More

    Web Exclusive: ಕುಟುಂಬ ರಕ್ಷಣೆಗೆ ಸುರಕ್ಷಾ, ನಗದು ರಹಿತ ಚಿಕಿತ್ಸಾ ಸೌಲಭ್ಯ: ಧರ್ಮಸ್ಥಳ ಸಂಸ್ಥೆ ನೂತನ ಯೋಜನೆ

    • ಶ್ರೀಕಾಂತ ಅಕ್ಕಿ, ಬಳ್ಳಾರಿ

    ಪದ್ಮವಿಭೂಷಣ ಡಾ.ವೀರೇಂದ್ರ ಹೆಗ್ಗಡೆ ಅವರ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಸಾಮಾಜಿಕ ಕಾರ್ಯಗಳಲ್ಲಿ ಮೈಲಿಗಲ್ಲು ಸಾಧಿಸಿದೆ. ಇದೀಗ ಮತ್ತೊಂದು ಮಹತ್ತರ ಕಾರ್ಯಕ್ಕೆ ಚಾಲನೆ ನೀಡಿದ್ದು, ಸಂಘದ ಸದಸ್ಯರ ಜತೆಗೆ ಅವರ ಕುಟುಂಬದವರ ಆರೋಗ್ಯ ರಕ್ಷಣೆಗೆ ಮಹತ್ವದ ತೀರ್ಮಾನ ಕೈಗೊಂಡಿದೆ.

    ಸ್ವಸಹಾಯ ಸಂಘದಡಿ ಗ್ರಾಮೀಣ ಕುಟುಂಬಗಳಿಗೆ ಆಸರೆಯಾಗಿರುವ ಈ ಸಂಸ್ಥೆ, ಇದೀಗ ಆರೋಗ್ಯ ಸುಧಾರಣೆಗೆ ಉತ್ತೇಜನ ನೀಡಲು ಮುಂದಾಗಿದೆ. ಇದಕ್ಕಾಗಿ ಸಂಘದ ಕುಟುಂಬದವರಿಗೆ ಸಂಪೂರ್ಣ ಸುರಕ್ಷಾ ಯೋಜನೆ ಜಾರಿಗೊಳಿಸುತ್ತಿದೆ. ಈಗಾಗಲೇ ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಉಡುಪಿ, ದಕ್ಷಿಣ ಕನ್ನಡ, ಮಂಗಳೂರು ಜಿಲ್ಲೆಗಳಲ್ಲಿ ಕುಟುಂಬದ ಸದಸ್ಯರಿಗೆ ಹಾಗೂ ಬಳ್ಳಾರಿಯಲ್ಲಿ ಸಂಘದ ಸಿಬ್ಬಂದಿಗೆ ಸಂಪೂರ್ಣ ಸುರಕ್ಷಾ ಯೋಜನೆ ಅನುಷ್ಠಾನ ಮಾಡಲಾಗಿದೆ.ಉಳಿದ ಜಿಲ್ಲೆಗಳಲ್ಲಿ ಹಂತಹಂತವಾಗಿ ಮಾಡಲಾಗುತ್ತಿದೆ.

    ಏನೆಲ್ಲ ಇರುತ್ತದೆ ?

    ರಾಜ್ಯದ ಎಲ್ಲ ಜಿಲ್ಲೆಯ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳೊಂದಿಗೆ ಶ್ರೀ ಧರ್ಮಸ್ಥಳ ಸಂಸ್ಥೆ ಒಪ್ಪಂದ ಮಾಡಿಕೊಳ್ಳುತ್ತಿದೆ. ಈ ಯೋಜನೆಯಡಿ ನೋಂದಾಯಿಸುವ ಕುಟುಂಬ ಸದಸ್ಯರು ತಲಾ 245 ರೂ. ಪಾವತಿಸಿ ವಿಮೆ ಮಾಡಿಸಬೇಕು. ಈ ಪೈಕಿ ಸಂಘದಿಂದ 125 ರೂ.ದೊರಕಲಿದೆ. ಸಂಘದ ಸದಸ್ಯರು 120ರೂ. ವಿಮೆ ಶುಲ್ಕ ಪಾವತಿಸಬೇಕು. ಹೀಗೆ ಪಾವತಿಸಿದ ಸದಸ್ಯರಿಗೆ ಆರೋಗ್ಯ ರಕ್ಷಾ ಕಾರ್ಡ್ ನೀಡಲಾಗುತ್ತದೆ. ಇದೇ ಆರೋಗ್ಯ ಕಾರ್ಡ್ ಇಟ್ಟುಕೊಂಡು ತಮಗೆ ಇಲ್ಲವೇ ಕುಟುಂಬದ ಯಾರಿಗಾದರೂ ಅನಾರೋಗ್ಯ ಉಂಟಾದರೆ ಟ್ರಸ್ಟ್ ಒಪ್ಪಂದ ಮಾಡಿಕೊಂಡ ಆಸ್ಪತ್ರೆಗಳಿಗೆ ಸದಸ್ಯರು ಭೇಟಿ ನೀಡಿ, ಆರೋಗ್ಯ ಕಾರ್ಡ್ ಹಾಗೂ ಸಂಘದ ಸದಸ್ಯತ್ವದ ಗುರುತಿನ ಚೀಟಿ ತೋರಿಸಬೇಕು. ಆಸ್ಪತ್ರೆಯಲ್ಲಿ ಸಂಘದ ಸದಸ್ಯರಿಗಾದರೆ ಆರೋಗ್ಯ ರಕ್ಷಾ ಯೋಜನೆಯಡಿ ಗರಿಷ್ಠ 10 ಸಾವಿರ ರೂ.ವರೆಗೆ ನಗದು ರಹಿತ ಚಿಕಿತ್ಸಾ ಸೌಲಭ್ಯ ಪಡೆಯಬಹುದು. ಕುಟುಂಬದ ಪ್ರತಿ ಸದಸ್ಯರಿಗೆ ಸಂಪೂರ್ಣ ಸುರಕ್ಷಾ ಯೋಜನೆಯಡಿ 20 ಸಾವಿರ ರೂ.ವರೆಗೆ ವಿಮೆ ಸೌಲಭ್ಯ ದೊರೆಯಲಿದೆ.

    ಟ್ರಸ್ಟ್ ವತಿಯಿಂದಲೇ ಒಪ್ಪಂದವಾಗಿರುವ ಆಸ್ಪತ್ರೆಗೆ ಹಣ ಪಾವತಿಯಾಗಲಿದೆ.ಒಪ್ಪಂದವಿಲ್ಲದ ಆಸ್ಪತ್ರೆಗಳಲ್ಲೂ ಚಿಕಿತ್ಸೆ ಪಡೆದು, ಹಣ ಪಾವತಿಸಿದ ಬಿಲ್​ಗಳ ದಾಖಲಾತಿಗಳನ್ನು ಟ್ರಸ್ಟ್​ಗೆ ಸಲ್ಲಿಸಿದರೆ ಆ ಸದಸ್ಯರ ಖಾತೆಗೆ ಹಣ ಸಂದಾಯವಾಗಲಿದೆ. ರಾಜ್ಯದಲ್ಲಿ ಧರ್ಮಸ್ಥಳ ಸ್ವಸಹಾಯ ಸಂಘದಡಿ 50.54 ಲಕ್ಷ ಸದಸ್ಯರಿದ್ದು, ಇವರೆಲ್ಲರ ಕುಟುಂಬದವರಿಗೆ ಸಂಪೂರ್ಣ ಸುರಕ್ಷಾ ಯೋಜನೆಯ ಲಾಭ ದೊರೆಯಲಿದೆ. ಬಳ್ಳಾರಿ ಜಿಲ್ಲೆಯಲ್ಲಿ 1.30 ಲಕ್ಷ ಸದಸ್ಯರಿದ್ದಾರೆ.

    ಇದಲ್ಲದೆ, ಸಂಘದ ಸದಸ್ಯೆಯರ ಮೊದಲ ಎರಡು ಹೆರಿಗೆಗಳಿಗೆ ನಿಗದಿತ ಮೊತ್ತದ ಹೆರಿಗೆ ಭತ್ಯೆಯೂ ಲಭ್ಯವಿದೆ. ಸರ್ಕಾರಿ ಆಸ್ಪತ್ರೆಯಲ್ಲಾದ ಸಹಜ ಹೆರಿಗೆಗೆ ಗರಿಷ್ಠ ಎರಡು ಸಾವಿರ ರೂ., ಹಾಗೂ ಸಿಸೇರಿಯನ್ ಹೆರಿಗೆಗೆ ಗರಿಷ್ಠ ನಾಲ್ಕು ಸಾವಿರ ರೂ.ಭತ್ಯೆ ನೀಡಲಾಗುತ್ತದೆ. ಖಾಸಗಿ ಆಸ್ಪತ್ರೆಯಲ್ಲಿ ಸಹಜ ಹೆರಿಗೆಗೆ ವೆಚ್ಚದ ಬಿಲ್ ಆಧಾರದಲ್ಲಿ ಐದು ಸಾವಿರ ರೂ. ಹಾಗೂ ಸಿಸೇರಿಯನ್ ಹೆರಿಗೆಗೆ ಗರಿಷ್ಠ 10 ಸಾವಿರ ರೂ.ಹೆರಿಗೆ ಭತ್ಯೆ ದೊರೆಯಲಿದೆ.

    ===ಕೋಟ್===

    ಗ್ರಾಮೀಣ ಭಾಗದ ಕುಟುಂಬಗಳ ಏಳ್ಗೆಗಾಗಿ ಸಂಸ್ಥೆ ಶ್ರಮಿಸುತ್ತಿದೆ. ಇದೀಗ ಸಂಘದ ಸದಸ್ಯರ ಆರೋಗ್ಯದ ಜತೆಗೆ ಅವರ ಕುಟುಂಬದವರಿಗೆ ಸಂಪೂರ್ಣ ಸುರಕ್ಷಾ ಯೋಜನೆ ಜಾರಿಗೊಳಿಸುತ್ತಿದ್ದೇವೆ.ಡಾ.ವೀರೇಂದ್ರ ಹೆಗ್ಗಡೆಯವರ ಮಹತ್ತರ ಕಾರ್ಯಗಳಲ್ಲಿ ಇದೂ ಒಂದು.

    | ಚಂದ್ರಶೇಖರ್ ಶೆಟ್ಟಿ, ನಿರ್ದೇಶಕ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ, ಬಳ್ಳಾರಿ

    === ಕೋಟ್ ===

    ಸದಾ ಸಾಮಾಜಿಕ ಚಟುವಟಿಕೆಗಳನ್ನು ಮಾಡುತ್ತಿರುವ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಮತ್ತೊಂದು ಮೈಲಿಗಲ್ಲು ಎಂಬಂತೆ ಸಂಘದ ಸದಸ್ಯರ ಹಾಗೂ ಕುಟುಂಬದವರ ಆರೋಗ್ಯ ಕಾಳಜಿ ವಹಿಸುತ್ತಿರುವುದಕ್ಕೆ ಬಹಳಷ್ಟು ಖುಷಿಯಾಗಿದೆ.ನಾನು ಕೂಡ ಈ ತಂಡದ ಸದಸ್ಯಳಾಗಿದ್ದೇನೆ ಎನ್ನುವುದೇ ನನ್ನ ಹೆಮ್ಮೆ.

    | ಮೀನಾಕ್ಷ್ಮ್ಮ್ಮು, ಮಹಿಳೆ, ಬೆಣಕಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts