More

    ಖಾಸಗಿ ಲ್ಯಾಬ್‌ಗಳ ಸ್ಯಾಂಪಲ್​​ಗೆ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಪರೀಕ್ಷೆ ! ಸಿಕ್ಕಿಬಿದ್ದರು ನಾಲ್ವರು

    ಬೆಂಗಳೂರು: ಖಾಸಗಿ ಲ್ಯಾಬ್​​ಗಳ ಸ್ವಾಬ್ ಮಾದರಿಗಳನ್ನು ಸರ್ಕಾರಿ ಆಸ್ಪತ್ರೆಗೆ ತಂದು ಅಕ್ರಮವಾಗಿ ಕರೊನಾ ಪರೀಕ್ಷೆ ನಡೆಸಿ ಹಣ ಪಡೆಯುತ್ತಿದ್ದ ಯಲಹಂಕ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಮೂವರು ಲ್ಯಾಬ್ ಟೆಕ್ನಿಷಿಯನ್​​ಗಳನ್ನು ಮತ್ತು ಓರ್ವ ಖಾಸಗಿ ಲ್ಯಾಬ್ ಮಾಲೀಕನನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ.

    ಯಲಹಂಕದ ನಿವಾಸಿಗಳಾದ ಪದ್ಮನಾಭ (38), ಸತೀಶ್(32), ಪುನೀತ್(31) ಹಾಗೂ ಭವಿ ರೆಡ್ಡಿ (25) ಬಂಧಿತರು. ಆರೋಪಿಗಳಾದ ಪದ್ಮನಾಭ, ಸತೀಶ್ ಮತ್ತು ಪುನೀತ್ ಯಲಹಂಕದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಲ್ಯಾಬ್ ಟೆಕ್ನಿಷಿಯನ್‌ಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದರೆ, ಭವಿ ರೆಡ್ಡಿ ಕೊಡಿಗೇಹಳ್ಳಿಯಲ್ಲಿ ಖಾಸಗಿ ಆಸ್ಪತ್ರೆ ನಡೆಸುತ್ತಿದ್ದಾರೆ. ಆರೋಪಿಗಳು ಪ್ರತಿನಿತ್ಯ ಖಾಸಗಿ ಲ್ಯಾಬ್​ಗಳ 30 ರಿಂದ 40 ಸ್ಯಾಂಪಲ್​​ಗಳಿಗೆ ಅಕ್ರಮವಾಗಿ ಸರ್ಕಾರಿ ಪ್ರಯೋಗಾಲಯದಲ್ಲಿ ಉಚಿತ ಪರೀಕ್ಷೆ ನಡೆಸಿ ವರದಿ ನೀಡುತ್ತಿದ್ದರು ಎಂದು ತಿಳಿದು ಬಂದಿದೆ.

    ಇದನ್ನೂ ಓದಿ: ಪರಿಣಾಮಕಾರಿ ಕ್ರಮ ತೆಗೆದುಕೊಂಡರೆ ಮೂರನೇ ಅಲೆ ತಡೆಯಬಹುದು : ಡಾ.ವಿಜಯರಾಘವನ್

    ಯಲಹಂಕ ಸರ್ಕಾರಿ ಆಸ್ಪತ್ರೆಯಿಂದ ಪ್ರತಿನಿತ್ಯ 100 ಆರ್‌ಟಿಪಿಸಿಆರ್ ಸ್ಯಾಂಪಲ್‌ಗಳನ್ನು ಪಡೆದು ಕಮಾಂಡೋ ಆಸ್ಪತ್ರೆಗೆ ಕಳುಹಿಸಿ ಸೋಂಕಿನ ಬಗ್ಗೆ ವರದಿ ಪಡೆದುಕೊಳ್ಳಲಾಗುತ್ತಿತ್ತು. ಇತ್ತೀಚೆಗೆ ಆರ್‌ಟಿಪಿಸಿಆರ್ ಪರೀಕ್ಷೆ ಮಾಡಿಕೊಳ್ಳುವವರ ಸಂಖ್ಯೆಗಿಂತ ಅಧಿಕ ಪ್ರಮಾಣದಲ್ಲಿ ಸ್ವಾಬ್‌ಗಳನ್ನು ಕಮಾಂಡೋ ಆಸ್ಪತ್ರೆಗೆ ಕಳುಹಿಸುತ್ತಿರುವುದು ಆಡಳಿತಾಧಿಕಾರಿ ಡಾ.ಚೇತನ್ ಕುಮಾರ್ ಅವರ ಗಮನಕ್ಕೆ ಬಂದಿತು. ಏ.5 ರಂದು ಈ ಬಗ್ಗೆ ಪರಿಶೀಲಿಸಿದಾಗ, 110 ಮಂದಿ ಯಲಹಂಕ ಸಾರ್ವಜನಿಕ ಆಸ್ಪತ್ರೆಯಲ್ಲಿ ಸ್ವಾಬ್ ಟೆಸ್ಟ್ ಮಾಡಿಸಿದರೂ ಕಮಾಂಡೋ ಆಸ್ಪತ್ರೆಗೆ ಹೋಗಿರುವ ಲಿಸ್ಟ್‌ನಲ್ಲಿ 150 ಮಂದಿಯ ಸ್ವಾಬ್ ಮಾದರಿ ಕಳುಹಿಸಿರುವುದು ಕಂಡು ಬಂದಿತ್ತು.

    ಪದ್ಮನಾಭ, ಸತೀಶ್ ಮತ್ತು ಪುನೀತ್ ಆಸ್ಪತ್ರೆಯ ಆಡಳಿತದ ಗಮನಕ್ಕೆ ಬಾರದೇ ಅನಧಿಕೃತವಾಗಿ ಬೇರೆ ಖಾಸಗಿ ಆಸ್ಪತ್ರೆಗಳ ಲ್ಯಾಬ್‌ಗಳಿಂದ ಸ್ವಾಬ್ ಸಂಗ್ರಹಿಸಿ ಇದನ್ನು ಪರೀಕ್ಷೆಗಾಗಿ ಕಮಾಂಡೋ ಆಸ್ಪತ್ರೆಗೆ ಕಳುಹಿಸಿಕೊಟ್ಟು ವರದಿ ಪಡೆಯುತ್ತಿದ್ದರು. ಪರೀಕ್ಷಾ ವರದಿ ಬಂದ ಬಳಿಕ ಅದನ್ನು ಖಾಸಗಿ ಲ್ಯಾಬ್‌ಗಳಿಗೆ ನೀಡಿ ಅದಕ್ಕಾಗಿ 1 ಸ್ವಾಬ್ ಟೆಸ್ಟ್‌ಗೆ 100 ರೂ.ನಂತೆ ಹಣ ಪಡೆಯುತ್ತಿದ್ದರು. ಬಾವಿರೆಡ್ಡಿ ತಮ್ಮ ಲ್ಯಾಬ್‌ಗೆ ಬಂದಿರುವ ಸ್ವಾಬ್‌ಗಳನ್ನು ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿಗೆ ಕೊಟ್ಟು ವರದಿ ತರಿಸಿಕೊಂಡಿದ್ದರು. ಆರೋಪಿಗಳು ಕಳೆದ ಡಿಸಂಬರ್‌ನಿಂದ ಈ ಕೃತ್ಯವೆಸಗುತ್ತಿದ್ದರು ಎಂಬುದು ಬೆಳಕಿಗೆ ಬಂದಿದೆ. ಮೇ 6 ರಂದು ಯಲಹಂಕ ಸಾರ್ವಜನಿಕ ಆಸ್ಪತ್ರೆಯ ಹೆಚ್ಚುವರಿ ಆಡಳಿತಾಧಿಕಾರಿ ಡಾ. ಚೇತನ್ ಕುಮಾರ್ ಅವರು ಯಲಹಂಕ ಪೊಲೀಸರಿಗೆ ದೂರು ನೀಡಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

    ಬೀಗ ಹಾಕಿದ್ದ ಮನೆಗೆ ಕನ್ನ ಹಾಕಿದ ಖದೀಮರು… ಮೊಮ್ಮಗನ ಓದಿಗಾಗಿ ಇಟ್ಟ 90 ಲಕ್ಷ ರೂ. ಕದ್ದೊಯ್ದರು

    ಆಕ್ಸಿಜನ್ ಕಾಳದಂಧೆ ಹಿಂದೆ ಖ್ಯಾತ ಬಿಸಿನೆಸ್​ಮನ್ ! ಆರಂಭವಾಗಿದೆ ಹುಡುಕಾಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts