More

    ಬೃಹತ್ ಪ್ರಮಾಣದ ನಕಲಿ ನೋಟು – ನಾಲ್ವರ ಬಂಧನ

    ಥಾಣೆ: ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಬೃಹತ್ ಪ್ರಮಾಣದ ನಕಲಿ ನೋಟು ಪತ್ತೆಯಾಗಿದ್ದು, ನಾಲ್ವರು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಮುಂಬ್ರಾದಲ್ಲಿ ನಕಲಿ ನೋಟುಗಳ ಚಲಾವಣೆ ಹೆಚ್ಚಾಗಿದೆ ಎಂಬ ವಿಚಾರ ಮತ್ತು ನಡೆಸುತ್ತಿರುವವ ಖಚಿತ ಮಾಹಿತಿ ಸಿಕ್ಕ ಕಾರಣ ಥಾಣೆ ಪೊಲೀಸರು ಮಂಗಳವಾರ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾಗಿ ಅಪರಾಧ ವಿಭಾಗದ ಡಿಸಿಪಿ ಲಕ್ಷ್ಮೀಕಾಂತ ಪಾಟೀಲ್ ಬುಧವಾರ ತಿಳಿಸಿದ್ದಾರೆ.

    ಬಂಧಿತರನ್ನು ಮುಝಾಮಿಲ್ ಮೊಹಮ್ಮದ್ ಸಾಲ್ಹೇ ಸುರ್ವೇ (40), ಮುಜಾಫರ್​ ಶೌಕತ್​ ಪಾವಸ್ಕರ್​ (41), ಪ್ರವೀಣ್ ಪಾರ್ಮರ್ (43), ನಸ್ರೀನ್ ಇಮ್ತಿಯಾಜ್​ ಕಾಝಿ (41) ಎಂದು ಗುರುತಿಸಲಾಗಿದೆ. ಅವರಿಂದ 11.49 ಲಕ್ಷ ರೂಪಾಯಿ ಮುಖ ಬೆಲೆಯ ನಕಲಿ ನೋಟುಗಳನ್ನು ಪೊಲೀಸರು ವಶಪಡಿಸಿದ್ದಾರೆ. ಬಂಧಿತರ ಪೈಕಿ ಸುರ್ವೇ ಮತ್ತು ಕಾಝಿ ಮುಂಬ್ರಾದವರಾದರೆ ಉಳಿದಿಬ್ಬರು ಮುಂಬೈನವರು.

    ಇದನ್ನೂ ಓದಿ: ದಾವೂದ್ ಆಪ್ತ ಇಕ್ಬಾಲ್ ಮಿರ್ಚಿಯ 500 ಕೋಟಿ ರೂಪಾಯಿ ಆಸ್ತಿ ಜಾರಿ ನಿರ್ದೇಶನಾಲಯದ ವಶದಲ್ಲಿ ಭದ್ರ

    ಪಾರ್ಮರ್​ ಬಳಿ ಸ್ಕ್ಯಾನರ್ ಪ್ರಿಂಟರ್ ಇದ್ದು, ಅದರ ಮೂಲಕವೇ ಪಾಸ್ಕರ್ ನೆರವಿನೊಂದಿಗೆ ನೋಟು ಮುದ್ರಿಸಿದ್ದಾಗಿ ತಪ್ಪೊಪ್ಪಿಗೆ ನೀಡಿದ್ದಾರೆ. ಬಂಧಿತರ ಬಳಿ ಏಳು ಮೊಬೈಲ್ ಫೋನ್​ಗಳಿದ್ದವು. ಅವುಗಳನ್ನು ಕೂಡ ವಶಪಡಿಸಿಕೊಂಡಿರುವ ಪೊಲೀಸರು, ನಕಲಿ ನೋಟು ಜಾಲಕ್ಕೆ ಸಂಬಂಧಿಸಿದ ತನಿಖೆಯನ್ನು ಇನ್ನಷ್ಟು ಚುರುಕುಗೊಳಿಸಿದ್ದಾರೆ. (ಏಜೆನ್ಸೀಸ್)

    ಮಹಾರಾಷ್ಟ್ರದಲ್ಲಿ ಅಂತಾರಾಜ್ಯ ಜಿಎಸ್​​ಟಿ ನಕಲಿ ಇನ್ವಾಯ್ಸ್ ಜಾಲ ಪತ್ತೆ – ಕರ್ನಾಟಕದಲ್ಲೇ ಇದ್ದಾನಂತೆ ಕಿಂಗ್​ಪಿನ್​ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts