More

    ಇನ್ನೆಷ್ಟು ತಲೆಮಾರು ಮೀಸಲಾತಿ ಮುಂದುವರಿಯಬೇಕು? ಸರ್ಕಾರಕ್ಕೆ ಸುಪ್ರೀಂಕೋರ್ಟ್​ ಪ್ರಶ್ನೆ

    ನವದೆಹಲಿ: ಶಿಕ್ಷಣ ಮತ್ತು ಉದ್ಯೋಗದಲ್ಲಿ ಜಾತಿವಾರು ಮೀಸಲಾತಿ ಇನ್ನು ಎಷ್ಟು ತಲೆಮಾರು ಮುಂದುವರಿಯಬೇಕು ಎಂದು ಸುಪ್ರೀಂಕೋರ್ಟ್ ಸರ್ಕಾರವನ್ನು ಪ್ರಶ್ನಿಸಿದೆ.

    ಮರಾಠ ಮೀಸಲಾತಿ ಪ್ರಶ್ನಿಸಿದ ಅರ್ಜಿ ವಿಚಾರಣೆ ವೇಳೆ ಈ ಪ್ರಶ್ನೆಯನ್ನು ಮುಂದಿಟ್ಟಿದೆ. ಮೀಸಲಾತಿಗೆ ಇರುವ ಗರಿಷ್ಠ ಶೇ.50ರ ಮಿತಿಯನ್ನು ತೆಗೆದರೆ ಮುಂದಾಗಬಹುದಾದ ಪರಿಣಾಮದ ಬಗ್ಗೆಯೂ ಕಳವಳ ವ್ಯಕ್ತಪಡಿಸಿದೆ.

    ಇದನ್ನೂ ಓದಿರಿ: Web Exclusive: ಕುಟುಂಬ ರಕ್ಷಣೆಗೆ ಸುರಕ್ಷಾ, ನಗದು ರಹಿತ ಚಿಕಿತ್ಸಾ ಸೌಲಭ್ಯ: ಧರ್ಮಸ್ಥಳ ಸಂಸ್ಥೆ ನೂತನ ಯೋಜನೆ

    ಶೇ. 50 ಮೀಸಲಾತಿ ಬೇಡ ಅಥವಾ ಮೀಸಲಾತಿಗೆ ಮಿತಿಯೇ ಇಲ್ಲ ಎನ್ನುವುದಾದರೆ ಸಮಾನತೆಗೆ ಏನರ್ಥ ಉಳಿಯುತ್ತದೆ?, ಅಸಮಾನತೆ ಹೋಗಲಾಡಿಸುವ ಪರಿ ಏನು?, ಇನ್ನೆಷ್ಟು ತಲೆಮಾರು ಮೀಸಲಾತಿ ಮುಂದುವರಿಯಬೇಕು? ಈ ಬಗ್ಗೆ ನಾವು ವಿಚಾರ ಮಾಡಬೇಕು ಎಂದು ನ್ಯಾಯಮೂರ್ತಿ ಅಶೋಖ್ ಭೂಷಣ್ ನೇತೃತ್ವದ ಪಂಚ ಸದಸ್ಯರ ಸಾಂವಿಧಾನಿಕ ಪೀಠ ಅಭಿಪ್ರಾಯಪಟ್ಟಿತು.

    ಬದಲಾದ ಸನ್ನಿವೇಶದಲ್ಲಿ ಮಂಡಲ ಆಯೋಗದಂತೆ ಕಲ್ಪಿಸಿರುವ ಮೀಸಲಾತಿ ಮತ್ತು ಮೀಸಲಾತಿಗೆ ಶೇ. 50ರ ಗರಿಷ್ಠ ಮಿತಿ ತೀರ್ಪಿನ ಬಗ್ಗೆ ಮರು ವಿಮರ್ಶೆ ಮಾಡುವ ಅಗತ್ಯ ಇದೆ ಮತ್ತು ಕೆಲಸವನ್ನು ರಾಜ್ಯಗಳಿಗೆ ಬಿಡಬೇಕಾಗಬಹುದು ಎಂದು ಹೇಳಿತು. (ಏಜೆನ್ಸೀಸ್​)

    ಬಟ್ಟೆ ಹಾಕೋದು-ಬಿಚ್ಚುವುದರ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ: ಚೆನ್ನಾಗಿ ಕಾಣಿಸಬೇಕಂತ ಸಿದ್ದರಾಮಯ್ಯ ಕಲರ್ ಬಟ್ಟೆ ತಗೋಳೋಕೆ ಶುರುಮಾಡಿದ್ದಾರಂತೆ!

    ಖಾಲಿ ಇರುವ 1,835 ಹುದ್ದೆಗಳಿಗೆ ಅತಿಥಿ ಉಪನ್ಯಾಸಕರ ನೇಮಕಕ್ಕೆ ಸರ್ಕಾರದ ಅನುಮೋದನೆ

    ಆಂಬುಲೆನ್ಸ್​ನಲ್ಲೇ ಕಾಲೇಜಿಗೆ ಬಂದರು; ಪಿಪಿಇ ಕಿಟ್ ಧರಿಸಿ ಪರೀಕ್ಷೆ ಬರೆದರು; ಮಹಾರಾಣಿ ಅಮ್ಮಣ್ಣಿ ಕಾಲೇಜಿನ ನಾಲ್ವರಿಗೆ ಸೋಂಕು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts