More

    ಕಾಡುಗಳ್ಳ ವೀರಪ್ಪನ್ ಸಹಚರ ಬಿಲವೇಂದ್ರನ್​ ಸಾವು

    ಹನೂರು: ಕಾಡುಗಳ್ಳ ವೀರಪ್ಪನ್​ನ ಸಹಚರನೊಬ್ಬ ಬುಧವಾರ ತಡರಾತ್ರಿ ಮೃತಪಟ್ಟಿದ್ದಾನೆ.

    ಪಾಲಾರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿ ಜೀವವಧಿ ಶಿಕ್ಷೆ ಅನುಭವಿಸುತ್ತಿದ್ದ ಬಿಲವೇಂದ್ರನ್(70) ಮೃತ. ಈತ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಸಮೀಪದ ಮಾರ್ಟಳ್ಳಿ ಗ್ರಾಮದವ. 25 ವರ್ಷದಿಂದ ಜೈಲಿನಲ್ಲಿದ್ದ. ಇದನ್ನೂ ಓದಿರಿ video/ ಡಿಜೆ ಹಳ್ಳಿ ಗಲಭೆ; ಪೊಲೀಸ್​ ಆಯುಕ್ತರನ್ನು ಮೌಲ್ವಿಗಳು ಭೇಟಿ ಮಾಡಿದ್ದೇಕೆ?

    ಚಾಮರಾಜನಗರ ಜಿಲ್ಲೆಯ ಗಡಿಭಾಗದ ಪಾಲಾರ್ ಸಮೀಪದ ಸೋರೆಕಾಯಿಮಡುವು ಬಳಿ ನೆಲಬಾಂಬ್ ಸ್ಫೋಟಿಸಿ 22 ಮಂದಿ ಸಾವಿಗೆ ಕಾರಣರಾಗಿ ಮರಣದಂಡನೆ ಶಿಕ್ಷೆಗೆ ಬಿಲವೇಂದ್ರನ್ ಗುರಿಯಾಗಿದ್ದ. ಈತನ ಶಿಕ್ಷೆಯ ಪ್ರಮಾಣವನ್ನು ನಂತರ‌ ಜೀವಾವಧಿ‌‌‌ ಶಿಕ್ಷೆಗೆ ಪರಿವರ್ತಿಸಲಾಗಿತ್ತು.

    ಗಲ್ಲು ಶಿಕ್ಷೆಯಿಂದ ಪಾರಾಗಿದ್ದ ಬಿಲವೇಂದ್ರನ್, ಮೈಸೂರು ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ. ಜೈಲಿನಲ್ಲಿ ಹತ್ತು ದಿನಗಳ ಹಿಂದೆ ಪ್ರಜ್ಞೆ ತಪ್ಪಿದ ಹಿನ್ನೆಲೆಯಲ್ಲಿ ಅಪರಾಧಿಯನ್ನು ಮೈಸೂರಿನ‌ ಕೆ.ಆರ್. ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ನರಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಎಂದು ಮೂಲಗಳು ತಿಳಿಸಿವೆ.

    ಕರಡಿ ಕಣ್ಣೀರಿಗೆ ಕರಗಿದ ರೈತರು!

    ಮಗನನ್ನು ನೋಡಲು ಹೊರಟ ದಂಪತಿ ದಾರಿಯಲ್ಲೇ ಹೆಣವಾದರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts