ದೇಶದಲ್ಲಿ ಸತತವಾಗಿ ಪೆಟ್ರೋಲ್ ಹಾಗೂ ಡೀಸೆಲ್‌ ಬೆಲೆಯಲ್ಲಿ ಏರಿಕೆ ಕಂಡುಬರುತ್ತಿದ್ದು, ಸತತ 20ನೇ ದಿನವೂ ಏರಿಕೆಯಾಗಿದೆ. ಇದಕ್ಕೆ ಸದ್ಯಕ್ಕೆ ಬ್ರೇಕ್ ಬೀಳುವ ಲಕ್ಷಣಗಳು ಕಾಣಿಸುತ್ತಿಲ್ಲ.

    ಪರಿಣಾಮ ಇದೇ ಮೊದಲ ಬಾರಿಗೆ ಡೀಸೆಲ್ ರೂ.80 ಗಡಿದಾಟಿದೆ. ಇನ್ನು ಪ್ರತಿ ಲೀಟರ್ ಪೆಟ್ರೋಲ್ ಬೆಲೆ 0.21 ಪೈಸೆ ಜಾಸ್ತಿಯಾಗಿದೆ.

    ಇದನ್ನೂ ಓದಿ: ಕರೊನಾ ತಂದಿಟ್ಟ ಭೀಕರ ಬದುಕು! ಸೋಂಕಿನಿಂದ ಗುಣಮುಖರಾದರೂ ಮನೆಗೆ ನೋ ಎಂಟ್ರಿ!

    ಜೂ.25ರಂದು ದೆಹಲಿಯಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ದರದಲ್ಲಿ 16 ಪೈಸೆ ಏರಿಕೆ ಕಂಡಿದ್ದು, ಡೀಸೆಲ್‌‌ ಪ್ರತೀ ಲೀಟರ್‌ಗೆ 14 ಪೈಸೆ ಹೆಚ್ಚಾಗಿದೆ. ಕಳೆದ 19 ದಿಗಳಲ್ಲಿ ಪೆಟ್ರೋಲ್‌ ದರದಲ್ಲಿ ಒಟ್ಟು 8 ರೂ. 66 ಪೈಸೆ ಏರಿಕೆ ಕಂಡರೆ, ಡೀಸೆಲ್‌ ‌ ದರದಲ್ಲಿ ಒಟ್ಟು 10 ರೂ. 63 ಪೈಸೆ ಏರಿಕೆ ಕಂಡಿದೆ.

    ಕಳೆದ ಮೂರು ವಾರಗಳಲ್ಲಿ ಡೀಸೆಲ್ ಪ್ರತಿ ಲೀಟರ್ ಮೇಲೆ ರೂ.10.82 ಹಾಗೂ ಪೆಟ್ರೋಲ್ ರೂ.8.87 ಹೆಚ್ಚಳವಾಗಿದೆ. ಇಂದು ಬೆಂಗಳೂರಿನಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ ರೂ.85.59 ಹಾಗೂ ಡೀಸೆಲ್ ಬೆಲೆ ರೂ.76.25 ಆಗಿದೆ.

    ಎಲ್ಲೆಲ್ಲಿ ಎಷ್ಟೆಷ್ಟು?

    ಬೆಂಗಳೂರು:

    ಪೆಟ್ರೋಲ್: 82.52 ರೂ. (17 ಪೈಸೆ ಹೆಚ್ಚಳ)
    ಡೀಸೆಲ್: 76.09 ರೂ. (13 ಪೈಸೆ ಹೆಚ್ಚಳ)

    ದೆಹಲಿ:

    ಪೆಟ್ರೋಲ್: 79.92 ರೂ. (16 ಪೈಸೆ ಹೆಚ್ಚಳ)
    ಡೀಸೆಲ್: 80.02 ರೂ. (14 ಪೈಸೆ ಹೆಚ್ಚಳ)

    ಮುಂಬೈ:

    ಪೆಟ್ರೋಲ್: 86.70 ರೂ. (16 ಪೈಸೆ ಹೆಚ್ಚಳ)
    ಡೀಸೆಲ್: 778.34 ರೂ. (12 ಪೈಸೆ. ಹೆಚ್ಚಳ)

    ಚೆನ್ನೈ:

    ಪೆಟ್ರೋಲ್: 83.18 ರೂ. (7 ಪೈಸೆ ಹೆಚ್ಚಳ)
    ಡೀಸೆಲ್: 77.29 ರೂ. ( 5 ಪೈಸೆ ಹೆಚ್ಚಳ)

    ಬಲಿ ಪಡೆಯುತ್ತಲೇ ಕಾಲಿಟ್ಟ ಮುಂಗಾರು ಮಳೆ: 107 ಮಂದಿ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts