More

    ವಿಧಿವಿಜ್ಞಾನ ವಿವಿಯ ಮಹತ್ವ ಹೇಳಿದ ಸಿಎಂ ಬೊಮ್ಮಾಯಿ

    ಧಾರವಾಡ: ಇಂದು ಧಾರವಾಡದ ವಿಧಿ ವಿಜ್ಞಾನ ವಿವಿ ಕ್ಯಾಂಪಸ್‌ನ ಶಂಕು ಸ್ಥಾಪನೆಯನ್ನು ಗೃಹಮಂತ್ರಿ ಅಮಿತ್​ ಷಾ ನಡೆಸಿದ್ದಾರೆ

    ಪೂಜಾ ವಿಧಿಯನ್ನು ವಿಧಿವಿಜ್ಞಾನ ವಿವಿ ಧಾರವಾಡ ಕ್ಯಾಂಪಸ್ ಉಸ್ತುವಾರಿ ಮಂಜುನಾಥ್​ ನೆರವೇರಿಸಿದರು. ಈ ಹಿನ್ನೆಲೆಯಲ್ಲಿ ಅಮಿತ್‌ ಶಾ ಪೂಜೆಯಲ್ಲಿಯೂ ಭಾಗಿಯಾಗಿದ್ದು ಅಮಿತ್​ ಷಾಗೆ ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಗೃಹ ಸಚಿವ ಅರಗ ಜ್ಞಾನೇಂದ್ರ, ಹಾಲಪ್ಪ ಆಚಾರ ಸಾಥ್ ನೀಡಿದ್ದಾರೆ.

    ಶಂಕು ಸ್ಥಾಪನೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ, ಫಾರೆನ್ಸಿಕ್​ ಸೈನ್ಸ್​ನ ಮಹತ್ವವನ್ನು ಹೇಳಿದ್ದಾರೆ. ಈ ಸಂದರ್ಭ ‘ಅಮಿತ್ ಶಾ ಅಧುನಿಕ ವಲ್ಲಭಭಾಯಿ ಪಟೇಲ್. ಎನ್ಎಫ್‌ಎಸ್‌ಎಲ್ ಅವಶ್ಯಕತೆ ಬಹಳ ಇದೆ ಕ್ರಿಮಿನಲ್‌ನಲ್ಲಿಯೂ ಅಧುನಿಕ ತಂತ್ರಜ್ಞಾನ ಬಳಕೆ ಆಗುತ್ತಿದ. ಹತ್ತು ವರ್ಷದ ಹಿಂದೆ ಸೈಬರ್ ಕ್ರೈಂ ಬಂದಿರಲಿಲ್ಲ. ಆದರೆ ಈಗ ಸೈಬರ್ ಕ್ರೈಂ ಬಂದಿದೆ. ಸೈಬರ್ ಕಾನೂನು ಆಗಿದೆ. ಇವತ್ತು ಅಪರಾಧಗಳಿಗೆ ಕಡಿವಾಣ ಹಾಕಲು ತಂತ್ರಜ್ಞಾನ ಬೆಳೆಯಬೇಕಿದೆ.

    ತಂತ್ರಜ್ಞಾನದಲ್ಲಿ ನಾವು ಬಹಳ ಮುಂದೆ ಹೋಗಬೇಕಿದೆ. ಅದೇ ಕಾರಣಕ್ಕೆ ಫೋರೆನ್ಸಿಕ್ ಕ್ಷೇತ್ರದಲ್ಲಿ ಬೆಳವಣಿಗೆ ಆಗುತ್ತಿದೆ. ಇವತ್ತು ನಮ್ಮ ರಾಜ್ಯದಲ್ಲಿ ಅತ್ಯಾಧುನಿಕವಾದ ಎಫ್‌ಎಸ್‌ಎಲ್ ಲ್ಯಾಬ್ ಇವೆ. ವಿದೇಶದಲ್ಲಿ ಅಪರಾಧ ಆದಾಗ ವಿಶೇಷ ಅಧಿಕಾರಿಗಳು ಇರುತ್ತಾರೆ. ಆದರೆ ಈಗ ಅಂತಹ ವ್ಯವಸ್ಥೆ ನಮ್ಮ ರಾಜ್ಯದಲ್ಲಿ ಮಾತ್ರ ಬಂದಿದೆ. ನೂರಕ್ಕೂ ಹೆಚ್ಚು ವಿಧಿವಿಜ್ಞಾನ ತಜ್ಞರ ನೇಮಕ‌ ಮಾಡಿದ್ದೇವೆ.

    ವಿಧಿವಿಜ್ಞಾನ ವಿವಿ ಕ್ಯಾಂಪಸ್ ಬರಲು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಾರಣ. ಪಹ್ಲಾದ್​ ಜೋಶಿಯವರೇ ಗೃಹಮಂತ್ರಿ ಅಮಿತ್​ ಷಾರಿಗೆ ಮನವರಿಕೆ ಮಾಡಿ ಕ್ಯಾಂಪಸ್ ತಂದಿದ್ದಾರೆ. ಇದರಿಂದ ಕರ್ನಾಟಕ ರಾಜ್ಯ ಮಾತ್ರವಲ್ಲ ಉಳಿದ ರಾಜ್ಯಗಳಿಗೂ ಅನುಕೂಲ ಆಗಲಿದೆ.

    ಇದರಿಂದಾಗಿ ಉತ್ತರ ಕರ್ನಾಟಕದ ಯುವಕರಿಗೆ ಒಳ್ಳೆ ಅವಕಾಶ ಕೂಡ ಆಗಲಿದೆ. ಅಪರಾಧ ಪತ್ತೆಯಲ್ಲಿ ನಮ್ಮ ಕರ್ನಾಟಕ ಮುಂದೆ ಬರುತ್ತಿದೆ. ಆ ಹಿನ್ನೆಲೆಯಲ್ಲಿ ಇದು ಈಗ ದೊಡ್ಡ ಹೆಜ್ಜೆ ಆಗಿದೆ’ ಎಂದರು. ಈ ಮೂಲಕ ಉದ್ಯೋಗಾವಕಾಶಗಳೂ ರಾಜ್ಯದಲ್ಲಿ ಹೆಚ್ಚಾಗಲಿದ್ದು ಜನರಿಗೆ ಉಪಕಾರವೇ ಆಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts