More

    ಉಗ್ರರು ಶೇಖರಿಸಿಟ್ಟಿದ್ದ ಗ್ರೆನೇಡ್ ಪತ್ತೆ ಮಾಡಿದ ಸಿಸಿಬಿ, ಒಂದೇ ಬಾರಿಗೆ ನಾಲ್ಕು ಹ್ಯಾಂಡ್ ಗ್ರೆನೇಡ್ ಪತ್ತೆ; ಪೊಲೀಸರಲ್ಲಿ ಹೆಚ್ಚಿದ ಆತಂಕ!

    ಬೆಂಗಳೂರು: ಶಂಕಿತ ಉಗ್ರರು ಶೇಖರಿಸಿಟ್ಟಿದ್ದ ಗ್ರೆನೇಡ್ ಅನ್ನು ಸಿಸಿಬಿ ಪತ್ತೆ ಮಾಡಿದೆ. ನಾಲ್ಕೈದು ಗ್ರೆನೇಡ್ ಪತ್ತೆ ಮಾಡಲಾಗಿದ್ದು, ಪೌಡರ್ ರೂಪದ ಕೆಮಿಕಲ್​​​​​ನಿಂದ ಸ್ಫೋಟವಾಗದಂತೆ ಶಂಕಿತರು ಕೊಡಿಗೆಹಳ್ಳಿಯ ನಿವಾಸದಲ್ಲಿ ಅಡಗಿಸಿಟ್ಟಿದ್ದರು. ಇದೀಗ ಎಲ್ಲಾ ಗ್ರೆನೇಡ್​​ಗಳನ್ನು ಸೀಜ್ ಮಾಡಲಾಗಿದೆ. ಗ್ರೆನೇಡ್ ಬ್ಲಾಸ್ಟ್ ಆಗದೆ ಇರುವ ರೀತಿಯಲ್ಲಿ ಪ್ಲಾನ್ ಮಾಡಿ, ಶೇಖರಿಸಿಡಲಾಗಿದ್ದು, ಮರಳು ಮೂಟೆಯೊಳಗೆ ಅಡಗಿಸಿಡಲಾಗಿತ್ತು. ವಿಶೇಷ ತಂಡಗಳಿಂದ ಶಂಕಿತರ ವಿಚಾರಣೆ ನಡೆಸಲಾಗುತ್ತಿದ್ದು, ಏಳು ದಿನ ಕಸ್ಟಡಿಗೆ ಪಡೆಯಲಾಗಿದೆ.

    ಇದನ್ನೂ ಓದಿ: ಈ ವಾರದ ಕನ್ನಡ ಸೀರಿಯಲ್​​​​ಗಳ ಟಿಆರ್​​​​​ಪಿ; ಭಾರೀ ಪೈಪೋಟಿಯಲ್ಲಿರುವ ಧಾರಾವಾಹಿಗಳಿವು…

    ಐದನೇ ಆರೋಪಿಗೆ ಕೆಲ ವಸ್ತು ನೀಡಿದ್ದ ಜುನೈದ್
    ಐದನೇ ಆರೋಪಿಗೆ ಜುನೈದ್ ಕೆಲ ವಸ್ತುಗಳನ್ನ ನೀಡಿದ್ದು, ಅವುಗಳನ್ನ ತನ್ನ ಮನೆಯ ಸೀಕ್ರೆಟ್ ಅಲ್ಮೆರದಲ್ಲಿ ಇಡಲಾಗಿತ್ತು. ಈ ಮಾಹಿತಿ ಮೇರೆಗೆ ನಾಲ್ಕು ಜೀವಂತ ಗ್ರೆನೇಡ್​​ಗಳನ್ನು ವಶಪಡಿಸಿಕೊಳ್ಳಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಶರಣಪ್ಪ ಹೇಳಿಕೆ ನೀಡಿದ್ದಾರೆ.

    ಪೊಲೀಸರಲ್ಲಿ ಆತಂಕ
    ಹ್ಯಾಂಡ್ ಗ್ರೆನೇಡ್ ಬೆಂಗಳೂರಿನಲ್ಲಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಪೊಲೀಸರಲ್ಲಿ ಆತಂಕ ಹೆಚ್ಚಾಗಿದೆ. ಇದುವರೆಗೂ ರಾಜ್ಯದಲ್ಲಿ ಜೀವಂತ ಹ್ಯಾಂಡ್ ಗ್ರೆನೇಡ್ ಪತ್ತೆಯಾಗಿರಲಿಲ್ಲ. ಆದರೆ ಸಿಲಿಕಾನ್ ಸಿಟಿಯಲ್ಲಿ ಒಂದೇ ಬಾರಿಗೆ ನಾಲ್ಕು ಹ್ಯಾಂಡ್ ಗ್ರೆನೇಡ್ ಪತ್ತೆಯಾಗಿವೆ.

    2021 ರಲ್ಲಿ ಉಪ್ಪಿನಂಗಡಿ ಬಳಿ ಐದು ಹ್ಯಾಂಡ್ ಗ್ರೆನೇಡ್ ಪತ್ತೆಯಾಗಿದ್ದವು. ನೆಲದಲ್ಲಿ ಪತ್ತೆಯಾಗಿದ್ದ ಇವು 40 ವರ್ಷದಷ್ಟು ಹಳೆಯ ಗ್ರೆನೇಡ್​​ಗಳಾಗಿದ್ದವು. ನಂತರ 2022 ರಲ್ಲಿ ಅಥಣಿ ಬಳಿಯ ಶಾಲೆಯೊಂದರಲ್ಲಿ ಒಂದು ಹ್ಯಾಂಡ್ ಗ್ರೆನೇಡ್ ಪತ್ತೆಯಾಗಿತ್ತು. ಮಕ್ಕಳು ಚೆಂಡು ಎಂದು ಆಟವಾಡುವಾಗ ನಿರ್ಜೀವ ಗ್ರೆನೇಡ್ ಪತ್ತೆಯಾಗಿತ್ತು. ಇದಾದ ಬಳಿಕ ರಾಜಧಾನಿಯಲ್ಲೆ ಭಾರಿ ಪ್ರಮಾಣದ ನಾಲ್ಕು ಜೀವಂತ ಹ್ಯಾಂಡ್ ಗ್ರೆನೇಡ್ ಪತ್ತೆಯಾಗಿದೆ.

    ಇದನ್ನೂ ಓದಿ: ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ತಾಯಿ; ಆಮೇಲಾಗಿದ್ದು ಮಾತ್ರ…!

    ಹ್ಯಾಂಡ್ ಗ್ರೆನೇಡ್ ಎಂದರೇನು?
    ಇದು ಡೆಟೋನೇಟರ್ ತಂತ್ರಜ್ಞಾನದಿಂದ ತಯಾರಾಗುವ ಸ್ಪೋಟಕ. ಸೇಫ್ಟಿ ಫಿನ್ ಅಥವಾ ಕಾಟರ್ ಪಿನ್ ನಿಂದ ನಿಯಂತ್ರಿಸಲ್ಪಡುತ್ತದೆ. ಹ್ಯಾಂಡ್ ಗ್ರೆನೇಡ್ ಗಳಲ್ಲಿ ಹಲವು ವಿಧಗಳಿವೆ ರಾಸಾಯನಿಕ ಗ್ರೆನೇಡ್ ಗಳು, ಸ್ಟನ್ ಗನ್ ಗ್ರೆನೇಡ್ ಗಳು, ಭಾರಿ ಸ್ಪೋಟಕದ ಗ್ರೆನೇಡ್ ಗಳು. ಇವುಗಳು ಕೇವಲ ಕೆಲವೊಂದು ಅಡಿಗಳಷ್ಟು ಮಾತ್ರ ಪರಿಣಾಮ ಬೀರುತ್ತವೆ. ಆದರೆ ವಿದೇಶಿ ಗ್ರೆನೇಡ್ ಗಳಾದ Dam51,mk3a2 ಗ್ರೆನೇಡ್ ಗಳು ಭಾರಿ ಪ್ರಮಾಣದ ಸ್ಪೋಟವನ್ನು ಉಂಟು ಮಾಡುತ್ತವೆ. 40 ಮೀಟರ್ ನಿಂದ 200 ಮೀಟರ್ ವರೆಗೂ ಈ ಗ್ರೆನೇಡ್ ಗಳು ಪರಿಣಾಮ ಬೀರುತ್ತವೆ. ಹೀಗಾಗಿ ಈಗ ಸಿಕ್ಕಿರುವ ಗ್ರೆನೇಡ್ ಗಳ ಬಗ್ಗೆ ಸಿಸಿಬಿಯಿಂದ ತನಿಖೆ ಮುಂದುವರೆದಿದೆ.

    ಬೆಕ್ಕಿನ ಮರಿಯನ್ನು ಎದೆಗವಚಿಕೊಂಡು ತಿರುಗಾಡುತ್ತಿರುವ ಕೋತಿ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts