More

  ಯುವಜನತೆಗೆ ಲಿಂಗಪೂಜೆ ಮಹತ್ವ ತಿಳಿಸಿ

  ಕಂಪ್ಲಿ: ಬಸವಣ್ಣನವರು ಪ್ರತಿಪಾದಿಸಿದ ಲಿಂಗಪೂಜೆ ವೈಜ್ಞಾನಿಕ ಹಿನ್ನೆಲೆಯಿಂದ ಕೂಡಿದ್ದು, ಸಮಾನತೆಯ ಪ್ರತೀಕವಾಗಿದೆ ಎಂದು ಎಮ್ಮಿಗನೂರಿನ ಸರ್ಕಾರಿ ಹಿಪ್ರಾ ಶಾಲೆ ಶಿಕ್ಷಕ ಆದೀಶ್ ಜವಳಿ ಹೇಳಿದರು.

  ಇಲ್ಲಿನ ಗಂಗಾ ಸಂಕೀರ್ಣದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ ಶನಿವಾರ ಹಮ್ಮಿಕೊಂಡಿದ್ದ ಮಹಾಮನೆ ಕಾರ್ಯಕ್ರಮದಲ್ಲಿ ‘ಅರ್ಥಪೂರ್ಣ ಬದುಕಿಗೆ ಶರಣರ ವಿಚಾರಧಾರೆ’ ಕುರಿತು ಉಪನ್ಯಾಸ ನೀಡಿದರು. ಲಿಂಗಪೂಜೆ ಮಹತ್ವವನ್ನು ಯುವಜನತೆಗೆ ತಿಳಿಸಬೇಕಿದೆ. ಶರಣರ ವಚನ ವಿಚಾರಧಾರೆಗಳು ಸರ್ವರೊಡಗೂಡಿ ಜೀವಿಸುವಂತೆ ಬೋಧಿಸುತ್ತವೆ. ಸುಂದರ ಬದುಕು, ವ್ಯಕ್ತಿತ್ವವನ್ನು ರೂಪಿಸುವಲ್ಲಿ ಕೈಗನ್ನಡಿಯಾಗಿವೆ. ಸಮ ಸಮಾಜದ ನಿರ್ಮಾಣಕ್ಕೆ ವಚನ ಸಾಹಿತ್ಯದ ಕೊಡುಗೆ ಅಪಾರವಾಗಿದೆ ಎಂದರು.

  ಮುಖ್ಯಶಿಕ್ಷಕ ಚಂದ್ರಯ್ಯ ಸೊಪ್ಪಿಮಠ ಮಾತನಾಡಿ, ಪ್ರಸ್ತುತ ಬಡತನ, ಅಜ್ಞಾನ, ಭ್ರಷ್ಟಾಚಾರ, ಭಯೋತ್ಪಾದನೆ ಸೇರಿ ನಾನಾ ಪಿಡುಗುಗಳನ್ನು ಹೊಡೆದೊಡಿಸುವಲ್ಲಿ ಶರಣರ ವಿಚಾರಧಾರೆ ಅನುಷ್ಠಾನದ ಅಗತ್ಯವಿದೆ ಎಂದರು.

  ಪರಿಷತ್ ತಾಲೂಕು ಅಧ್ಯಕ್ಷ ಜಿ.ಪ್ರಕಾಶ್ ಅಧ್ಯಕ್ಷತೆವಹಿಸಿದ್ದರು. ಕಾರ್ಯಾಧ್ಯಕ್ಷ ಬಂಗಿ ದೊಡ್ಡ ಮಂಜುನಾಥ, ಪದಾಧಿಕಾರಿಗಳಾದ ಎಲಿಗಾರ ವೆಂಕಟರೆಡ್ಡಿ, ಎಸ್.ಡಿ.ಬಸವರಾಜ, ಕೆ.ಚಂದ್ರಶೇಖರ, ಅಶೋಕ ಕುಕನೂರು, ಗುರುಬಸಮ್ಮ ಸೊಪ್ಪಿಮಠ, ಸಜ್ಜೇದ ವೀರಭದ್ರಪ್ಪ, ಯು.ಎಂ.ವಿದ್ಯಾಶಂಕರ, ಎಸ್.ರಾಮು, ನಿರಂಜನ, ಶೇಖಣ್ಣ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts