ನವದೆಹಲಿ: ಬಿಸಿಸಿಐ ಮನವಿಯ ಹೊರತಾಗಿಯೂ ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) ಟಿ20 ಟೂರ್ನಿಯ ವೇಳಾಪಟ್ಟಿಯನ್ನು ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಬದಲಾಯಿಸುವುದು ಅನುಮಾನವೆನಿಸಿದೆ. ಇದರಿಂದಾಗಿ ಯುಎಇಯಲ್ಲಿ ನಡೆಯಲಿರುವ ಐಪಿಎಲ್ 14ನೇ ಆವೃತ್ತಿಯ 2ನೇ ಭಾಗದ ಆರಂಭಿಕ ಪಂದ್ಯಗಳಿಗೆ ವಿಂಡೀಸ್ ಕ್ರಿಕೆಟಿಗರು ಲಭ್ಯರಾಗುವುದು ಅನುಮಾನವೆನಿಸಿದೆ.
![blank](https://www.vijayavani.net/wp-content/plugins/wp-fastest-cache-premium/pro/images/blank.gif)
ಸಿಪಿಎಲ್ 9ನೇ ಆವೃತ್ತಿ ಆಗಸ್ಟ್ 28ರಿಂದ ಸೆಪ್ಟೆಂಬರ್ 19ರವರೆಗೆ ನಿಗದಿಯಾಗಿದೆ. ಆದರೆ ಸೆಪ್ಟೆಂಬರ್ 18ರಿಂದಲೇ ಐಪಿಎಲ್ ಪುನರಾರಂಭಕ್ಕೆ ಯೋಜನೆ ಹಾಕಿಕೊಂಡಿರುವ ಬಿಸಿಸಿಐ,
ಒಂದು ವಾರ ಅಥವಾ 10 ದಿನ ಮುಂಚಿತವಾಗಿ ಸಿಪಿಎಲ್ ನಡೆಸುವಂತೆ ವಿಂಡೀಸ್ ಮಂಡಳಿಯನ್ನು ಕೇಳಿಕೊಂಡಿದೆ. ಆದರೆ ಸಿಪಿಎಲ್ ವೇಳಾಪಟ್ಟಿ ಬದಲಾಯಿಸಲು ಈಗ ಸಾಕಷ್ಟು ವಿಳಂಬವಾಗಿದೆ ಎಂದು ವಿಂಡೀಸ್ ಮಂಡಳಿ ಅಭಿಪ್ರಾಯಪಟ್ಟಿದೆ. ಯಾಕೆಂದರೆ ಪ್ರವಾಸಿ ಪಾಕಿಸ್ತಾನ ವಿರುದ್ಧ ವಿಂಡೀಸ್ ತಂಡ ಆಗಸ್ಟ್ 24ರವರೆಗೂ ಟೆಸ್ಟ್ ಸರಣಿಯನ್ನು ಆಡಲಿದೆ. 5 ಟಿ20 ಮತ್ತು 2 ಟೆಸ್ಟ್ ಪಂದ್ಯಗಳ ಈ ಪ್ರವಾಸದ ವೇಳಾಪಟ್ಟಿ ಈಗಾಗಲೆ ಪ್ರಕಟಗೊಂಡಿದೆ. ಹೀಗಾಗಿ ವಿಂಡೀಸ್ ಮಂಡಳಿ ಆಗಸ್ಟ್ 28ಕ್ಕಿಂತ ಮುನ್ನ ಸಿಪಿಎಲ್ ಆಯೋಜಿಸುವುದು ಅಸಾಧ್ಯವೆನಿಸಿದೆ.
ಇದನ್ನೂ ಓದಿ: ಕೆಎಲ್ ರಾಹುಲ್ ಜತೆಗೆ ಗೆಳತಿ ಅಥಿಯಾ ಶೆಟ್ಟಿ ಕೂಡ ಸೌಥಾಂಪ್ಟನ್ನಲ್ಲಿ ಕ್ವಾರಂಟೈನ್?
ಈಗಾಗಲೆ ಇಂಗ್ಲೆಂಡ್, ನ್ಯೂಜಿಲೆಂಡ್, ಆಸ್ಟ್ರೇಲಿಯಾದ ಆಟಗಾರರು ಐಪಿಎಲ್ ಭಾಗ 2ರಲ್ಲಿ ಆಡುವುದು ಅನುಮಾನವೆನಿಸಿರುವ ನಡುವೆ ವಿಂಡೀಸ್‌ನ 9 ಆಟಗಾರರ ಅಲಭ್ಯತೆ ಭೀತಿಯೂ ಬಿಸಿಸಿಐನ್ನು ಕಾಡುತ್ತಿದೆ. ಇದಲ್ಲದೆ, ಇಮ್ರಾನ್ ತಾಹಿರ್, ಫಾಫ್ ಡು ಪ್ಲೆಸಿಸ್ ಮುಂತಾದ ದಕ್ಷಿಣ ಆಫ್ರಿಕಾ ಆಟಗಾರರೂ ಸಿಪಿಎಲ್ ತಂಡಗಳ ಭಾಗವಾಗಿದ್ದು, ಅವರ ಆಗಮನವೂ ವಿಳಂಬವಾಗುವ ಸಾಧ್ಯತೆ ಇದೆ.
![blank](https://www.vijayavani.net/wp-content/plugins/wp-fastest-cache-premium/pro/images/blank.gif)
ಇನ್ನು ಐಪಿಎಲ್ ಫ್ರಾಂಚೈಸಿಗಳಾದ ಕೋಲ್ಕತ ನೈಟ್ ರೈಡರ್ಸ್ (ಟ್ರಿನ್‌ಬಾಗೊ ನೈಟ್‌ರೈಡರ್ಸ್) ಮತ್ತು ಪಂಜಾಬ್ ಕಿಂಗ್ಸ್ (ಸೇಂಟ್ ಲೂಸಿಯಾ ಜೌಕ್ಸ್) ಸಿಪಿಎಲ್‌ನಲ್ಲೂ ತಂಡಗಳ ಒಡೆತನ ಹೊಂದಿದ್ದು, ಉಭಯ ಸಂಕಟಕ್ಕೀಡಾಗಿವೆ. ಜೌಕ್ಸ್ ತಂಡದಲ್ಲಿ ಪ್ಲೆಸಿಸ್ ಇದ್ದು, ಅವರು ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ಕಿಂಗ್ಸ್ ಆಟಗಾರರಾಗಿದ್ದರೆ, ಟ್ರಿನ್‌ಬಾಗೊ ತಂಡದಲ್ಲಿರುವ ಕೈರಾನ್ ಪೊಲ್ಲಾರ್ಡ್ ಮತ್ತು ಸುನೀಲ್ ನಾರಾಯಣ್ ಕ್ರಮವಾಗಿ ಮುಂಬೈ ಇಂಡಿಯನ್ಸ್ ಮತ್ತು ಕೆಕೆಆರ್ ಆಟಗಾರರೂ ಆಗಿದ್ದಾರೆ. ಹೀಗಾಗಿ ಈ ಆಟಗಾರರನ್ನು ಐಪಿಎಲ್‌ಗೆ ಮುಂಚಿತವಾಗಿ ಬಿಟ್ಟುಕೊಡುವ ಬಗ್ಗೆಯೂ ಗೊಂದಲ ಎದುರಾಗಲಿದೆ.
ಈ ಪಾಕ್ ಕ್ರಿಕೆಟಿಗನ ಪತ್ನಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಭಿಮಾನಿ!