More

    ನಿರಂತರ ಅಧ್ಯಯನ ಶಿಸ್ತು ಕಲಿಸುತ್ತದೆ

    ಯಾದಗಿರಿ: ಬೆಳೆಯುತ್ತಿರುವ ಯಾದಗಿರಿ ನಗರದಲ್ಲಿ ಉನ್ನತ ಹಾಗೂ ಗುಣಮಟ್ಟದ ಶಿಕ್ಷಣ ಕೊಡುವ ವಿದ್ಯಾಸಂಸ್ಥೆಗಳ ಸಂಖ್ಯೆ ಹೆಚ್ಚಾಗುವ ಅವಶ್ಯಕತೆ ಇದೆ ಎಂದು ಮಾಜಿ ಸಚಿವ ಡಾ.ಎ.ಬಿ.ಮಾಲಕರಡ್ಡಿ ಅಭಿಪ್ರಾಯಪಟ್ಟರು.

    ನಗರದ ಹೊರ ವಲಯದಲ್ಲಿನ ಆರ್ಯಭಟ ಇಂಟರ್ನ್ಯಾಶನಲ್ ಶಾಲೆಯಲ್ಲಿ ಭಾನುವಾರ ಸಂಜೆ ಜರುಗಿದ ಸಂಸ್ಥೆಯ 3ನೇ ವಾಷರ್ಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದ ಇತರೇ ಜಿಲ್ಲೆಗಳಿಗೆ ಹೋಲಿಸಿದರೆ ಯಾದಗಿರಿ ಅತ್ಯಂತ ಚಿಕ್ಕಜಿಲ್ಲೆ. ಅಲ್ಲದೆ ಶೈಕ್ಷಣಿಕ, ಸಾಮಾಜಿಕವಾಗಿ ಹಿಂದುಳಿದ ಈ ಜಿಲ್ಲೆಯಲ್ಲಿನ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡುವ ಸಂಸ್ಥೆ ಆರಂಭಗೊಳ್ಳಬೇಕು ಎಂದು ನಾನು ಬಹುದಿನಗಳ ಹಿಂದಿನಿಂದಲೂ ಕನಸು ಕಂಡವನು ಎಂದರು.
    ಈ ಹಿಂದೆ ನಾನು ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವನಾಗಿ ಕೆಲಸ ಮಾಡಿದ್ದ ವೇಳೆ ಜಿಲ್ಲೆಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದೆ. ತಾಲೂಕಾ ಆಸ್ಪತ್ರೆಯನ್ನು ಜಿಲ್ಲಾಸ್ಪತ್ರೆಯಾಗಿ ಮೇಲ್ದಜರ್ೆಗೇರಿಸಿ, ಉತ್ತಮ ಆರೋಗ್ಯ ಸೇವೆಗೆ ಅನುಕೂಲ ಮಾಡಿದ್ದೇನೆ. ಜತೆಯಲ್ಲಿ ಗ್ರಾಮ, ಹೋಬಳಿ ಹಾಗೂ ತಾಲೂಕು ಮಟ್ಟದಲ್ಲಿ ಸರ್ಕಾರದಿಂದ ಆಸ್ಪತ್ರೆಗಳನ್ನು ಮಂಜೂರುಗೊಳಿಸಿದ್ದೇನೆ ಎಂದು ಕಾರ್ಯವನ್ನು ಮೆಲುಕಿ ಹಾಕಿದರು.

    ನಿರಂತರ ಅಧ್ಯಯನ ಜೀವನದಲ್ಲಿ ಶಿಸ್ತು ಹಾಗೂ ಸಮಯ ಪಾಲನೆ ಕಲಿಸಿಕೊಡುತ್ತದೆ. ಇಂದಿಗೂ ನಾನು ದಿನದ 10 ಗಂಟೆ ಅಧ್ಯಯನ ಮಾಡುತ್ತೇನೆ. ನಾನು ಓದುವದನ್ನು ಕಂಡ ನನ್ನ ಅನೇಕ ಸಹಪಾಠಿಗಳು ಜನ ನೀವೇನಾದರೂ ಸ್ಪರ್ಧಾತ್ಮಕ ಪರೀಕ್ಷೆ ಬರೆಯುತ್ತಿದ್ದೀರಾ? ಎಂದು ಪ್ರಶ್ನಿಸುತ್ತಾರೆ. ಯಾದಗಿರಿ ನಗರ ಈ ಮೊದಲಿನಂತಿಲ್ಲ. ಜಿಲ್ಲಾಕೇಂದ್ರವಾದ ಮೇಲೆ ಸಾಕಷ್ಟು ಅಭಿವೃದ್ಧಿಯಾಗುತ್ತಿದೆ ಎಂದು ಹೇಳಿದರು.

    ಸಿವಿಲ್ ನ್ಯಾಯಾಧೀಶ ಲೋಕೇಶಕುಮಾರ ಮಾತನಾಡಿ, ಮಕ್ಕಳಿಗೆ ಶಿಕ್ಷಣ ಯಾವತ್ತೂ ಹೊರೆಯಾಗಬಾರದು. ಪಾಲಕರು ಮಕ್ಕಳಲ್ಲಿ ಸೃಜನಶೀಲತೆ ಹೆಚ್ಚಿಸಲು ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಪ್ರೋತ್ಸಾಹಿಸಬೇಕು. ಮನೆಯಲ್ಲಿದ್ದಾಗ ಮಕ್ಕಳ ಕೈಯಲ್ಲಿ ಆದಷ್ಟು ಮೊಬೈಲ್ ಕೊಡುವುದನ್ನು ನಿಲ್ಲಿಸಬೇಕು ಎಂದು ಸಲಹೆ ನೀಡಿದರು.

    ಸಂಸ್ಥೆ ಅಧ್ಯಕ್ಷ ಸುಧಾಕರರಡ್ಡಿ ಮಾತನಾಡಿ, ಯಾದಗಿರಿಯಲ್ಲಿ ದೊಡ್ಡ ಪ್ರಮಾಣದ ಶಿಕ್ಷಣ ಸಂಸ್ಥೆ ಕಟ್ಟಿ ಹಣ ಗಳಿಕೆ ಮಾಡಬೇಕು ಎಂಬ ಉದ್ದೇಶ ನಮ್ಮದಲ್ಲ. ದೂರದ ರಾಜ್ಯಗಳಲ್ಲಿ ಸಿಗುವಂತ ಗುಣಮಟ್ಟದ ಶಿಕ್ಷಣ ನಮ್ಮೂರಲ್ಲೂ ಸಿಗಬೇಕು. ಜತೆಗೆ ಮಕ್ಕಳಿಗೆ ಶಿಕ್ಷಣದ ಜತೆ ಉತ್ತಮ ಸಂಸ್ಕಾರ ಕೊಡಬೇಕು ಎಂಬ ಮಹತ್ವಾಕಾಂಕ್ಷೆಯಿಂದ ಸಂಸ್ಥೆ ಸ್ಥಾಪಿಸಿದ್ದೇವೆ ಎಂದು ವಿವರಿಸಿದರು.

    ಶಾಲೆಯ ಪ್ರಾಚಾರ್ಯ ಪಿ.ಅರವಿಂದಾಕ್ಷಣ್ ಸಂಸ್ಥೆಯ ವಾರ್ಷಿಕ ವರದಿ ವಾಚಿಸಿದರು. ಪ್ರಮುಖರಾದ ವೆಂಕಟರಡ್ಡಿ ಪಾಟೀಲ್, ಜಿಪಂ ಮಾಜಿ ಅಧ್ಯಕ್ಷ ಬಸರಡ್ಡಿ ಪಾಟೀಲ್ ಅನಪುರ ಇದ್ದರು. ಶಾಲೆಯ ವಿದ್ಯಾರ್ಥಿಗಳಿಂದ ಜರುಗಿದ ಸಾಂಸ್ಕೃತಿಕ ಕಾರ್ಯಕ್ರಮ ಜನಮನ ಸೆಳೆದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts