More

    ಗೌರವ ಕೊಟ್ಟರೆ ಏಪ್ರಿಲ್ ಫೂಲ್ ಎಂದುಕೊಂಡ ಕ್ಲಾರ್ಕ್…!

    ಸಿಡ್ನಿ: ಕ್ರೀಡಾಪಟುಗಳಿಗೆ ಪ್ರಶಸ್ತಿ, ಪುರಸ್ಕಾರಗಳು ಸಿಕ್ಕರೆ ಅವರಿಗೆ ಆಗುವ ಆನಂದಕ್ಕೆ ಪಾರವೇ ಇಲ್ಲ. ಕ್ರೀಡೆಯಿಂದ ನಿವೃತ್ತಿ ಹೊಂದಿದರೂ ಮಾಜಿ ಕ್ರೀಡಾಪಟುಗಳಿಗೆ ಅವರ ಸೇವೆ, ಸಾಧನೆಗೆ ತಕ್ಕಂತೆ ಪ್ರಶಸ್ತಿ ಬರುವುದು ಸಾಮಾನ್ಯ. ಆದರೆ, 2015ರ ಏಕದಿನ ವಿಶ್ವಕಪ್ ವಿಜೇತ ಆಸ್ಟ್ರೇಲಿಯಾ ತಂಡದ ನಾಯಕ ಮೈಕಲ್ ಕ್ಲಾರ್ಕ್ ಮಾತ್ರ ಇದಕ್ಕೆ ಅಪವಾದ. ಪ್ರತಿಷ್ಠಿತ ಆರ್ಡರ್ ಆಫ್ ಆಸ್ಟ್ರೇಲಿಯಾದಲ್ಲಿ ಅಧಿಕಾರಿ ಹುದ್ದೆ ನೀಡಿದ ಗೌರವಿಸಿದರೂ ಏಪ್ರಿಲ್ ಫೂಲ್ ಎಂದುಕೊಂಡಿದ್ದರಂತೆ. ಆಸ್ಟ್ರೇಲಿಯಾ ಕ್ರಿಕೆಟ್ ಹಾಗೂ ಸಮುದಾಯಕ್ಕೆ ಅವರ ಸೇವೆ ಪರಿಗಣಿಸಿ ಈ ಗೌರವ ನೀಡಲಾಗಿದೆ.

    ಇದನ್ನೂ ಓದಿ: ಸಚಿನ್ ಹೊಗಳಿಕೆಯಿಂದ ಪುಳಕಗೊಂಡ ನಟಿ

    ತವರಿನಲ್ಲೇ ನಡೆದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಕ್ಲಾರ್ಕ್ ಸಾರಥ್ಯದ ಆಸ್ಟ್ರೇಲಿಯಾ ಚಾಂಪಿಯನ್‌ಪಟ್ಟ ಅಲಂಕರಿಸಿತು. ಆಸ್ಟ್ರೇಲಿಯಾ ಕ್ರಿಕೆಟ್ ಹಾಗೂ ಸಮುದಾಯಕ್ಕೆ ಅವರ ಸೇವೆ ಪರಿಗಣಿಸಿ ಅವರಿಗೆ ಈ ಹುದ್ದೆ ನೀಡಲಾಗಿದೆ ಗೌವರ್ನರ್ಸ್‌ ಜನರಲ್ ವೆಬ್‌ಸೈಟ್ ಹೇಳಿಕೊಂಡಿದೆ. ಕ್ವೀನ್‌ಲ್ಯಾಂಡ್ಸ್‌ನ ಕ್ವೀನ್ ಹುಟ್ಟುಹಬ್ಬದ ಅಂಗವಾಗಿ ಪ್ರತಿವರ್ಷ ಉತ್ತಮ ಸೇವೆ ಸಲ್ಲಿಸುತ್ತಿರುವವರಿಗೆ ಈ ಗೌರವ ನೀಡಲಾಗುತ್ತಿದೆ.ಇದಕ್ಕೆ ಪ್ರತಿಕ್ರಿಯಿಸಿದ ಕ್ಲಾರ್ಕ್, ಜೂನ್‌ನಲ್ಲಿ ಏಪ್ರಿಲ್ ಫೂಲ್ ಆಗುತ್ತಿರುವೆ ಎಂದುಕೊಂಡಿದ್ದೆ, ಇಂಥ ಗೌರವಾನ್ವಿತ ಹುದ್ದೆ ದಕ್ಕುತ್ತಿರುವುದು ಖುಷಿಯ ವಿಚಾರ’ ಎಂದು ಹೇಳಿದ್ದಾರೆ.

    ಇದನ್ನೂ ಓದಿ:ಮಣ್ಣಲ್ಲಿ ಮಣ್ಣಾದ ಚಿರು!

    ಇದಕ್ಕೂ ಮೊದಲು ಮಾಜಿ ನಾಯಕರಾದ ರಿಕ್ಕಿ ಪಾಂಟಿಂಗ್, ಮಾರ್ಕ್ ಟೇಲರ್, ಸ್ಟೀವ್ ವಾ, ಅಲೆನ್ ಬಾರ್ಡರ್ ಹಾಗೂ ಬಾಬ್ ಸಿಂಪ್ಸನ್ ಎಒ ಹುದ್ದೆ ಅಲಂಕರಿಸಿದ್ದರು. 39ವರ್ಷದ ಕ್ಲಾರ್ಕ್ 2015ರಲ್ಲಿ ಏಕದಿನ ವಿಶ್ವಕಪ್ ಜಯಿಸಿದ ಬೆನ್ನಲ್ಲೇ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. 115 ಟೆಸ್ಟ್, 245 ಏಕದಿನ ಹಾಗೂ 34 ಟಿ20 ಪಂದ್ಯಗಳಿಂದ ಕ್ರಮವಾಗಿ 8643, 7981 ಹಾಗೂ 488 ರನ್ ಪೇರಿಸಿದ್ದಾರೆ.

    ಮೂರು ತಿಂಗಳ ಲಾಕ್​ಡೌನ್​ನಲ್ಲಿ ಏನೆಲ್ಲಾ ಆಗಿ ಹೋಯ್ತು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts