More

    ಸೈಬರ್ ಕ್ರೈಂನವರೆಂದು ನಂಬಿಸಿ ವ್ಯಕ್ತಿಗೆ 15.62 ಲ. ರೂ. ವಂಚನೆ

    ಪಡುಬಿದ್ರಿ
    ಸೈಬರ್ ಕ್ರೈಂನವರೆಂದು ನಂಬಿಸಿ ನಂದಿಕೂರಿನ ಕೈಗಾರಿಕಾ ಘಟಕವೊಂದರಲ್ಲಿ ಇನ್‌ಚಾರ್ಜ್ ಕೆಲಸ ಮಾಡಿಕೊಂಡಿದ್ದ ತಮಿಳುನಾಡು ಮೂಲದ ಟಿಯಾಗು (32) ಎಂಬುವರ ಬ್ಯಾಂಕ್ ಖಾತೆಯಿಂದ ಹಣ ವರ್ಗಾಯಿಸಿ ವಂಚಿಸಿರುವ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
    ಜ.17ರಂದು ಟಿಯಾಗು ಮೊಬೈಲ್‌ಗೆ 91-7716341788ನೇ ನಂಬರಿನಿಂದ ಫೆಡ್‌ಎಕ್ಸ್ ಕೊರಿಯರ್ ಎಂಬ ಕಂಪನಿಯಿಂದ ಕರೆ ಮಾಡಿದ ವ್ಯಕ್ತಿ ಇಂಗ್ಲೀಷ್‌ನಲ್ಲಿ ಮಾತನಾಡಿ ನೀವು ಮುಂಬೈನಿಂದ ಇರಾನ್‌ಗೆ ಕೊರಿಯರ್ ಮಾಡಿದ ಪಾರ್ಸೆಲ್ ಡೆಲಿವರಿ ಆಗಲಿಲ್ಲ ಎಂದು ಹೇಳಿದ. ಆಗ ತಾನು ಯಾವುದೇ ಕೊರಿಯರ್ ಆರ್ಡರ್ ಮಾಡಲಿಲ್ಲ ಕೊರಿಯರ್‌ನಲ್ಲಿ ಏನಿದೆ ಟಿಯಾಗು ಪ್ರಶ್ನಿಸಿದ್ದರು.

    Department:Fedex Mumbai Andheri Branch parcel sent date 10/01/2024 receiver name ZHANG LIN Contact number 9862737889 Parcel tracking ID 22892321291 Parcel contents expired passport -5 SBI credit cards 4 cloths 2 kgs toy-1 MBDA 450 grams ಎಂದು ಕರೆ ಮಾಡಿದ ವ್ಯಕ್ತಿ ಮೆಸೇಜ್ ಮಾಡಿದ್ದ.

    ಸಿಕ್ಕಿಬಿದ್ದರೆ ನಿಮಗೆ ಜೀವನ ಪರ್ಯಂತ ಕೇಸು

    ಡ್ರಗ್ ಆಗಿದ್ದು ಅಕ್ರಮವಾಗಿ ಕಳುಹಿಸಲಾಗುತ್ತಿದೆ. ಸಿಕ್ಕಿಬಿದ್ದರೆ ನಿಮಗೆ ಜೀವನ ಪರ್ಯಂತ ಕೇಸು ದಾಖಲಾಗುತ್ತದೆ ಎಂದು ಹೇಳಿ ನೀವು ಸೈಬ್ರರ್ ಕಂಪ್ಲೇಟ್ ಕೊಡುವುದು ಉತ್ತಮ ಎಂದು ಮುಂಬೈ ಸೈಬರ್ ಕ್ರೈಂ ಬ್ರಾಂಚ್‌ಗೆ ಕರೆಯನ್ನು ವರ್ಗಾವಣೆ ಮಾಡುತ್ತೇನೆ ಎಂದು ಹೇಳಿ ಒಂದು ನಿಮಿಷದ ನಂತರ ಇನ್ನೋರ್ವ ವ್ಯಕ್ತಿ ಮಾತನಾಡಿ ನಿಮ್ಮ ಅಕೌಂಟ್ ಚೆಕ್ ಮಾಡಬೇಕಿದೆ ಎಂದು ಹೇಳಿ ಟಿಯಾಗು ಅವರನ್ನು ನಂಬಿಸಿ ಐಸಿಐಸಿಐ ಅಪ್ಲಿಕೇಶನ್‌ನಲ್ಲಿರುವ ಪ್ರಿ ಅಪ್ರೋವ್ಡ್ ಲೋನ್‌ಗೆ ಹೋಗಿ ಪರ್ಸನಲ್ ಲೋನ್‌ಗೆ ಕ್ಲಿಕ್ ಮಾಡಲು ಹೇಳಿದ್ದರು. ಪ್ರಿ ಅಪ್ರೋವ್ಡ್ ಲೋನ್‌ಗೆ ಹೋಗಿ ಪರ್ಸನಲ್ ಲೋನ್‌ಗೆ ಕ್ಲಿಕ್ ಮಾಡಿದಾಗ ಸಿಗುವ ಲೋನ್ ಮೊತ್ತ 15,62,921 ಎಂದು ಬಂದಿದೆ ಎಂದು ಕರೆ ಮಾಡಿದ್ದ ವ್ಯಕ್ತಿ ತಿಳಿಸಿದ್ದರು. ಅಪ್ಲೈ ಬಟನ್ ಕ್ಲಿಕ್ ಮಾಡಿ ಟಿಯಾಗು ಅವರಿಗೆ ಬಂದ ಇಂಟರ್‌ನೆಟ್ ಲಾಗಿನ್ ಒಟಿಪಿಯನ್ನು ಫೋನ್‌ನಲ್ಲಿದ್ದ ವ್ಯಕ್ತಿಗೆ ನೀಡಿದ್ದರು. ಆಗ ಹಣವು ಅವರ ಬ್ಯಾಂಕ್ ಖಾತೆಗೆ ಜಮಾ ಆಗಿದ್ದು, ನಂತರ ಆ ವ್ಯಕ್ತಿ ಸೈಬರ್ ಕ್ರೈಂನವರು ಎಂದು ನಂಬಿಸಿ ಅಕೌಂಟ್ ನಂಬರ್ ನೀಡಿ ಖಾತೆಗೆ ಅವರ ಅಕೌಂಟ್‌ನಲ್ಲಿದ್ದ 15,62,921 ಮೊತ್ತವನ್ನು ಆರ್‌ಟಿಜಿಎಸ್ ಮೂಲಕ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾರೆ ಎಂದು ಟಿಯಾಗು ಪೊಲೀಸರಿಗೆ ದೂರು ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts