More

    2015ರ ಏಕದಿನ ವಿಶ್ವಕಪ್ ವಿಜೇತ ಆಸೀಸ್ ಕ್ರಿಕೆಟಿಗ ಈಗ ಕಾರ್ಪೆಂಟರ್!

    ಮೆಲ್ಬೋರ್ನ್: ಕ್ರಿಕೆಟಿಗರೆಂದರೆ ಶ್ರೀಮಂತರು ಮತ್ತು ವಿಶ್ವಕಪ್‌ನಂಥ ಪ್ರಮುಖ ಪ್ರಶಸ್ತಿಗಳನ್ನು ಜಯಿಸಿದರೆ ಅವರ ಜೀವನವೇ ಬದಲಾಗಿ ಬಿಡುತ್ತದೆ ಎಂದೆಲ್ಲ ಕ್ರಿಕೆಟ್ ಪ್ರೇಮಿಗಳು ಭಾವಿಸಿದ್ದರೆ ಅದು ನಿಜವಲ್ಲ! ಯಾಕೆಂದರೆ ಪ್ರತಿ ಕ್ರಿಕೆಟಿಗರ ಜೀವನದಲ್ಲೂ ಇಂಥದ್ದೆಲ್ಲ ನಡೆಯುವುದಿಲ್ಲ, ಕ್ರಿಕೆಟ್ ತೊರೆದ ಬಳಿಕವೂ ಬದುಕು ಕಟ್ಟಿಕೊಳ್ಳುವುದಕ್ಕಾಗಿ ಹೊಸ ಉದ್ಯೋಗವನ್ನು ಕಂಡುಕೊಳ್ಳುವ ಅಗತ್ಯವಿರುತ್ತದೆ ಎಂಬುದಕ್ಕೆ ಆಸ್ಟ್ರೇಲಿಯಾದ 2015ರ ಏಕದಿನ ವಿಶ್ವಕಪ್ ವಿಜೇತ ಆಟಗಾರ ಕ್ಸೇವಿಯರ್ ಡೋಹರ್ಟಿ ಸಾಕ್ಷಿಯಾಗಿದ್ದಾರೆ. ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ಅವರೀಗ ಕಾರ್ಪೆಂಟರ್ ಆಗಿ ಬದಲಾಗಿದ್ದಾರೆ!

    ಎಡಗೈ ಸ್ಪಿನ್ನರ್ ಆಗಿ 2001-02ರಲ್ಲಿ ಆಸ್ಟ್ರೇಲಿಯಾದ ದೇಶೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಕ್ಸೇವಿಯರ್ ಡೋಹರ್ಟಿ, 2010ರಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಪ್ರವೇಶಿಸಿದ್ದರು. ಆಸೀಸ್ ಪರ 4 ಟೆಸ್ಟ್‌ಗಳಲ್ಲಿ 7 ವಿಕೆಟ್ ಕಬಳಿಸಿದ್ದ ಅವರು, 60 ಏಕದಿನ ಪಂದ್ಯಗಳಲ್ಲಿ 55 ಮತ್ತು 11 ಟಿ20 ಪಂದ್ಯಗಳಲ್ಲಿ 10 ವಿಕೆಟ್ ಗಳಿಸಿದ್ದರು. 2015ರಲ್ಲಿ ಆಸ್ಟ್ರೇಲಿಯಾ-ನ್ಯೂಜಿಲೆಂಡ್‌ನಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಮೈಕೆಲ್ ಕ್ಲಾರ್ಕ್ ಬಳಗದ ಸದಸ್ಯರಾಗಿದ್ದ ಅವರು, ಟೂರ್ನಿಯಲ್ಲಿ ಶ್ರೀಲಂಕಾ ವಿರುದ್ಧ ಏಕೈಕ ಪಂದ್ಯವಾಡಿದ್ದರು. ಆದರೆ ವಿಕೆಟ್ ಗಳಿಸಲು ವಿಲರಾಗಿದ್ದ ಅವರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅದುವೇ ಕೊನೆಯ ಪಂದ್ಯವಾಗಿತ್ತು.

    ಇದನ್ನೂ ಓದಿ: ಏಷ್ಯನ್ ಬಾಕ್ಸಿಂಗ್‌ನಲ್ಲಿ ಚಿನ್ನ ಗೆದ್ದ ಪೂಜಾ, ಬೆಳ್ಳಿಗೆ ತೃಪ್ತಿಪಟ್ಟ ಮೇರಿ ಕೋಮ್

    ವಿಶ್ವಕಪ್ ಆಡಿದ 2 ವರ್ಷಗಳ ಬಳಿಕ ಅಂದರೆ 2017ರಲ್ಲಿ ಡೋಹರ್ಟಿ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಬಳಿಕ ಕಳೆದ 4 ವರ್ಷಗಳಿಂದಲೂ ಅವರು ಕ್ರಿಕೆಟ್ ನಂತರದ ಬದುಕು ಕಟ್ಟಿಕೊಳ್ಳಲು ಹೆಣಗಾಡಿದ್ದರು. ಅದರಲ್ಲೂ ಮೊದಲ 12 ತಿಂಗಳಿನಿಂದ ವಿವಿಧ ಕೆಲಸಗಳನ್ನು ಪ್ರಯತ್ನಿಸಿ ಅವರು ಸೋತಿದ್ದರು. ಕೊನೆಗೆ ಕಾರ್ಪೆಂಟ್ರಿ ಅಪ್ರೆಂಟಿಸ್‌ಷಿಪ್ ಮೂಲಕ ಅವರು ಬಡಗಿಯಾಗಿ ಬದುಕು ಕಟ್ಟಿಕೊಳ್ಳಲು ನಿರ್ಧರಿಸಿದ್ದಾರೆ.

    38 ವರ್ಷದ ಕ್ಸೇವಿಯರ್ ಡೋಹರ್ಟಿ ಅವರ ಹೊಸ ವೃತ್ತಿಯ ಬಗ್ಗೆ ಆಸ್ಟ್ರೇಲಿಯನ್ ಕ್ರಿಕೆಟರ್ಸ್‌ ಅಸೋಸಿಯೇಷನ್ (ಎಸಿಎ) ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪ್ರಕಟಿಸುವ ಮೂಲಕ ಬಹಿರಂಗಪಡಿಸಿದೆ. ಇದರಲ್ಲಿ ಅವರು ಹೊಸ ಬದುಕು ಕಟ್ಟಿಕೊಳ್ಳಲು ನೆರವಾದ ಎಸಿಎಗೂ ಧನ್ಯವಾದ ಹೇಳಿದ್ದಾರೆ.

    ‘ಕ್ರಿಕೆಟ್ ಆಡುವುದನ್ನು ನಿಲ್ಲಿಸಿದ ಬಳಿಕ ಏನು ಮಾಡಬೇಕೆಂದು ನನಗೆ ನಿಖರವಾಗಿ ಗೊತ್ತಿರಲಿಲ್ಲ. ಕ್ರಿಕೆಟ್ ತ್ಯಜಿಸಿದ ಬಳಿಕ ಮೊದಲ 12 ತಿಂಗಳು ಎಲ್ಲವನ್ನೂ ಪ್ರಯತ್ನಿಸಿದೆ. ಎದುರು ಬಂದ ಎಲ್ಲ ಅವಕಾಶವನ್ನೂ ಬಳಸಿಕೊಳ್ಳಲು ಯತ್ನಿಸಿದೆ. ತೋಟಗಾರಿಕೆ, ಕಚೇರಿ ಕೆಲಸ, ಕ್ರಿಕೆಟ್ ಸಂಬಂಧಿತ ಕೆಲಸಗಳನ್ನೂ ಮಾಡಿದೆ. ಈಗ ಬಡಗಿಯಾಗಿರುವೆ. ಕಾರ್ಪೆಂಟ್ರಿ ಅಪ್ರೆಂಟಿಸ್‌ಷಿಪ್‌ನ 3 ಕ್ವಾರ್ಟರ್ಸ್‌ ಮುಗಿಸಿರುವೆ. ಈಗ ಕಟ್ಟಡದ ಕೆಲಸಗಳಲ್ಲಿ ತೊಡಗಿಸಿಕೊಂಡಿರುವೆ. ಕ್ರಿಕೆಟ್‌ನಿಂದ ಸಂಪೂರ್ಣ ಭಿನ್ನವಾದ ಕೆಲಸ ಮಾಡುತ್ತಿರುವೆ ಮತ್ತು ಇದನ್ನು ಆನಂದಿಸುತ್ತಿರುವೆ’ ಎಂದು ಡೋಹರ್ಟಿ ಹೇಳಿದ್ದಾರೆ. ಡೋಹರ್ಟಿ ಕಳೆದ ವರ್ಷ ಕರೊನಾ ಹಾವಳಿಗೆ ಮುನ್ನ ನಡೆದಿದ್ದ ರಸ್ತೆ ಸುರಕ್ಷಾ ವಿಶ್ವ ಸರಣಿ ಟಿ20 ಟೂರ್ನಿಯಲ್ಲಿ ಅವರು ಆಸೀಸ್ ತಂಡದ ಪರವಾಗಿ ಆಡಿದ್ದರು.

    ಮೊಟ್ಟೆ ತಿಂದರೂ ವಿರಾಟ್ ಕೊಹ್ಲಿ ಸಸ್ಯಾಹಾರಿ! ನೆಟ್ಟಿಗರ ಅಚ್ಚರಿ

    ಸೋಷಿಯಲ್ ಮೀಡಿಯಾದಲ್ಲಿ ಪುತ್ರಿಯ ಮುಖ ತೋರಿಸದ ಬಗ್ಗೆ ವಿರುಷ್ಕಾ ಸ್ಪಷ್ಟನೆ

    ಆಲ್ರೌಂಡರ್​ ರವೀಂದ್ರ ಜಡೇಜಾ ವೃತ್ತಿಜೀವನಕ್ಕೆ ತಿರುವು ನೀಡಿದ ಆ ಪಂದ್ಯ ಯಾವುದು ಗೊತ್ತೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts