More

    ರಾಮಜನ್ಮಭೂಮಿಗೆ ಭೇಟಿ ನೀಡ್ತಿರೋ ಮೊದಲ ಪ್ರಧಾನಿ ನರೇಂದ್ರ ಮೋದಿ!

    ಲಖನೌ: ಅಯೋಧ್ಯೆಗೆ ಕಳೆದ 50 ವರ್ಷಗಳ ಅವಧಿಯಲ್ಲಿ ಪ್ರಧಾನಮಂತ್ರಿಗಳು ಭೇಟಿ ನೀಡಿದ್ದಾರಾದರೂ, ಅವರೆಲ್ಲರೂ ರಾಮಜನ್ಮಭೂಮಿಸ್ಥಳಕ್ಕೆ ಭೇಟಿ ನೀಡಿಲ್ಲ. ರಾಮಜನ್ಮಭೂಮಿ ಸ್ಥಳಕ್ಕೆ ಭೇಟಿ ನೀಡ್ತಾ ಇರುವ ಮೊದಲ ಪ್ರಧಾನಿ ನರೇಂದ್ರ ಮೋದಿ. ಅಲ್ಲದೆ, ಶ್ರೀರಾಮ ಮಂದಿರಕ್ಕೆ ಶಿಲಾನ್ಯಾಸ ಕಾರ್ಯಕ್ರಮದಲ್ಲೂ ಅವರು ಭಾಗಿಯಾಗ್ತಾ ಇರುವುದು ವಿಶೇಷ.

    ಆಂಜನೇಯನ ಜನ್ಮಸ್ಥಳ ಬೇರೆ ಕಡೆಯಾದರೂ, ಅಯೋಧ್ಯೆಯೊಂದಿಗಿನ ಹನುಮಾನ್​ ಭಗವಾನ್​ ನಂಟು ಇಂದಿನ ದಿನವನ್ನೂ ಇನ್ನೂ ವಿಶೇಷವಾಗಿಸಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜನ್ಮಭೂಮಿಗೆ ತೆರಳುವ ಮುನ್ನ ಹನುಮಾನ್ ಗುಡಿಗೂ ತೆರಳಿ ಪೂಜೆ ಸಲ್ಲಿಸುತ್ತಿರುವುದು ಗಮನಾರ್ಹ. ಒಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯರ ಭೇಟಿ ಕೂಡ ಐತಿಹಾಸಿಕ ಕಾರ್ಯಕ್ರಮದಲ್ಲಿ ಇತಿಹಾಸವನ್ನು ಬರೆಯುತ್ತಿದೆ.

    ಇದನ್ನೂ ಓದಿ: ಅಯೋಧ್ಯೆಗೆ ಪ್ರಥಮ ಪ್ರಾಶಸ್ತ್ಯ

    ಈ ಹಿಂದೆ ಇಂದಿರಾಗಾಂಧಿಯವರು ಪ್ರಧಾನಿಯಾಗಿದ್ದಾಗ 1966ರಲ್ಲಿ ನಯಾಘಾಟ್​ನ ಸರಯೂ ಸೇತುವೆ ಉದ್ಘಾಟನೆಗೆ ಆಗಮಿಸಿದ್ದರು. ಇದಾಗಿ ಆಚಾರ್ಯ ನರೇಂದ್ರ ದೇವ್ ವಿಶ್ವವಿದ್ಯಾಲಯದ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ತರುವಾಯ, 1979ರಲ್ಲಿ ಹನುಮಾನ್ ಗಡಿ ದರ್ಶನ ಮಾಡುವುದಕ್ಕಾಗಿ ಆಗಮಿಸಿದ್ದರು.

    ಇದನ್ನೂ ಓದಿ: ರಾಮನ ನೆನಪೇ ರಾಮರಾಜ್ಯ

    ಅದಾದ ನಂತರದಲ್ಲಿ ರಾಜೀವ್ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ಎರಡು ಸಲ ಮತ್ತು ಪ್ರಧಾನಿ ಪಟ್ಟದಿಂದ ಇಳಿದ ಬಳಿಕ ಒಮ್ಮೆ ಆಗಮಿಸಿದ್ದರು. 1984ರಲ್ಲಿ ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದರು. 1989ರಲ್ಲಿ ಫೈಜಾಬಾದ್​(ಅಯೋಧ್ಯೆ)ಯಿಂದಲೇ ಪ್ರಚಾರ ಆರಂಭಿಸಿದ್ದರು. 1986ರಲ್ಲಿ ರಾಮಜನ್ಮಭೂಮಿ ಸ್ಥಳದ ಬೀಗ ತೆರೆದು ಅದರ ರಾಜಕೀಯ ಲಾಭ ಪಡೆಯುವ ಪ್ರಯತ್ನ ಮಾಡಿದ್ದರು. ಅಲ್ಲದೆ 1989ರ ನವೆಂಬರ್​ನಲ್ಲಿ ಶಂಕುಸ್ಥಾಪನೆ ಕಾರ್ಯಕ್ರಮ ಕೂಡ ನಡೆಸಿದ್ದರು. ಆದಾಗ್ಯೂ, ಚುನಾವಣೆಯಲ್ಲಿ ಅವರು ಸೋತರು. ಮುಂದೆ, 1990ರಲ್ಲಿ ರಾಜೀವ್ ಗಾಂಧಿ ಸದ್ಭಾವನಾ ಯಾತ್ರೆಯ ಹೆಸರಿನಲ್ಲಿ ಅಯೋಧ್ಯೆಗೆ ಭೇಟಿ ನೀಡಿದ್ದರು. ಅಂದು ಕರಸೇವೆ ಚಳವಳಿಯ ಕಾವು ಜೋರಾಗಿತ್ತು. ಬಿಜೆಪಿ ಎರಡು ಸಲ ಸರ್ಕಾರ ರಚಿಸಿತು.

    ಇದನ್ನೂ ಓದಿ: ಮುಗಿಯಿತು ವನವಾಸ ಇಂದು ಶಿಲಾನ್ಯಾಸ

    ಅಂದು ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು 2003ರಲ್ಲಿ ಅಯೋಧ್ಯೆಗೆ ಭೇಟಿ ನೀಡಿದ್ದರು. ಮಹಾಂತ ರಾಮಚಂದ್ರ ಪರಮಹಂಸರ ಅಂತಿಮ ಸಂಸ್ಕಾರದಲ್ಲಿ ಅವರು ಭಾಗಿಯಾಗಿದ್ದರು. ಅಂದು ಅವರು ರಾಮಮಂದಿರ ನಿರ್ಮಿಸಬೇಕೆಂಬ ತಮ್ಮ ಇಚ್ಛೆಯನ್ನು ಅವರು ಸರಯೂ ನದಿ ದಂಡೆ ಮೇಲೆ ನಿಂತು ಬಹಿರಂಗಪಡಿಸಿದ್ದರು. (ಏಜೆನ್ಸೀಸ್)

    PHOTOS: ನಿರ್ಮಾಣ ಪೂರ್ಣಗೊಂಡ ನಂತರದಲ್ಲಿ ರಾಮಮಂದಿರ ಹೀಗೆ ಕಾಣಿಸಲಿದೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts