More

    ಹೊತ್ತಿ ಉರಿಯುತ್ತಿವೆ ರಾಜ್ಯದಲ್ಲಿನ ಕಾಡುಗಳು; ಮತ್ತೆ ಮತ್ತೆ ಕಾಡ್ಗಿಚ್ಚು, ಧಗಧಗಿಸುವ ಬೆಂಕಿ ನಂದಿಸಲು ಹರಸಾಹಸ

    ಕೊಡಗು/ಚಿಕ್ಕಮಗಳೂರು: ರಾಜ್ಯದಲ್ಲಿ ಮತ್ತೆ ಮತ್ತೆ ಕಾಡ್ಗಿಚ್ಚು ಕಾಣಿಸಿಕೊಳ್ಳುತ್ತಿದ್ದು, ಕಾಡುಗಳು ಹೊತ್ತಿ ಉರಿಯಲಾರಂಭಿಸಿವೆ. ಮಾತ್ರವಲ್ಲ, ಧಗಿಧಗಿಸುವ ಬೆಂಕಿಯನ್ನು ಆರಿಸಲು ಹರಸಾಹಸ ಪಡುವಂತಾಗಿದೆ. ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಯಲ್ಲಿ ದೊಡ್ಡ ಮಟ್ಟದಲ್ಲಿ ಈ ಕಾಡ್ಗಿಚ್ಚು ಕಾಣಿಸಿಕೊಂಡಿದೆ.

    ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡ್ಗಿಚ್ಚು ಮುಂದುವರಿದ್ದು, ಅರಣ್ಯ ಹಾಗೂ ತೋಟಕ್ಕೂ ಬೆಂಕಿ ಬಿದ್ದಿದೆ. ಚಿಕ್ಕಮಗಳೂರಿನ ಬಸರವಳ್ಳಿ ಗ್ರಾಮದಲ್ಲಿ ಕಾಡ್ಗಿಚ್ಚು ಹೊತ್ತಿಕೊಂಡಿದ್ದು, ಅರಣ್ಯ ಸಿಬ್ಬಂದಿಯಿಂದ ಬೆಂಕಿ ನಂದಿಸುವ ಕಾರ್ಯ ನಡೆಯತ್ತಿದೆ.

    ಇದನ್ನೂ ಓದಿ: ಬಾರ್‌ಗೆ ಬಂದ ಕಡಲಾಮೆ!; ಗ್ರಾಹಕರ ಟೇಬಲ್​ ಕೆಳಗೇ ಇಟ್ಟ ಮೊಟ್ಟೆಗಳ ಸಂರಕ್ಷಣೆ

    ಚಾರ್ಮಾಡಿ ಘಾಟಿಯಲ್ಲೂ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು, ಗುಡ್ಡ ತುದಿಯಲ್ಲೆಲ್ಲ ಬೆಂಕಿ ಆವರಿಸಿಕೊಂಡಿದೆ. ಬೆಂಕಿನಿಂದ‌ ಸಸ್ಯ ಸಂಕುಲ, ಸೋಲಾರಣ್ಯಕ್ಕೆ ಹಾನಿಯಾಗಿದೆ. ಗುಡ್ಡದ ತುದಿಯಲ್ಲಿ ಕಾಡ್ಗಿಚ್ಚು ಇರುವುದರಿಂದ ಸ್ಥಳಕ್ಕೆ ತೆರಳಲು ಪರದಾಟ ನಡೆಸುವಂತಾಗಿದೆ.

    Forest Fire
    ಕಾಡ್ಗಿಚ್ಚು

    ಇದನ್ನೂ ಓದಿ: ಪ್ರೀತಿಸಿ ಅಂತರ್ಜಾತಿ ವಿವಾಹವಾದ ಜೋಡಿಗೆ ಗ್ರಾಮದಿಂದಲೇ ಬಹಿಷ್ಕಾರ; ತರಕಾರಿ, ಹಾಲು, ನೀರೂ ತೆಗೆದುಕೊಳ್ಳುವಂತಿಲ್ಲ! 

    ಮತ್ತೊಂದೆಡೆ ಕೊಡಗಿನ ಭಾಗಮಂಡಲ ವ್ಯಾಪ್ತಿಯ ತಾವೂರು, ತಣ್ಣಿಮಾನಿ ಬೆಟ್ಟದಲ್ಲೂ ಕಾಡ್ಗಿಚ್ಚು ಹೊತ್ತಿಕೊಂಡಿದೆ. ಸಂಜೆ ಐದು ಗಂಟೆಯಿಂದ ಕಾಣಿಸಿಕೊಂಡಿರುವ ಬೆಂಕಿಯನ್ನು ನಂದಿಸಲು ಅರಣ್ಯ ಇಲಾಖೆಯವರು ಹರಸಾಹಸ ನಡೆಸುತ್ತಿದ್ದಾರೆ. ಸುತ್ತಮುತ್ತಲಿನ ತೋಟಗಳಿಗೂ ಬೆಂಕಿ ಹರಡುವ‌ ಸಾಧ್ಯತೆ ಆತಂಕ ಸೃಷ್ಟಿಸಿದೆ.

    Forest Fire and forest department staff
    ಕಾಡ್ಗಿಚ್ಚು ನಂದಿಸಲು ಪ್ರಯತ್ನಿಸುತ್ತಿರುವ ಅರಣ್ಯ ಸಿಬ್ಬಂದಿ

    ಮೇಕಪ್​ನಿಂದಾಗಿ ಬಣ್ಣಗೆಟ್ಟಿತು ವಧುವಿನ ಮುಖ; ಮದುವೆಯೇ ಬೇಡ ಎಂದ ವರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts