More

    ರೈತ ದಿನ ಆಚರಿಸಿ ಅನ್ನದಾತರ ದನಿಯಾಗಿ:

     ಮಾಗಡಿ: ರೈತ ದಿನ ಆಚರಿಸುವ ಮೂಲಕ ಸರ್ಕಾರ ರೈತರಿಗೆ ಬಲ ತುಂಬಬೇಕು. ಈ ಬಗ್ಗೆ ಬೆಳಗಾವಿ ಅಧಿವೇಶನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿರ್ಣಯ ಕೈಗೊಳ್ಳಬೇಕು ಎಂದು ತಾಲೂಕು ರೈತಸಂದ ಅಧ್ಯಕ್ಷ ಹೊಸಪಾಳ್ಯ ಲೋಕೇಶ್ ಮನವಿ ಮಾಡಿದರು.
    ಮಾಗಡಿ ಕೆಂಪೇಗೌಡ ಪ್ರತಿಮೆ ಬಳಿ 5ನೇ ವರ್ಷದ ರೈತ ದಿನಾಚರಣೆ ಮತ್ತು ಪ್ರಗತಿಪರ ರೈತರಿಗೆ ಸನ್ಮಾನ ಸವಾರಂಭದ ಆಹ್ವಾನ ಪತ್ರಿಕೆಯನ್ನು ಮಂಗಳವಾರ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಎಲ್ಲ ಸಮುದಾಯ, ಗಣ್ಯರ ಜಯಂತಿ ಆಚರಿಸುವ ಸರ್ಕಾರಗಳು ಬೆವರು ಸುರಿಸಿ ದೇಶಕ್ಕೆ ಅನ್ನ ನೀಡುವ ಅನ್ನದಾತ ದಿನಾಚರಣೆ ಮುಂದಾಗಿಲ್ಲ. ಈ ವರ್ಷದಿಂದಲಾದರೂ ರೈತ ದಿನ ಆಚರಿಸಲು ಮುಖ್ಯಮಂತ್ರಿಗಳು ಮುಂದಾಗಬೇಕು ಎಂದರು.
    ಕೃಷಿಯಲ್ಲಿ ಸಾಧನೆ ಮಾಡಿರುವ ಪ್ರಗತಿಪರ ರೈತರನ್ನು ಗುರುತಿಸಿ ಮತ್ತಷ್ಟು ಸಾಧನೆ ಮಾಡಲು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಡಿ.23ರಂದು 5ನೇ ವರ್ಷದ ರೈತ ದಿನಾಚರಣೆ, ಪ್ರಗತಿಪರ ರೈತರಿಗೆ ಸನ್ಮಾನ ಕಾರ್ಯಕ್ರಮವನ್ನು ಕಲ್ಯಾ ಗೇಟ್ ಬಳಿ ಹಮ್ಮಿಕೊಳ್ಳಲಾಗಿದೆ ಎಂದರು.
    ವಿವಿಧ ಮಠಾಧೀಶರು, ರೈತ ಸಂಟನೆ ಅಧ್ಯಕ್ಷ ನಾಗೇಂದ್ರ, ನಿವೃತ್ತ ಪೊಲೀಸ್ ಮಹಾ ನಿರ್ದೆಶಕ ಡಾ. ಶಂಕರ್ ಬಿದರಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರಗತಿಪರ ರೈತರನ್ನು ಶಾಸಕ ಎ.ಮಂಜುನಾಥ್ ಮತ್ತು ಮಾಜಿ ಶಾಸಕ ಎಚ್.ಸಿ. ಬಾಲಕೃಷ್ಣ ಗೌರವಿಸಲಿದ್ದಾರೆ. ಮಾಜಿ ಸಚಿವ ಎಚ್.ಎಂ. ರೇವಣ್ಣ, ವಿಧಾನ ಪರಿಷತ್ ಸದಸ್ಯ ಆ. ದೇವೇಗೌಡ ಬಿಎಂಆರ್‌ಡಿಎ ಮಾಜಿ ಅಧ್ಯಕ್ಷ ಕೆ. ಕೃಷ್ಣಮೂರ್ತಿ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆಗೊಳಿಸಲಿದ್ದಾರೆ ಹಾಗೂ ಬಿಜೆಪಿ ಮುಖಂಡ ಎ.ಎಚ್. ಬಸವರಾಜು, ಕೆಂಪೇಗೌಡ ಅಭಿವೃದ್ದಿ ಸಮಿತಿ ಅಧ್ಯಕ್ಷ ಎಚ್.ಎಂ. ಕೃಷ್ಣಮೂರ್ತಿ, ಜಿಪಂ. ವಾಜಿ ಸದಸ್ಯ ಎಂ.ಕೆ. ಧನಂಜಯ, ದಿಶಾ ಸಮಿತಿ ಸದಸ್ಯ ಜೆ.ಪಿ. ಚಂದ್ರೇಗೌಡ ಗುರುತಿನ ಚೀಟಿ ಬಿಡುಗಡೆ ಮಾಡಲಿದ್ದಾರೆ ಎಂದರು ತಿಳಿಸಿದರು.
    ಮುಖಂಡರಾದ ರವಿಕುವಾರ್, ರಂಗಸ್ವಾಮಯ್ಯ, ನಿಂಗಣ್ಣ, ಬುಡನ್‌ಸಾಬ್, ಶಿವಲಿಂಗಯ್ಯ, ಜಯಣ್ಣ, ಷಡಾಕ್ಷರಿ, ಪಾಪಣ್ಣ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts