More

    21 ಬಾಲಕಿಯರನ್ನು ದತ್ತು ಪಡೆದ ಮಾಜಿ ಹಾಕಿ ಆಟಗಾರ

    ರೋಹ್ಟಕ್: ಛತ್ತೀಸ್‌ಗಢದ ಸುಕ್ಮಾದಲ್ಲಿ ನಕ್ಸಲರ ದಾಳಿಯಿಂದ ಹುತಾತ್ಮರಾದ 17 ಸಿಆರ್‌ಪಿಎಫ್​ ಯೋಧರ ಕುಟುಂಬಕ್ಕೆ ಸಹಾಯಕ್ಕೆ ನಿಂತ ಬಿಜೆಪಿ ಸಂಸದ ಹಾಗೂ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಮಕ್ಕಳ ಶಿಕ್ಷಣ ವೆಚ್ಚ ಭರಿಸುವುದಾಗಿ ಘೋಷಿಸಿದ್ದರು. ಇದರಿಂದ ಸ್ಫೂರ್ತಿ ಪಡೆದ ಮಾಜಿ ಹಾಕಿ ಆಟಗಾರನೊಬ್ಬ ತವರಿನಲ್ಲಿ ಸಂಕಷ್ಟದಲ್ಲಿರುವ 21 ಹೆಣ್ಣು ಮಕ್ಕಳಿಗೆ ಶಿಕ್ಷಣದ ವೆಚ್ಚ ಭರಿಸಲು ಮುಂದಾಗಿದ್ದಾರೆ. ಶಿಕ್ಷಣ ಮಾತ್ರವಲ್ಲದೇ ಕ್ರೀಡಾ ಚಟುವಟಿಕೆಗೂ ಸಂಪೂರ್ಣ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ.

    ಇದನ್ನೂ ಓದಿ: ಚಿರು ಮೇಲಿನ ಮೇಘನಾ ಪ್ರೀತಿ ಎಂಥದ್ದು ಎಂಬುದಕ್ಕೆ ಆ ಒಂದು ಇನ್​ಸ್ಟಾಗ್ರಾಂ ಪೋಸ್ಟ್​ನಲ್ಲಿದೆ ಉತ್ತರ

    ಹರಿಯಾಣದ ರೋಹ್ಟಕ್ ಜಿಲ್ಲೆಯ ಬೊಹರ್ ಗ್ರಾಹದ ಮಾಜಿ ಆಟಗಾರ ಅಜಿತ್ ಪಾಲ್ ನಂದಾಲ್, ಸ್ವಗ್ರಾಮದ ಸರ್ಕಾರ ಶಾಲೆಯಲ್ಲಿ 6 ರಿಂದ 12 ತರಗತಿವರೆಗೆ ಓದುತ್ತಿರುವ 21 ಹೆಣ್ಣುಮಕ್ಕಳಿಗೆ ಸಹಾಯಕ್ಕೆ ಮುಂದಾಗಿದ್ದಾರೆ. ಕೇವಲ ಶಿಕ್ಷಣಕ್ಕೆ ಅಲ್ಲದೆ, ಕ್ರೀಡಾ ಪರಿಕರಗಳನ್ನು ಒದಗಿಸಿದ್ದಾರೆ. 12ನೇ ತರಗತಿ ಮುಕ್ತಾಯಗೊಳಿಸುವವರೆಗೂ ಅಜಿತ್ ಪಾಲ್ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಅಲ್ಲದೆ, ರೋಹ್ಟಕ್‌ನಲ್ಲಿ ಅಜಿತ್ ಸ್ವತಃ ಜಿಮ್ನಾಸ್ಟಿಕ್ ಹೊಂದಿದ್ದು, ವಿದ್ಯಾರ್ಥಿನಿಯರಿಗೆ ಉಚಿತವಾಗಿ ನೀಡಲಾಗುತ್ತಿದೆ.

    21 ಬಾಲಕಿಯರನ್ನು ದತ್ತು ಪಡೆದ ಮಾಜಿ ಹಾಕಿ ಆಟಗಾರ

    ಟೋಕಿಯೊ ಒಲಿಂಪಿಕ್ಸ್‌ಗಾಗಿ ಪ್ರಧಾನಿ ನರೇಂದ್ರ ಮೋದಿಗೆ ರಚಿಸಿರುವ ಟಾಸ್ಕ್ ಫೋರ್ಸ್‌ನ ಸದಸ್ಯರೂ ಆಗಿರುವ ಅಜಿತ್ ಪಾಲ್, ಈ ಕಾರ್ಯಕ್ಕೆ ಕೈಹಾಕಲು ಮಾಜಿ ಕ್ರಿಕೆಟಿಗ ಗಂಭೀರ್ ಪ್ರೇರಣೆಯಂತೆ. ಜತೆಗೆ 2016ರ ರಿಯೋ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸಾಕ್ಷಿ ಮಲಿಕ್‌ಗೂ ತಿಳಿ ಹೇಳಿರುವ ಅಜಿತ್, ಬಡ ಹೆಣ್ಣುಮಕ್ಕಳಿಗೆ ಪ್ರೋತ್ಸಾಹ ನೀಡುವಂತೆ ಮನವಿ ಮಾಡಿದ್ದಾರೆ.

    ಬಯಲಾಯ್ತು ಜಾಕ್​ಪಾಟ್​ ಹುಡುಗಿಯ ಲಿವ್​-ಇನ್​ ಕಥೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts