More

    ಒಕ್ಕಲುತನ ನಲುಗಿದರೆ ಅನ್ನ ಸಂಸ್ಕೃತಿಗೆ ಅಪಾಯ; ಎಚ್ಚರ ಅಗತ್ಯ ಎಂದ ಸಮ್ಮೇಳನಾಧ್ಯಕ್ಷ ಡಾ. ಸಿ. ನಂಜುಂಡಯ್ಯ 

    ಒಕ್ಕಲುತನ ನಲುಗಿದರೆ ಅನ್ನ ಸಂಸ್ಕೃತಿಗೆ ಅಪಾಯ ಎಚ್ಚರ ಅಗತ್ಯ ಎಂದ ಸಮ್ಮೇಳನಾಧ್ಯಕ್ಷ ಡಾ. ಸಿ. ನಂಜುಂಡಯ್ಯ ತಿಪ್ಪಸಂದ್ರದಲ್ಲಿ ಜಿಲ್ಲಾಮಟ್ಟದ 7ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ಆದಿಚುಂಚನಗಿರಿ, ಸಿದ್ದಗಂಗಾ ಶ್ರೀಗಳ ಜನ್ಮಸ್ಥಳ, ಕೆಂಪಾಪುರ ಗ್ರಾಮದಲ್ಲಿರುವ  ಕೆಂಪೇಗೌಡರ ವೀರಸವಾಧಿ, ಕೋಟೆ ಕೊತ್ತಲು, ಗುಡಿ ಗೋಪುರಗಳು, ಕೆರೆ, ಕಟ್ಟೆಗಳನ್ನು ಜೀರ್ಣೋದ್ಧಾರಗೊಳಿಸಲು ಸರ್ಕಾರ ಮುಂದಾಗಬೇಕು, ಎಂಬ ಆಗ್ರಹ ಮಾಗಡಿ ತಾಲೂಕು ತಿಪ್ಪಸಂದ್ರ ಗ್ರಾಮದ ಮಾರುತಿ ಮೈದಾನದಲ್ಲಿ ಗುರುವಾರ ಆರಂಭಗೊಂಡ ರಾಮನಗರ ಜಿಲ್ಲಾ 7ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೇಳಿಬಂತು. ನೆರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಕನ್ನಡ ಭಾಷೆ ಬಳಕೆ ಕೇವಲ ಶೇ.64 ರಷ್ಟಿರುವ ಬಗ್ಗೆ ಬೇಸರವೂ ವ್ಯಕ್ತವಾಯಿತು.

    ಒಕ್ಕಲುತನ ನಲುಗಿದರೆ ಅನ್ನ ಸಂಸ್ಕೃತಿಗೆ ಅಪಾಯ; ಎಚ್ಚರ ಅಗತ್ಯ ಎಂದ ಸಮ್ಮೇಳನಾಧ್ಯಕ್ಷ ಡಾ. ಸಿ. ನಂಜುಂಡಯ್ಯ 

    ಮಾಗಡಿ: ಭೂಮಿಗೆ ಬಿದ್ದ ಬೀಜ, ಎದೆಗೆ ಬಿದ್ದ ಅಕ್ಷರ ಇಂದಲ್ಲ ನಾಳೆ ಫಲ ನೀಡುತ್ತದೆ ಎಂಬುದಕ್ಕೆ ಕನ್ನಡ ಭಾಷೆ, ಸಂಸ್ಕೃತಿ ಮೂಲ ಕಾರಣವಾಗಿದೆ ಎಂದು 7ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಡಾ. ಸಿ. ನಂಜುಂಡಯ್ಯ ಹೇಳಿದರು.
    ತಾಲೂಕಿನ ತಿಪ್ಪಸಂದ್ರ ಗ್ರಾಮದ ವಾರುತಿ ಮೈದಾನದಲ್ಲಿ ಗುರುವಾರ 7ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ವಾತನಾಡಿದ ಅವರು, ನಮ್ಮ ನಾಡಿನ ಭಾಷೆ, ಸಂಸ್ಕೃತಿ, ಕಲೆ, ಸಾಹಿತ್ಯ ಹಾಗೂ ಭವ್ಯ ಪರಂಪರೆಯ ಕುರಿತು ಎಲ್ಲೆಡೆ ಕಮ್ಮಟಗಳಾಗಬೇಕು ಎಂದರು.

    ಆದಿಚುಂಚನಗಿರಿ, ಸಿದ್ದಗಂಗಾ ಶ್ರೀಗಳ ಜನ್ಮಸ್ಥಳ, ಕೆಂಪಾಪುರ ಗ್ರಾಮದಲ್ಲಿರುವ ಕೆಂಪೇಗೌಡರ ವೀರಸವಾಧಿ, ಕೋಟೆ ಕೊತ್ತಲು, ಗುಡಿ ಗೋಪುರಗಳು, ಕೆರೆ, ಕಟ್ಟೆಗಳನ್ನು ಜೀರ್ಣೋದ್ಧಾರಗೊಳಿಸಲು ಸರ್ಕಾರ ಮುಂದಾಗಬೇಕು, ಎಚ್.ವಿ. ನಂಜುಂಡಯ್ಯ ಅವರ ಹುಟ್ಟೂರಾದ ಹೆಬ್ಬಳಲು ಗ್ರಾಮವನ್ನು ಅಭಿವದ್ದಿಗೊಳಿಸಿ ಸ್ಮಾರಕವನ್ನಾಗಿಸಬೇಕು ಎಂದು ನಂಜುಂಡಯ್ಯ ಆಗ್ರಹಿಸಿದರು.

    ಕನ್ನಡ ಸಾಹಿತ್ಯ ಸಮ್ಮೇಳನ ಎಂದರೆ ಕವಿತೆಗಳ ವಾಚನ, ಗೀತೆಗಳ ಗಾಯನ, ನತ್ಯ, ಜಾನಪದ ಕಲೆಗಳ ಪ್ರದರ್ಶನ ಮಾತ್ರವಲ್ಲ, ಕನ್ನಡ ಸಾಹಿತ್ಯ ಲೋಕದ ರಾಜ ಮಹಾರಾಜರ ಬಗ್ಗೆ ಶಾಲಾ ಕಾಲೇಜುಗಳ ಮಕ್ಕಳಿಗೆ ಪರಿಚಯಿಸುವುದು ಇಂಥ ಸಮ್ಮೇಳನಗಳಿಂದ ಸಾಧ್ಯವಿದೆ. ದೇಶದಲ್ಲಿ ಒಕ್ಕಲುತನ ನಲುಗಿದರೆ ಅನ್ನ ಸಂಸ್ಕೃತಿಗೆ ಅಪಾಯವಿದೆ. ಇಂದಿನ ವೈಜ್ಞಾನಿಕ ಯುಗದಲ್ಲಿ ಜ್ಞಾನವಿಕಾಸವಾದಂತೆ ಅನ್ನ ಸಂಸ್ಕೃತಿಗೆ ಅಪಾಯವಾಗದಂತೆ ಎಚ್ಚರ ವಹಿಸುವ ಅಗತ್ಯವಿದೆ ಎಂದರು.

    ತಹಸೀಲ್ದಾರ್ ಸುರೇಂದ್ರ ಮೂರ್ತಿ, ತಾಪಂ ಇಒ ಚಂದ್ರು, ಸಿಡಿಪಿಒ ಸುರೇಂದ್ರ, ಕನ್ನಡ ಪ್ರತಿಭಾ ಕೇಂದ್ರದ ಅಧ್ಯಕ್ಷ ಪಾನ್ಯಂ ನಟರಾಜು, ನಿವತ್ತ ಶಿಕ್ಷಕ ಪಿ.ನಾಗರಾಜು, ನೌಕರರ ಸಂದ ವಾಜಿ ಜಿಲ್ಲಾಧ್ಯಕ್ಷ ಆರ್.ಕೆ.ಬೈರಲಿಂಗಯ್ಯ, ತಾಲೂಕು ಅಧ್ಯಕ್ಷ ಎಂ.ಜಿ.ಶಿವರಾಮಯ್ಯ, ಶಾ.ಶಿ. ಸಂದ ಅಧ್ಯಕ್ಷ ಬಸವರಾಜು, ತಾ.ಪಂ. ವಾಜಿ ಅಧ್ಯಕ್ಷ ಶಿವರಾಜು, ಗ್ರಾ.ಪಂ.ಅಧ್ಯಕ್ಷೆ ರತ್ನಮ್ಮ, ಉಪಾಧ್ಯಕ್ಷ ರಾಜೇಶ್, ವಾಜಿ ಅಧ್ಯಕ್ಷ ರು, ಕಸಾಪ ವಾಜಿ ಅಧ್ಯಕ್ಷೆ ಕಲ್ಪನಾ ಶಿವಣ್ಣ, ಗಂ.ದಯಾನಂದ್, ರಾಮಸ್ವಾಮಿ, ರಾಜುಗೌಡ, ಶ್ರೀನಾಥ್, ಕನಕಪುರ ಕಸಾಪ ಅಧ್ಯಕ್ಷ ಶಿವಲಿಂಗಯ್ಯ, ರೈತಸಂದ ಗೋವಿಂದರಾಜು ಇತರರು ಇದ್ದರು.

    ಆಂಗ್ಲ ವ್ಯಾಮೋಹದಿಂದ ಆಪತ್ತು: ಆಂಗ್ಲ ವ್ಯಾಮೋಹದಿಂದ ಯುವ ಪ್ರತಿಭೆಗಳಿಗೆ ಆಪತ್ತಿದೆ. ಆಂಗ್ಲ ವಾಧ್ಯಮ ಶಾಲೆಗಳಲ್ಲಿ ಕನ್ನಡ ಭಾಷೆ ಕಡ್ಡಾಯವಾಗಿಸಬೇಕು. ಕನ್ನಡ ಶಿಕ್ಷಕರಿಗೆ ಪುನಶ್ಚೇತನ ಕಾರ್ಯಾಗಾರ ಆಯೋಜಿಸುವ ಅಗತ್ಯವಿದೆ. ಸಂ, ಸಂಸ್ಥೆಗಳು ಸಹ ಕನ್ನಡ ಭಾಷೆಯ ಸರ್ವಾಂಗೀಣ ಅಭಿವದ್ದಿಗೆ ಒತ್ತು ನೀಡಬೇಕಿದೆ. ಹಳ್ಳಿಯ ಗಲ್ಲಿಗಳಲ್ಲಿ ಕನ್ನಡದ ಭಾಷಾ ವಿಮರ್ಶೆ, ಚಿಂತನೆಗಳು, ಸಂಕಿರಣಗಳು, ಕನ್ನಡದ ತೇರು ಎಳೆಯುವ ಸಂಕಲ್ಪವನ್ನು ಸಾಹಿತ್ಯ ಪರಿಷತ್ ವಾಡಬೇಕಿದೆ. ಎಚ್.ವಿ.ನಂಜುಂಡಯ್ಯ ಅವರ ಹೆಸರಿನಲ್ಲಿ ಒಂದು ಸುಸಜ್ಜಿತ ಸಭಾಭವನ ನಿರ್ಮಿಸುವಂತೆ ಡಾ. ಸಿ. ನಂಜುಂಡಯ್ಯ ಒತ್ತಾಯಿಸಿದರು.

    ತಿಪ್ಪಸಂದ್ರ ಗ್ರಾಮದಲ್ಲಿ ಗುರುವಾರ ರಾಮನಗರ ಜಿಲ್ಲಾ 7ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನಾ ಸಮಾರಂಭದಲ್ಲಿ ಸಮ್ಮೇಳನಾಧ್ಯಕ್ಷ ಡಾ.ಸಿ. ನಂಜುಂಡಯ್ಯ, ಕಸಾಪ ಅಧ್ಯಕ್ಷ ಡಾ. ಮಹೇಶ್ ಜೋಶಿ, ಜಿಲ್ಲಾಧ್ಯಕ್ಷ ಬಿ.ಟಿ. ನಾಗೇಶ್, ಮತ್ತಿತರರು ಭಾಗವನಿಸಿದ್ದರು.

    ಮಾಗಡಿ: ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಮಹೇಶ್ ಜೋಶಿ ವಾತನಾಡಿ, ಮುಂದಿನ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ರೇಷ್ಮೆ ನಗರ ರಾಮನಗರದಲ್ಲಿ ನಡೆಸುವಂತೆ ಪ್ರಸ್ತಾಪಿಸಲಾಗಿದೆ. ರಾಮನಗರ ಜಿಲ್ಲೆಗೆ ಪದಾರ್ಪಣೆ ವಾಡಬೇಕಾದರೆ ಭೂಮಿಗೆ ನಮಸ್ಕರಿಸಿ ಬರಬೇಕು. ಏಕೆಂದರೆ ರಾಮನಗರ ಜಿಲ್ಲೆಯಲ್ಲಿ ಸಾಹಿತ್ಯ, ಸಂಗೀತ, ಕಲೆ, ನಾಟಕ, ಜನಪದ ಸೊಗಡಿನ ಪದರಗಳು ಹಾಸುಹೊಕ್ಕಾಗಿದೆ, ಹೀಗಾಗಿ ರಾಮನಗರ ಜಿಲ್ಲೆಯನ್ನು ಜನಪದ ಸೊಗಡಿನ ತೊಟ್ಟಿಲು ಎಂದೇ ಕರೆಯಲಾಗುತ್ತಿದೆ ಎಂದರು.

    ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಬೇಕು: ಹೆಬ್ಬಳಲು ಹೆಬ್ಬೆರಳು ಆಗಬೇಕಿತ್ತು. ಕಾರಣ 1815ರಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸ್ಥಾಪಿಸಿ ಮೂರು ಬಾರಿ ಸಮ್ಮೇಳನದ ಅಧ್ಯಕ್ಷರಾಗಿ ತಮ್ಮದೇ ಆದ ಮಾನವೀಯತೆಯ ಮೌಲ್ಯಗಳನ್ನು ಬಿತ್ತಿದ ಎಚ್.ವಿ. ನಂಜುಂಡಯ್ಯ ಅವರ ಹೆಗ್ಗುರುತು ಮರೆಯುವಂತಿಲ್ಲ. ನಾಡು ನುಡಿ, ಭಾಷೆಗಾಗಿ ನಿರಂತರವಾಗಿ ದುಡಿದಿದ್ದಾರೆ. ಆದರೂ ಸಹ ಕನ್ನಡ ಭಾಷೆಗೆ ಸಂಕಷ್ಟ ಎದುರಾಗುತ್ತಿರುವುದು ಆತಂಕ ಮೂಡಿಸಿದೆ.

    ಯಾವುದೇ ಸಮಸ್ಯೆಗಳನ್ನಾಗಲೀ ಕನ್ನಡಿಗರಾದ ನಾವು ಸವಾಲಾಗಿ ಸ್ವಿಕರಿಸಬೇಕು. ಕನ್ನಡ ಶಾಲೆಗಳನ್ನು ಮುಚ್ಚದಂತೆ ಎಚ್ಚರ ವಹಿಸಬೇಕು. ಕನ್ನಡ ಭಾಷೆ ಅನ್ನಕೊಡುವ ಭಾಷೆಯಾಗಬೇಕು. ಶಿಕ್ಷಣ, ವ್ಯಾಪಾರ, ನ್ಯಾಯಾಲಯಗಳಲ್ಲಿ ಕನ್ನಡ ಭಾಷೆ ಬಳಸಲು ಕಾನೂನು ಬದ್ಧವಾಗಿದೆ ಎಂದು ಮಹೇಶ್ ಜೋಶಿ ತಿಳಿಸಿದರು.

    ಹನುಮ ಉದಯಿಸಿದ ನಾಡು ನಮ್ಮದು. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸಾಲುಮರದ ತಿಮ್ಮಕ್ಕ, ಡಾ. ಸಿದ್ದಲಿಂಗಯ್ಯ, ಕರ್ನಾಟ ರತ್ನ ಡಾ. ಶಿವಕುವಾರಸ್ವಾಮೀಜಿ, ಸತ್ಯನಾರಾಯಣ ಅವರಿಗೆ ಪ್ರಶಸ್ತಿ ಸಿಕ್ಕಿರುವುದು ಹೆಮ್ಮೆಯ ವಿಷಯ. ಕೇರಳದಲ್ಲಿ ಶೇ.97ರಷ್ಟು ಮಲೆಯಾಳಿ ಭಾಷೆ, ತಮಿಳು ನಾಡಿನಲ್ಲಿ ಶೇ.92ರಷ್ಟು, ಆಂಧ್ರ ಮತ್ತು ತೆಲಗಾಂಣಗಳಲ್ಲಿ ಶೇ.82ರಷ್ಟು ಆಯಾ ಪ್ರಾಂತ್ಯದ ಭಾಷೆ ವಾತನಾಡುತ್ತಾರೆ. ಆದರೆ, ಕರ್ನಾಟಕದಲ್ಲಿ ಶೇ.64ರಷ್ಟು ಕನ್ನಡ ಭಾಷೆ ಬಳಕೆಯಾಗುತ್ತಿದೆ ಎಂದು ಮಹೇಶ್ ಜೋಶಿ ಬೇಸರ ವ್ಯಕ್ತಪಡಿಸಿದರು.

    ಸಾಧಕರಿಗೆ ಸನ್ಮಾನ: ಶಿಲ್ಪಿ ಡೂಂಲೈಟ್ ಗಣೇಶ್, ತಿಮ್ಮೇಗೌಡ, ಇಒ ಪ್ರದೀಪ್, ಸೌಭಾಗ್ಯಲಕ್ಷ್ಮಿ, ಆರ್.ಕೆ. ಬೈರಲಿಂಗಯ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ನಾಡಗೀತೆ, ರೈತಗೀತೆ ಹಾಡಲಾಯಿತು, ಕುದೂರು ವಿನಾಯಕ ಮಹಿಳಾ ಸ್ವಸಹಾಯ ಸಂದ ಸದಸ್ಯರು ಕನ್ನಡ ಗೀತೆಗೆ ನತ್ಯಪ್ರದರ್ಶನ ವಾಡಿದರು. ಅಕ್ಷರ ಜಾತ್ರೆಯಲ್ಲಿ ಪುಸ್ತಕ ಮಳಿಗೆ, ವಸ್ತು ಪ್ರದರ್ಶನ, ಕಷಿ ಯಂತ್ರೋಪಕರಣ ಪ್ರದರ್ಶನ ಮತ್ತು ಆರೋಗ್ಯ ತಪಾಸಣಾ ಕೇಂದ್ರ ತೆರೆದಿದ್ದು ಗಮನ ಸೆಳೆಯಿತು.

    ಭವ್ಯ ಮೆರವಣಿಗೆ: ತಿಪ್ಪಸಂದ್ರ ಬಸ್ ನಿಲ್ದಾಣದಿಂದ ಎಚ್.ವಿ. ನಂಜುಂಡಯ್ಯ ವೇದಿಕೆವರೆಗೂ ಸಾಂಸ್ಕ್ಪ್ರತಿಕ ಕಲಾತಂಡಗಳ ಪ್ರದರ್ಶನದೊಂದಿಗೆ ಸಮ್ಮೇಳನಾಧ್ಯಕ್ಷ ಡಾ. ಸಿ. ನಂಜುಂಡಯ್ಯ ಹಾಗೂ ಪತ್ನಿ ವಿಜಯಲಕ್ಷ್ಮಿ ಅವರನ್ನು ಬೆಳ್ಳಿ ರಥದಲ್ಲಿ ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಯಿತು. ಪುರಸಭೆ ಅಧ್ಯಕ್ಷೆ ವಿಜಯಾ ರೂಪೇಶ್ ನಗಾರಿ ಬಾರಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಶಾಲಾ ಮಕ್ಕಳು ನಾಡಿನ ಹಿರಿಯ ಚೇತನಗಳ, ಹೋರಾಟಗಾರರ, ಭಾಷಾಭಿವಾನಿಗಳ, ದೇಶಾಭಿವಾನಿಗಳ ವೇಷಭೂಷಣ ತೊಟ್ಟು ಮೆರವಣಿಗೆಯಲ್ಲಿ ಸಾಗಿದರು, ಕಸಾಪ ಅಧ್ಯಕ್ಷ ಮಹೇಶ್ ಜೋಶಿ ರಾಷ್ಟ್ರ ಧ್ವಜಾರೋಹಣ, ಕಸಾಪ ಧ್ವಜವನ್ನು ಜಿಲ್ಲಾಧ್ಯಕ್ಷ ಬಿ.ಟಿ.ನಾಗೇಶ್, ನಾಡಧ್ವಜವನ್ನು ತಾಲೂಕು ಕಸಾಪ ಅಧ್ಯಕ್ಷ ತಿ.ನಾ. ಪದ್ಮನಾಭ ಆರೋಹಣ ಮಾಡಿದರು. 6ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಪ್ರೊ. ಶಿವನಂಜಯ್ಯ 7ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ.ಸಿ.ನಂಜುಂಡಯ್ಯ ಅವರಿಗೆ ಕನ್ನಡ ಧ್ವಜ ಹಸ್ತಾಂತರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts