More

    ಅರಣ್ಯ ಭೂಮಿಗೆ ಹೊಸ ಪ್ರಸ್ತಾವನೆ: ರಾಜ್ಯಕ್ಕೆ ಕೇಂದ್ರದ ಪತ್ರ

    ಹುಬ್ಬಳ್ಳಿ: ಕಳಸಾ-ಬಂಡೂರಿ ನಾಲಾ ಯೋಜನೆಗೆ ಬೇಕಾಗಿರುವ ಅರಣ್ಯ ಭೂಮಿಗಾಗಿ ಹೊಸ ಪ್ರಸ್ತಾವನೆ ಸಲ್ಲಿಸುವಂತೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ, ರಾಜ್ಯ ಸರ್ಕಾರಕ್ಕೆ ಕೋರಿದೆ. ಇದು ಯೋಜನೆಯ ಅನುಷ್ಠಾನದ ದೃಷ್ಟಿಯಿಂದ ಮಹತ್ವದ ಬೆಳವಣಿಗೆಯಾಗಿದೆ. ಸಚಿವಾಲಯದ ಉಪ ಮಹಾ ನಿರೀಕ್ಷಕ(ಅರಣ್ಯ)ರು ಜು.3ರಂದು ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಈ ಸಂಬಂಧ ಪತ್ರ ಬರೆದಿದ್ದಾರೆ.

    ಕೇಂದ್ರ ಪರಿಸರ, ಅರಣ್ಯ ಇಲಾಖೆ ನಿರ್ದೇಶನದಂತೆ, ರಾಜ್ಯ ತಕ್ಷಣವೇ ಮಹದಾಯಿ ನ್ಯಾಯಾಧಿಕರಣ ಐತೀರ್ಪಿನ ಅನ್ವಯ ಕಳಸಾ-ಬಂಡೂರಿ ಯೋಜನೆ ಕುರಿತ ಹೊಸ ಪ್ರಸ್ತಾವನೆ ಕಳುಹಿಸಿಕೊಡಬೇಕು. ದೆಹಲಿಯ ಕಾನೂನು ತಂಡದೊಂದಿಗೆ ಕಳೆದೆರಡು ವರ್ಷಗಳಿಂದ ಯಾವುದೇ ಚರ್ಚೆ ನಡೆಯದ ಕಾರಣಕ್ಕೆ ಹೆಚ್ಚಿನ ಮಾಹಿತಿ ಹಂಚಿಕೊಳ್ಳುವ ಸ್ಥಿತಿಯಲ್ಲಿ ನಾವಿಲ್ಲ.
    | ಮೋಹನ್ ಕಾತರಕಿ ಕಾನೂನು ತಂಡದ ಹಿರಿಯ ಸದಸ್ಯ

    ಕಳಸಾ-ಬಂಡೂರಿ ನಾಲಾ ಯೋಜನೆಗೆ ಅಗತ್ಯವಿರುವ ಅರಣ್ಯ ಭೂಮಿಗಾಗಿ ರಾಜ್ಯ ಸರ್ಕಾರ ಪರಿಸರ ಅನುಮೋದನೆಗೆ 2003ರಲ್ಲಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ನದಿ ನೀರಿನ ಹಂಚಿಕೆ ಸಂಬಂಧ ಕರ್ನಾಟಕ-ಗೋವಾ ರಾಜ್ಯಗಳ ನಡುವೆ ಕಾನೂನು ಹೋರಾಟ ಇರುವುದರಿಂದ ಅಂದಿನ ಪ್ರಸ್ತಾವನೆಯನ್ನು ಸಚಿವಾಲಯ ರಾಜ್ಯಕ್ಕೆ ವಾಪಸ್ ಕಳುಹಿಸಿತ್ತು. ಖಾನಾಪುರ ತಾಲೂಕು ಕಣಕುಂಬಿ ಗ್ರಾಮದಲ್ಲಿ ಕಳಸಾ ನಾಲೆಗೆ ಅಣೆಕಟ್ಟು ಹಾಗೂ ನಾಲೆ ನಿರ್ವಿುಸಲು 258 ಹೆಕ್ಟೇರ್ ಅರಣ್ಯ ಭೂಮಿ ಹಾಗೂ ನಿರಸೆ ಗ್ರಾಮದಲ್ಲಿ ಬಂಡೂರಿ ನಾಲೆಗೆ ಅಣೆಕಟ್ಟು ಹಾಗೂ ನಾಲೆ ಕಟ್ಟಲು 243 ಹೆಕ್ಟೇರ್ ಅರಣ್ಯ ಭೂಮಿ ಅಗತ್ಯವಿದೆ ಎಂಬುದು ಕರ್ನಾಟಕದ ಪ್ರಸ್ತಾವನೆಯಾಗಿತ್ತು. ಅಂದಿನ ಪ್ರಸ್ತಾವನೆಗೆ ಮತ್ತು ಇಂದಿಗೆ ಸುಮಾರು 2 ದಶಕಗಳ ಅಂತರವಿರುವುದರಿಂದ ಕ್ಷೇತ್ರದಲ್ಲಿನ ವಸ್ತುಸ್ಥಿತಿಯಲ್ಲಿ ಸಾಕಷ್ಟು ಬದಲಾವಣೆ ಆಗಿರುವುದನ್ನು ಪರಿಗಣಿಸಿ ಹಾಗೂ ಅರಣ್ಯ ಸಂರಕ್ಷಣೆ ತಿದ್ದುಪಡಿ ನಿಯಮಾವಳಿ 2014ರ ಅನ್ವಯ ಹೊಸ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಲಾಗಿದೆ.

    ಭೇಟಿ ಮಾಡಿದ್ದ ಜಲಸಂಪನ್ಮೂಲ ಸಚಿವ: ಕರೊನಾ ಲಾಕ್​ಡೌನ್​ಗೆ ಮುನ್ನ ದೆಹಲಿಗೆ ಬಂದಿದ್ದ ರಾಜ್ಯ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಕೃಷ್ಣಾ ಮತ್ತು ಮಹದಾಯಿ ನದಿ ನೀರು ನ್ಯಾಯಾಧಿಕರಣದ ಐತೀರ್ಪಿನ ಅಧಿಸೂಚನೆ ಹೊರಡಿಸಬೇಕು ಎಂದು ಮನವಿ ಸಲ್ಲಿಸಿದ್ದರು. ಇದೇವೇಳೆ ಕಳಸಾ ಬಂಡೂರಿ ಯೋಜನೆಗೂ ಅನುಮತಿ ನೀಡುವ ಸಂಬಂಧ ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆ ಗಮನಸೆಳೆದಿದ್ದರು.

    ಸ್ವಪ್ನಾ ಸುರೇಶ್ ವಿರುದ್ಧ ಉಗ್ರ ಚಟುವಟಿಕೆಗೆ ನಿಧಿ ಸಂಗ್ರಹದ ಆರೋಪ: ಎನ್​ಐಎ ಹೊಸ ಎಫ್​ಐಆರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts