More

    ಆನ್​ಲೈನ್​ ಬೆಟ್ಟಿಂಗ್​ ಗೀಳು: ಕುಟುಂಬಕ್ಕೆ ಸೇರಿದ 7 ಎಕರೆ ಜಮೀನು ಮಾರಾಟ ಮಾಡಿದ ಯುವಕ!

    ವಿಜಯವಾಡ​: ಇತ್ತೀಚಿನ ದಿನಗಳಲ್ಲಿ ಸಾಲದ ಆ್ಯಪ್​ಗಳು​ ಮತ್ತು ರಮ್ಮಿಯಂತಹ ಆನ್​ಲೈನ್​ ಜೂಜಾಟಗಳು ಬಡ ಮತ್ತು ಮಧ್ಯಮ ಕುಟುಂಬಗಳ ಕತ್ತು ಹಿಸುಕುತ್ತಿವೆ. ಆನ್​ಲೈನ್​ನಲ್ಲಿ ನಡೆಯುವ ಈ ವಂಚನೆಯ ಚಕ್ರವ್ಯೂಹಕ್ಕೆ ಸಿಲುಕಿ ಸಾಕಷ್ಟು ಮಂದಿ ಮನೆ, ಜಮೀನು ಮಾರಿಕೊಂಡು ಬೀದಿಗೆ ಬಿದ್ದಿದ್ದಾರೆ. ಅಲ್ಲದೆ, ಸಾಲದ ಕಿರುಕುಳ ತಾಳಲಾರದೇ ಬಲಿಯಾಗುತ್ತಿದ್ದಾರೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಇದಕ್ಕೆಲ್ಲ ಕೂಡಲೇ ಕಡಿವಾಣ ಹಾಕದಿದ್ದರೆ, ಇನ್ನುಷ್ಟು ಅಮಾಯಕ ಜೀವಗಳು ಬಲಿಯಾಗುತ್ತವೆ.

    ಇದೀಗ ಆಂಧ್ರ ಪ್ರದೇಶದ ಯುವಕನೊಬ್ಬ ಆನ್​ಲೈನ್​ ಬೆಟ್ಟಿಂಗ್​ ಜಾಲಕ್ಕೆ ಸಿಲುಕಿ ಕುಟುಂಬಕ್ಕೆ ಸೇರಿದ ಏಳು ಎಕರೆ ಜಮೀನನ್ನು ಮಾರಾಟ ಮಾಡಿ, ರಾಜ್ಯ ಬಿಟ್ಟು ಪರಾರಿಯಾಗಿದ್ದಾನೆ.

    ಇದನ್ನೂ ಓದಿ: ನಿತ್ಯಾನಂದನ ಕೈಲಾಸ ರಾಯಭಾರಿ ವಿಜಯಪ್ರಿಯಾ ಬಗ್ಗೆ ನಿಮಗೆಲ್ಲರಿಗೂ ಗೊತ್ತಿರದ ಆಸಕ್ತಿಕರ ಸಂಗತಿ ಇಲ್ಲಿದೆ….

    ಶ್ರೀಕಾಕುಲಂ ಜಿಲ್ಲೆಯ ಮೆಲಿಯಪುಟ್ಟಿ ಮಂಡಲದ ನಿವಾಸಿ ಸಿರಿಗಿಡಿ ಪ್ರವೀಣ್​ ಎಂಬಾತ ಆನ್​ಲೈನ್​ ಬೆಟ್ಟಿಂಗ್​ಗೆ ದಾಸನಾಗಿದ್ದ. ತಂದೆಯ ಮರಣದ ನಂತರವೂ ಈತನ ವರ್ತನೆಯಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲ. ಬೆಟ್ಟಿಂಗ್​ ಗೀಳು ಆತನನ್ನು ತಪ್ಪು ದಾರಿಗೆ ಎಳೆದಿತ್ತು. ವಿಜಯನಗರ ಪೊಲೀಸರು ಬೆಟ್ಟಿಂಗ್​ ಕೇಸ್​ನಲ್ಲಿ ಮೊದಲ ಬಾರಿಗೆ ಪ್ರವೀಣ್​ನನ್ನು ಬಂಧಿಸಿದಾಗ ಸಾಕ್ಷಷ್ಟು ವಿಚಾರಗಳು ಬಯಲಿಗೆ ಬಂದಿತ್ತು. ಬಳಿಕ ಬಿಡುಗಡೆಯಾಗಿದ್ದ.

    2018 ರಿಂದ ಈತ ಸಾಕಷ್ಟು ಜನರ ಬಳಿಕ ಹಣ ವಸೂಲಿ ಮಾಡಿ ವಂಚನೆ ಮಾಡಿದ್ದಾನೆ. ಫೇಸ್‌ಬುಕ್, ಟ್ವಿಟರ್, ಟೆಲಿಗ್ರಾಮ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಸಾಲ, ಉದ್ಯೋಗ ಮತ್ತು ಹೂಡಿಕೆಯ ಲಾಭದ ಹೆಸರಿನಲ್ಲಿ ಅನೇಕರ ಬಳಿಕ ಮೊತ್ತದ ಹಣವನ್ನು ಸಂಗ್ರಹಿಸಿದ್ದಾನೆ. ಅಲ್ಲದೇ ನಕಲಿ ಬೆಟ್ಟಿಂಗ್ ಸೈಟ್​ಗಳ ಮೂಲಕ ಸಂತ್ರಸ್ತರಿಗೆ ಮೋಸ ಮಾಡಿದ್ದಾನೆ. ತನ್ನ ಕುಟುಂಬಕ್ಕೆ ಸೇರಿದ ಏಳು ಎಕರೆ ಕೃಷಿ ಭೂಮಿಯನ್ನು ಚಿತ್ತೂರಿನಲ್ಲಿ ಮೋಸದ ವ್ಯವಹಾರದಲ್ಲಿ ಮಾರಾಟ ಮಾಡಿದ್ದಾನೆ.

    ಪ್ರವೀಣ್​ ವಿರುದ್ಧ ತೆಲಂಗಾಣ ಮತ್ತು ಆಂಧ್ರ ಪ್ರದೇಶದಲ್ಲಿ 13 ಪ್ರಕರಣಗಳಿವೆ. ಪೊಲೀಸರಿಗೆ ಸಿಕ್ಕಿ ಬೀಳುತ್ತೇನೆ ಎಂಬ ಭಯದಲ್ಲಿ ಈತ ಕೇರಳಕ್ಕೆ ಸ್ಥಳಾಂತವಾಗಿದ್ದ. ಅಲ್ಲಿಯೂ ತನ್ನ ಕೃತ್ಯ ಮುಂದುವರಿಸಿದ್ದ ಪ್ರವೀಣ್​, ಬಾಡಿಗೆ ಮನೆಯ ಮಾಲೀಕನಿಗೂ ಸಹ ವಂಚನೆ ಮಾಡಿದ್ದ. 36 ಲಕ್ಷ ರೂ. ಬಂಡವಾಳ ಹೂಡಿಕೆ ಮಾಡಿದರೆ ಎರಡು ಪಟ್ಟು ಲಾಭ ಬರುತ್ತದೆ ಎಂದು ಹೇಳಿ ಮೋಸ ಮಾಡಿದ್ದಾನೆ.

    ಕಳೆದ ವರ್ಷ ವಿಶಾಖಪಟ್ಟಣದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಪಂದ್ಯ ನಡೆಯಿತು. ಪಂದ್ಯದ ಟಿಕೆಟ್​ಗಳು ಲಭ್ಯವಿದೆ ಎಂದು ಪೋಸ್ಟ್​ ಹಾಕಿದ್ದ. ಅದನ್ನು ನೋಡಿದ ಎಲ್​ಬಿ ನಗರದ ನಿವಾಸಿ ಒಬ್ಬ ಪ್ರವೀಣ್​ನನ್ನು ಸಂಪರ್ಕ ಮಾಡಿದ್ದ. ಟಿಕೆಟ್​ ಬೇಕಾದರೆ ಮೊದಲು ಹಣ ಜಮಾ ಮಾಡುವಂತೆ ಕೇಳಿದ್ದ. ಆತನ ಮಾತು ನಂಬಿದ ಯುವಕ ಪ್ರವೀಣ್​ ಖಾತೆಗೆ ಹಣ ಕಳುಹಿಸಿದ್ದ. ಹಣ ಖಾತೆಗೆ ಬಂದಿಲ್ಲ ಅಂತ ಹೇಳಿ ಮತ್ತೊಮ್ಮೆ ಹಣ ಹಾಕಿಸಿಕೊಂಡಿದ್ದ.

    ಇದನ್ನೂ ಓದಿ: 73 ದಿನ ಪ್ರಯಾಣ; ಬೈಕ್​​ನಲ್ಲಿ ತೆರಳಿದ್ದ ಯಾತ್ರಿಕನೋರ್ವ ಮೆಕ್ಕಾ ತಲುಪಿದ ಕೂಡಲೇ ಮೃತ್ಯು

    ತಾನು ಆಂಧ್ರ ಪ್ರದೇಶದ ಆಡಳಿತ ಪಕ್ಷದ ಶಾಸಕನ ಪುತ್ರ ಎಂದು ಹೇಳಿಕೊಂಡಿದ್ದ. ವಿಐಪಿ ಗ್ಯಾಲರಿ ಟಿಕೆಟ್​ ಕೊಡುವುದಾಗಿ ಹೇಳಿ ಸುಮಾರು 2.62 ಲಕ್ಷ ರೂ. ಸಂಗ್ರಹಿಸಿದ್ದ. ಬಳಿಕ ಪ್ರವೀಣ್​ನಿಂದ ಮೋಸ ಹೋಗಿರುವುದು ಗೊತ್ತಾದ ಬಳಿಕ ಯುವಕ ರಾಚಕೊಂಡ ಸೈಬರ್​ ಕ್ರೈಂ ಪೊಲೀಸ್​ ವಿಭಾಗದಲ್ಲಿ ದೂರು ನೀಡಿದ್ದ. ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದ ಇನ್​​ಸ್ಪೆಕ್ಟರ್​ ನರೇಂದರ್​ ಗೌಡ್​, ಆರೋಪಿ ಪ್ರವೀಣ್​ನನ್ನು ಸಾಕ್ಷಿ ಸಮೇತ ಕೇರಳದ ಕೊಚ್ಚಿಯಲ್ಲಿ ಬಂಧಿಸಿದ್ದಾರೆ.

    ಪ್ರವೀಣ್​ನನ್ನು ತಮ್ಮ ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಆತನ ವಿರುದ್ಧ 13 ಪ್ರಕರಣಗಳು ಇರುವುದು ಗೊತ್ತಾಗಿದೆ. ಆತನ ಬಳಿಕ 8.9 ಲಕ್ಷ ರೂ. ಹಣ ಮತ್ತು ಎರಡು ಮೊಬೈಲ್​ ಫೋನ್​ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ತನಿಖೆ ಮುಂದುವರಿದಿದೆ. (ಏಜೆನ್ಸೀಸ್​)

    ಆಂಟಿ ಎಂಬುದು ಇಂದು ಅಶ್ಲೀಲ ಪದವಾಗಿದೆ: ಆಂಟಿ ಟ್ರೆಂಡ್​ಗೆ ನಟಿ ಕಸ್ತೂರಿ ಖಡಕ್​ ತಿರುಗೇಟು

    ಭಾರತದ ವಿರುದ್ಧ ಚೀನಾ ಹೊಸ ತಂತ್ರ; ಹಿಂದಿ ಭಾಷೆಯನ್ನು ಡಿಕೋಡ್ ಮಾಡಲು 19 ಭಾಷಾಂತರಕಾರರ ನೇಮಕ

    ನಿತ್ಯಾನಂದನ ಕೈಲಾಸ ರಾಯಭಾರಿ ವಿಜಯಪ್ರಿಯಾ ಬಗ್ಗೆ ನಿಮಗೆಲ್ಲರಿಗೂ ಗೊತ್ತಿರದ ಆಸಕ್ತಿಕರ ಸಂಗತಿ ಇಲ್ಲಿದೆ….

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts