More

    ಎಫ್‌ಐಡಿ ಮಾಡಿಸಲು ರೈತರಿಗೆ ತಿಳಿಸಿ

    ಕೊಟ್ಟೂರು: ಆಗತ್ಯ ದಾಖಲೆಗಳೊಂದಿಗೆ ರೈತರು ಗುರುತಿನ ಚೀಟಿ ಮಾಡಿಸಿಕೊಂಡಲ್ಲಿ ಬ್ಯಾಂಕ್ ಖಾತೆಗೆ ಬರ ಪರಿಹಾರ ಹಣ ಸಂದಾಯವಾಗಲಿ ಎಂದು ತಹಸೀಲ್ದಾರ್ ಅಮರೇಶ ಹೇಳಿದರು.

    ರೈತರ ಗುರುತಿನ ಚೀಟಿ(ಎಫ್‌ಐಡಿ)ಅಭಿಯಾನದ ಅಂಗವಾಗಿ ಪಂಚಾಯಿತಿಯಲ್ಲಿ ಆಯೋಜಿಸಿದ್ದ ಪಪಂ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಂಗಳವಾರ ಮಾತನಾಡಿದರು.

    ಕೃಷಿ ಇಲಾಖೆ, ರೇಷ್ಮೆ ಇಲಾಖೆ, ತೋಟಗಾರಿಕೆ ಇಲಾಖೆ, ಗ್ರಾಮೀಣ ಪ್ರದೇಶದಲ್ಲಿರುವ ಗ್ರಾಮ ಒನ್, ಪಟ್ಟಣದಲ್ಲಿರುವ ಕರ್ನಾಟಕ ಒನ್, ಸಿಎಸ್‌ಸಿ ಕೇಂದ್ರದಲ್ಲಿ ಆಧಾರ ಕಾರ್ಡ್, ಪಹಣಿ, ಬ್ಯಾಂಕ್ ಪಾಸ್ ಬುಕ್, ಜಾತಿ ಪ್ರಮಾಣ ಪತ್ರದೊಂದಿಗೆ ರೈತರು ಗುರುತಿನ ಚೀಟಿ ಮಾಡಿಸಬಹುದು. ಪಪಂ ಸದಸ್ಯರು ರೈತರಿಗೆ ಗುರುತಿನ ಚೀಟಿ ಮಾಡಿಸಿಕೊಂಡು ಪರಿಹಾರ ಪಡೆಯುವಂತೆ ರೈತರಿಗೆ ಮನವರಿಕೆ ಮಾಡಬೇಕು.

    ಇದನ್ನು ಓದಿ: ವಿಶ್ವ ಬ್ಯಾಂಕ್ ತಂಡದಿಂದ ನೀರಿನ ಕಾಮಗಾರಿ ಪರಿಶೀಲನೆ

    ಪಟ್ಟಣಕ್ಕೆ ಸರಬರಾಜು ಆಗುವ ಕುಡಿಯುವ ನೀರಿನ ಶುದ್ಧೀಕರಣ ಘಟಕಕ್ಕೆ ದೂಪದಹಳ್ಳಿ ಗ್ರಾಮದ ಸಮೀಪದ ಸರ್ಕಾರದಿಂದ ಮೂರು ಎಕರೆ ಭೂಮಿ ಮಂಜೂರು ಮಾಡಲಾಗಿದೆ ಎಂದರು.

    ಪಟ್ಟಣದಲ್ಲಿ ಅಪರಾಧ ತಡೆಗೆ ಸಿಸಿ ಕ್ಯಾಮರಾ, ಬೀದಿ ನಾಯಿಗಳ ನಿಯಂತ್ರಣ, ಜಾನುವಾರುಗಳಿಗೆ ಮೇವಿನ ಸೌಲಭ್ಯ, ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವಂತೆ ಪಪಂ ಸದಸ್ಯರು ಮನವಿ ಮಾಡಿದರು.

    ಪಪಂ ಮಾಜಿ ಉಪಾಧ್ಯಕ್ಷ ಶಫಿ, ಪಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ತೋಟದ ರಾಮಣ್ಣ, ಸದಸ್ಯರಾದ ಬಾವಿಕಟ್ಟಿ ಶಿವಾನಂದ, ಸಿದ್ದಯ್ಯ, ಕೆಂಗರಾಜ್, ಮೇಘರಾಜ್, ವಿನಯಕುಮಾರ್, ಮೇಘರಾಜ್, ವೀಣಾ ವಿವೇಕಾನಂದ, ಜಗದೀಶ, ಪಶು ವೈದ್ಯಾಧಿಕಾರಿ ಕೊಟ್ರೇಶ, ಕಂದಾಯ ನಿರೀಕ್ಷಕ ಹಾಲಸ್ವಾಮಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts