More

    ವಿಶ್ವದ ಅತ್ಯಂತ ಪ್ರಭಾವಿ ಮಹಿಳೆಯರು ಇವರೇ..ಫೋರ್ಬ್ಸ್‌ ಪಟ್ಟಿಯಲ್ಲಿ ನಿರ್ಮಲಾ ಸೀತಾರಾಮನ್ ಸೇರಿ 4 ಭಾರತೀಯರು – ಮೊದಲ ಸ್ಥಾನದಲ್ಲಿ ಉರ್ಸುಲಾ

    ನವದೆಹಲಿ: ವ್ಯಾಪಾರ ನಿಯತಕಾಲಿಕೆ ಫೋರ್ಬ್ಸ್ ವಿಶ್ವದ 100 ಅತ್ಯಂತ ಪ್ರಭಾವಶಾಲಿ ಮಹಿಳೆಯರ 20 ನೇ ವಾರ್ಷಿಕ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಜಾಗತಿಕ ವೇದಿಕೆಯಲ್ಲಿ ಸ್ಪೂರ್ತಿದಾಯಕ ಮಹಿಳಾ ಸಿಇಒಗಳು, ಮನೋರಂಜಕರು, ರಾಜಕಾರಣಿಗಳು, ಲೋಕೋಪಕಾರಿಗಳು, ಹಣ ಮತ್ತು ಜಗತ್ತಿನ ಮೇಲೆ ಅತ್ಯಂತ ಪ್ರಭಾವ ಬೀರುತ್ತಿರುವ ನೀತಿ – ನಿರೂಪಕರನ್ನು ಒಳಗೊಂಡಿದ್ದು, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಸೇರಿ 4 ಭಾರತೀಯರು ಸ್ಥಾನ ಪಡೆದಿದ್ದಾರೆ.

    ಇದನ್ನೂ ಓದಿ:  ಸಿಯಾಚಿನ್​ಗೆ ಪ್ರಥಮ ಮಹಿಳಾ ವೈದ್ಯಾಧಿಕಾರಿ ಕ್ಯಾ. ಗೀತಿಕಾ ಕೌಲ್​ ನಿಯೋಜನೆ
    ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್(65) ಸತತ ಎರಡನೇ ವರ್ಷ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದು, ಅಗ್ರಸ್ಥಾನದಲ್ಲಿದ್ದಾರೆ. ಯುರೋಪಿಯನ್ ಸೆಂಟ್ರಲ್ ಬ್ಯಾಂಕ್ ಅಧ್ಯಕ್ಷ ಕ್ರಿಸ್ಟಿನ್ ಲಗಾರ್ಡೆ(67) ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಯುಎಸ್ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್(59) ಮೂರನೇ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೊನಿ (46) ನಾಲ್ಕನೇ ಸ್ಥಾನ ಪಡೆದಿದ್ದಾರೆ.
    ಅಮೇರಿಕನ್ ಗಾಯಕ-ಗೀತರಚನೆಕಾರ ಟೇಲರ್ ಸ್ವಿಫ್ಟ್(33) ಐದನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇವರು ಪಟ್ಟಿಯ ಇತಿಹಾಸದಲ್ಲಿ ಮನರಂಜನಾಕಾರರೊಬ್ಬರು ಅಗ್ರ ಐದರಲ್ಲಿ ಸ್ಥಾನ ಪಡೆದ ಮೊದಲಿಗರಾಗಿದ್ದಾರೆ.

    ಪಟ್ಟಿಯಲ್ಲಿ ನಾಲ್ವರು ಭಾರತೀಯರು…
    ನಿರ್ಮಲಾ ಸೀತಾರಾಮನ್ (32ನೇ ಶ್ರೇಯಾಂಕ)
    ಇನ್ನು ಬಿಜೆಪಿಯ ಪ್ರಮುಖ ನಾಯಕಿ, 2019 ರಿಂದ ಭಾರತದ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ, 2017 ರಿಂದ 2019 ರವರೆಗೆ 28 ​​ನೇ ರಕ್ಷಣಾ ಸಚಿವೆಯಾಗಿದ್ದರು. ಫೋರ್ಬ್ಸ್ 2022 ರ ಪಟ್ಟಿಯಲ್ಲಿ 36 ನೇ ಸ್ಥಾನ ಪಡೆದಿದ್ದ ನಿರ್ಮಲಾ ಸೀತಾರಾಮನ್(64) 2023 ರ ಪಟ್ಟಿಯಲ್ಲಿ 32 ನೇ ಸ್ಥಾನ ಪಡೆದಿದ್ದಾರೆ. ಇಂದಿರಾಗಾಂಧಿ ನಂತರ ರಕ್ಷಣಾ ಮತ್ತು ಹಣಕಾಸು ಖಾತೆ ನಿರ್ವಹಿಸಿದ ಭಾರತದ ಅತ್ಯಂತ ಪ್ರಭಾವಶಾಲಿ ಮಹಿಳೆ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

    ರೋಶನಿ ನಾಡರ್ ಮಲ್ಹೋತ್ರಾ(60ನೇ ಶ್ರೇಯಾಂಕ)
    ಎಚ್​ಸಿಎಲ್​ ಟೆಕ್ನಾಲಜೀಸ್‌ನ ಅಧ್ಯಕ್ಷರಾಗಿರುವ ಭಾರತೀಯ ಬಿಲಿಯನೇರ್ ಮತ್ತು ಸಮಾಜ ಸೇವಕಿ ರೋಶನಿನಾಡರ್ ಮಲ್ಹೋತ್ರಾ(42) ಫೋರ್ಬ್ಸ್ ಪಟ್ಟಿಯಲ್ಲಿ ಸತತ ಮೂರು ಬಾರಿ ಕಾಣಿಸಿಕೊಂಡಿದ್ದಾರೆ. ಅವರು 2019 ರಲ್ಲಿ 54, 2020 ರಲ್ಲಿ 55 ನೇ ಶ್ರೇಯಾಂಕ ಹಾಗೂ 2023 ರಲ್ಲಿ 60 ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಐಐಎಫ್​ಎಲ್​ ವೆಲ್ತ್ ಹುರುನ್ ಇಂಡಿಯಾ ರಿಚ್ ಲಿಸ್ಟ್ (2019) ಪ್ರಕಾರ ಅವರು ಭಾರತದ ಅತ್ಯಂತ ಶ್ರೀಮಂತ ಮಹಿಳೆ ಎಂದು ಗುರುತಿಸಲ್ಪಟ್ಟಿದ್ದಾರೆ.

    ಸೋಮಾ ಮೊಂಡಲ್ (70ನೇ ಶ್ರೇಯಾಂಕ)
    ಪ್ರಸ್ತುತ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾದ ಅಧ್ಯಕ್ಷೆ ಸೋಮಾ ಮೊಂಡಲ್(60) ಪಟ್ಟಿಯಲ್ಲಿ 70 ನೇ ಸ್ಥಾನದಲ್ಲಿದ್ದಾರೆ. ಪ್ರಮುಖ ಭಾರತೀಯ ಬಿಲಿಯನೇರ್, ಪ್ರಮುಖ ಉದ್ಯಮಿ. ಕಿರಣ್ ಮಜುಂದಾರ್ ಶಾ(70) ಅವರು 2023 ರ ಫೋರ್ಬ್ಸ್ ಶಕ್ತಿಶಾಲಿ ಮಹಿಳೆಯರ ಪಟ್ಟಿಯಲ್ಲಿ 76 ನೇ ಸ್ಥಾನದಲ್ಲಿದ್ದಾರೆ.

    ಕಿರಣ್ ಮಜುಂದಾರ್-ಶಾ (76ನೇ ಶ್ರೇಯಾಂಕ)
    ಕಿರಣ್ ಮಜುಂದಾರ್ ಶಾ(70) ಪ್ರಮುಖ ಭಾರತೀಯ ಬಿಲಿಯನೇರ್ ಉದ್ಯಮಿ. ಇವರು ಬೆಂಗಳೂರಿನಲ್ಲಿ ಬಯೋಕಾನ್ ಲಿಮಿಟೆಡ್ ಮತ್ತು ಬಯೋಕಾನ್ ಬಯೋಲಾಜಿಕ್ಸ್ ಲಿಮಿಟೆಡ್ ಅನ್ನು ಸ್ಥಾಪಿಸಿ ಮುನ್ನಡೆಸಸುತ್ತಿದ್ದಾರೆ. ಜೈವಿಕ ತಂತ್ರಜ್ಞಾನ ಕಂಪನಿಗಳಲ್ಲಿ ಇವರ ಪಾತ್ರ ಪ್ರಮುಖವಾದದ್ದು. ಇವರು ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ಮಾಜಿ ಅಧ್ಯಕ್ಷರೂ ಆಗಿದ್ದರು. ಮಜುಂದಾರ್ ಶಾ ವಿಜ್ಞಾನ ಮತ್ತು ರಸಾಯನಶಾಸ್ತ್ರಕ್ಕೆ ನೀಡಿದ ಕೊಡುಗೆಗಳಿಗಾಗಿ 2014 ರಲ್ಲಿ ಓತ್ಮರ್ ಚಿನ್ನದ ಪದಕ ಸೇರಿದಂತೆ ಹಲವಾರು ಪುರಸ್ಕಾರಗಳನ್ನು ಪಡೆದಿದ್ದಾರೆ. ಅವರು 2011 ರಲ್ಲಿ ಫೈನಾನ್ಶಿಯಲ್ ಟೈಮ್ಸ್‌ನ ಟಾಪ್ 50 ಮಹಿಳೆಯರ ವ್ಯಾಪಾರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದರು. ಫೋರ್ಬ್ಸ್ ಪಟ್ಟಿಯಲ್ಲಿ 2019 ರಲ್ಲಿ 68 ನೇ ಸ್ಥಾನ ಮತ್ತು 2020 ರಲ್ಲಿ ವರ್ಷದ ಇವೈ ವಿಶ್ವ ವಾಣಿಜ್ಯೋದ್ಯಮಿ ಎಂದು ಗೌರವಿಸಲ್ಪಟ್ಟರು. 2023 ರ ಫೋರ್ಬ್ಸ್ ಪಟ್ಟಿಯಲ್ಲಿ ಅವರು 76 ನೇ ಸ್ಥಾನದಲ್ಲಿದ್ದಾರೆ.

    ಹೊರದೇಶದಲ್ಲಿದ್ದುಕೊಂಡೇ ಆರ್ಥಿಕ ವಂಚನೆ: 100 ವೆಬ್​ಸೈಟ್​ ನಿರ್ಬಂಧಿಸಿದ ಕೇಂದ್ರ ಗೃಹ ಸಚಿವಾಲಯ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts