More

    ಮಹಾರಾಷ್ಟ್ರದಲ್ಲಿ ಅಂತಾರಾಜ್ಯ ಜಿಎಸ್​​ಟಿ ನಕಲಿ ಇನ್ವಾಯ್ಸ್ ಜಾಲ ಪತ್ತೆ – ಕರ್ನಾಟಕದಲ್ಲೇ ಇದ್ದಾನಂತೆ ಕಿಂಗ್​ಪಿನ್​ !

    ನಾಗಪುರ: ಅಂತಾರಾಜ್ಯಮಟ್ಟದ ಜಿಎಸ್​ಟಿ ನಕಲಿ ಇನ್ವಾಯ್ಸ್ ಜಾಲ ಒಂದನ್ನು ಡೈರೆಕ್ಟೋರೇಟ್ ಜನರಲ್ ಆಫ್​ ಜಿಎಸ್​ಟಿ ಇಂಟೆಲಿಜೆನ್ಸ್ (ಡಿಜಿಜಿಐ) ಪತ್ತೆ ಹಚ್ಚಿದ್ದು, ಕೋಟ್ಯಂತರ ರೂಪಾಯಿ ವಹಿವಾಟು, ತೆರಿಗೆ ವಂಚನೆ ನಡೆದಿದೆ. ಈ ನಕಲಿ ಇನ್ವಾಯ್ಸ್ ಜಾಲದವರಿಂದ ಇನ್ವಾಯ್ಸ್ ಪಡೆದುಕೊಂಡ ಮೂವರು ತೆರಿಗೆದಾರರ ಪೈಕಿ ಒಬ್ಬರು ಮಹಾರಾಷ್ಟ್ರದವರಾದರೆ, ಇನ್ನಿಬ್ಬರು ಕರ್ನಾಟಕದವರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಚಂದ್ರಾಪುರ ಜಿಲ್ಲೆಯಲ್ಲಿ ತೆರಿಗೆದಾರರೊಬ್ಬರು ನಕಲಿ ಇನ್ವಾಯ್ಸ್ ಬಳಸಿದ ಬಗ್ಗೆ ದೂರು ಬಂದ ಕಾರಣ ತನಿಖೆ ನಡೆಸಿದ ವೇಳೆ ಈ ಜಾಲ ಪತ್ತೆಯಾಗಿದೆ. ನಕಲಿ ಇನ್ವಾಯ್ಸ್ ಬಳಸಿಕೊಂಡು ತಪ್ಪಾದ ಇನ್​ಪುಟ್​ ಟ್ಯಾಕ್ಸ್ ಕ್ರೆಡಿಟ್​ (ಐಟಿಸಿ) ಕ್ಲೇಮ್ ಮಾಡಲಾಗಿತ್ತು. ಒಟ್ಟಾರೆ 131 ಕೋಟಿ ರೂಪಾಯಿ ವಹಿವಾಟು ನಡೆಸಿದ ತೆರಿಗೆ ವಂಚಕರು 26 ಕೋಟಿ ರೂಪಾಯಿ ಐಟಿಸಿ ಕ್ಲೇಮ್ ಮಾಡಿದ್ದಾರೆ.

    ಇದನ್ನೂ ಓದಿ: ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಯಲ್ಲಿ ಸರ್ಕಾರದ ತಪ್ಪಿಲ್ಲ ಎಂದ ವಿಧಾನ ಪರಿಷತ್ ಸದಸ್ಯ ಶಶೀಲ ಜಿ.ನಮೋಶಿ

    ನಕಲಿ ಇನ್ವಾಯ್ಸ್ ಒದಗಿಸುವ ಜಾಲದ ಕಿಂಗ್​ಪಿನ್​ ಕರ್ನಾಟಕದಲ್ಲೇ ಇದ್ದಾನೆ. ಆತನನ್ನು ಬಲೆಗೆ ಕೆಡವಲು ಡಿಜಿಜಿಐ ಅಧಿಕಾರಿಗಳು ಈಗಾಗಲೇ ಕ್ರಮ ತೆಗೆದುಕೊಂಡಿದ್ದಾರೆ. ಕರ್ನಾಟಕದಲ್ಲೂ ಅನೇಕರು ಈತನಿಂದ ನಕಲಿ ಇನ್ವಾಯ್ಸ್ ಪಡೆಯುತ್ತಿರುವುದು ಗಮನಕ್ಕೆ ಬಂದಿದ್ದು, ವ್ಯಾಪಕ ತೆರಿಗೆ ವಂಚನೆ ಆಗಿರುವ ಸಾಧ್ಯತೆ ಇದ್ದು, ತನಿಖೆ ಆರಂಭಿಸಲಾಗಿದೆ ಎಂದು ಡಿಜಿಜಿಐ ಮೂಲಗಳು ತಿಳಿಸಿವೆ. (ಏಜೆನ್ಸೀಸ್)

    ದಾವೂದ್ ಆಪ್ತ ಇಕ್ಬಾಲ್ ಮಿರ್ಚಿಯ 500 ಕೋಟಿ ರೂಪಾಯಿ ಆಸ್ತಿ ಜಾರಿ ನಿರ್ದೇಶನಾಲಯದ ವಶದಲ್ಲಿ ಭದ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts