More

    ಟಿಎಂಸಿ ಸೇರಿದ ಮಾಜಿ ಹಣಕಾಸು ಸಚಿವ ಯಶವಂತ್ ಸಿನ್ಹಾ

    ಕೊಲ್ಕತಾ: ವಿಧಾನಸಭಾ ಚುನಾವಣೆಯ ಹೊಸ್ತಿರಲ್ಲಿರುವ ಪಶ್ಚಿಮ ಬಂಗಾಳವು ಹಲವಾರು ರಾಜಕೀಯ ಬದಲಾವಣೆಗಳು, ಬೆಳವಣಿಗೆಗಳಿಗೆ ತವರಾಗಿದೆ. ಇದೀಗ ಭಾರತದ ಮಾಜಿ ವಿತ್ತ ಸಚಿವರಾಗಿದ್ದ ಒಂದು ಕಾಲದ ಬಿಜೆಪಿ ಹಿರಿಯ ನಾಯಕ ಯಶವಂತ ಸಿನ್ಹಾ, ತೃಣಮೂಲ ಕಾಂಗ್ರೆಸ್(ಟಿಎಂಸಿ) ಸೇರಿದ್ದಾರೆ.

    1990-1991 ರಲ್ಲಿ ಮಾಜಿ ಪ್ರಧಾನಿ ಚಂದ್ರಶೇಖರ್ ಸರ್ಕಾರದಲ್ಲಿ ಮತ್ತು 1998 ರಿಂದ 2002 ರವರೆಗೆ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದ ಸಿನ್ಹಾ, 2002 ರಿಂದ 2004 ರವರೆಗೆ ದೇಶದ ವಿದೇಶಾಂಗ ಸಚಿವರಾಗಿ ಕೂಡ ಕಾರ್ಯ ನಿರ್ವಹಿಸಿದ್ದಾರೆ. ಏಪ್ರಿಲ್ 2018 ರಲ್ಲಿ ಸಿನ್ಹಾ, ಬಿಜೆಪಿ ಮತ್ತು ರಾಜಕೀಯವನ್ನು ತೊರೆದಿದ್ದರು. ಅವರ ಪುತ್ರ ಜಯಂತ್ ಸಿನ್ಹಾ ಕಳೆದ ಬಾರಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರದಲ್ಲಿ ರಾಜ್ಯ ಸಚಿವರಾಗಿ ಕಾರ್ಯನಿರ್ವಹಿಸಿದ್ದು, 2019 ರಲ್ಲಿ ಮತ್ತೆ ಆಯ್ಕೆಯಾಗಿ ಬಿಜೆಪಿ ಸಂಸದರಾಗಿ ಮುಂದುವರೆದಿದ್ದಾರೆ.

    ಇದನ್ನೂ ಓದಿ: “ಬಡವರ ಸೇವೆ ಮಾಡಬೇಕೆನ್ನೋ ಸ್ವಾರ್ಥದಲ್ಲಿ ಬಿಜೆಪಿ ಸೇರಿರುವೆ” : ಮಿಥುನ್ ಚಕ್ರವರ್ತಿ

    ಇದೀಗ 83 ವರ್ಷದ ಹರೆಯದಲ್ಲಿ ಮತ್ತೆ ರಾಜಕೀಯ ಪ್ರವೇಶಿಸುತ್ತಿರುವ ಯಶವಂತ್ ಸಿನ್ಹ ಟಿಎಂಸಿ ಪಕ್ಷ ಸೇರಿ ಆಶ್ಚರ್ಯ ಮೂಡಿಸಿದ್ದಾರೆ. ಕೊಲ್ಕತಾದ ತೃಣಮೂಲ ಭವನದಲ್ಲಿ ಸಂಸದರಾದ ಡೆರೆಕ್ ಒ ಬ್ರೇನ್, ಸುದೀಪ್ ಬಂದೋಪಾಧ್ಯಾಯ ಮತ್ತು ಸುಬ್ರತಾ ಮುಖರ್ಜಿ ಅವರ ಸಮ್ಮುಖದಲ್ಲಿ ಇಂದು (ಮಾರ್ಚ್​ 13) ಸಿನ್ಹಾ ಟಿಎಂಸಿ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಮಾತನಾಡಿ, “ದೇಶವು ಹಿಂದೆಂದೂ ಇಲ್ಲದ ಸನ್ನಿವೇಶವನ್ನು ಎದಿರುಸುತ್ತಿದೆ. ಪ್ರಜಾಪ್ರಭುತ್ವದ ಶಕ್ತಿ ಇರುವುದು ಅದರ ಸಂಸ್ಥೆಗಳಲ್ಲಿ. ಆದರೆ ನ್ಯಾಯಾಂಗವೂ ಸೇರಿದಂತೆ ಎಲ್ಲಾ ಸಂಸ್ಥೆಗಳು ಈಗ ಬಲಹೀನಗೊಂಡಿವೆ” ಎಂದರು.

    ಬಿಜೆಪಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಿನ್ಹಾ, “ಅಟಲ್​ಜಿ ಸಮಯದಲ್ಲಿ ಬಿಜೆಪಿ ಒಮ್ಮತದಲ್ಲಿ ನಂಬಿಕೆ ಇಟ್ಟಿತ್ತು. ಆದರೆ ಇಂದಿನ ಸರ್ಕಾರ ತುಳಿದು ಜಯಿಸುವುದರಲ್ಲಿ ನಂಬಿಕೆ ಇಟ್ಟಿದೆ. ಅಕಾಲಿಗಳು, ಬಿಜೆಡಿ ಈಗ ಬಿಜೆಪಿಯನ್ನು ತೊರೆದಿದ್ದಾರೆ. ಇಂದು ಬಿಜೆಪಿಯೊಂದಿಗೆ ಯಾರು ನಿಂತಿದ್ದಾರೆ?” ಎಂದು ಪ್ರಶ್ನಿಸಿದರು. (ಏಜೆನ್ಸೀಸ್)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ‘ಕಾರು ಬಾಗಿಲು ಬಡಿದು ದೀದಿ ಕಾಲಿಗೆ ಗಾಯ’ : ಅಧಿಕೃತ ವರದಿ

    VIDEO| ‘ಇದಪ್ಪಾ ನಿಜವಾದ ಕ್ರಿಕೆಟ್​ !’ ಮೈಕೆಲ್ ವಾಘನ್ ಶೇರ್​ ಮಾಡಿದ ವಿಡಿಯೋ ನೋಡಿ

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts