More

    ಮಕ್ಕಳಿಗೆ ರಾಗಿ ಉತ್ತಮ ಪೌಷ್ಟಿಕ ಆಹಾರ

    ಸವದತ್ತಿ: ಸರ್ಕಾರವು ಶಾಲಾ ಮಕ್ಕಳಿಗೆ ಅತ್ಯಂತ ಪೌಷ್ಟಿಕವಾದ ರಾಗಿ ಮಾಲ್ಟ್ ನೀಡುತ್ತಿದೆ. ವಿದ್ಯಾರ್ಥಿಗಳು ಸದುಪಯೋಗ ಪಡೆದು ಸದೃಢರಾಗಬೇಕು. ಉತ್ತಮ ಪ್ರಜೆಗಳಾಗಿ ಸಂವಿಧಾನದ ಆಶಯ ಹಾಗೂ ಸ್ವಾತಂತ್ರ್ಯದ ಉದ್ದೇಶಗಳಿಗೆ ಅನುಗುಣವಾಗಿ ಬದುಕು ರೂಪಿಸಿಕೊಳ್ಳಬೇಕು ಎಂದು ತಹಸೀಲ್ದಾರ್ ಮಧುಸೂದನ ಕುಲಕರ್ಣಿ ಕರೆ ನೀಡಿದರು.

    ಪಟ್ಟಣದ ಗುರ್ಲಹೊಸೂರಿನ ಸರ್ಕಾರಿ ಶಾಸಕರ ಮಾದರಿ ಶಾಲೆಯಲ್ಲಿ ಶಿಕ್ಷಣ ಇಲಾಖೆ, ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ ಮತ್ತು ಕೆಎಂಎ್ ಸಂಸ್ಥೆ ಸಹಭಾಗಿತ್ವದಲ್ಲಿ ಶುಕ್ರವಾರ ವಿದ್ಯಾರ್ಥಿಗಳಿಗೆ ರಾಗಿ ಮಾಲ್ಟ್ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಬಿಇಒ ಮೋಹನ ದಂಡಿನ ಮಾತನಾಡಿ, ರಾಗಿ ಮಾಲ್ಟ್ ವಾರದಲ್ಲಿ ಮೂರು ದಿನ ಸರ್ಕಾರಿ ಮತ್ತು ಅನುದಾನಿತ ಶಾಲೆಯ 1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ವಿತರಿಸಲಾಗುತ್ತದೆ ಎಂದರು.

    ಅಕ್ಷರ ದಾಸೋಹ ಎಡಿ ಮೈತ್ರಾದೇವಿ ವಸದ ಮಾತನಾಡಿ, ಉತ್ತಮ ಪೌಷ್ಟಿಕಾಂಶವು ಗುಣಮಟ್ಟದ ಶಿಕ್ಷಣಕ್ಕೆ ರಹದಾರಿಯಾಗಿದೆ ಎಂದರು. ಕ್ಷೇತ್ರ ಸಮನ್ವಯಾಧಿಕಾರಿ ಬಿ.ಎನ್. ಬ್ಯಾಳಿ, ಸುಧೀರ ವಾಗೇರಿ, ಸಿಡಿಪಿಒ ಸುನೀತಾ ಪಾಟೀಲ, ಪ್ರೇಮಾ ಹಲಕಿ, ಟಿ.ಬಿ. ಏಗನಗೌಡರ, ಜಿ.ಎಂ. ಕರಾಳೆ, ಗಿರೀಶ ಮುನವಳ್ಳಿ, ಎಂ.ಬಿ. ಕಮ್ಮಾರ, ದ್ಯಾಮಣ್ಣ ಸುತಗಟ್ಟಿ, ಶಿವಾನಂದ ಪಟ್ಟಣಶೆಟ್ಟಿ, ದಿಲಾವರ ಸನದಿ, ಪ್ರವೀಣ ಮುನವಳ್ಳಿ, ವೈ.ಬಿ.ಕಡಕೋಳ, ಸಿ.ವಿ. ಬಾರ್ಕಿ, ಎಸ್.ಬಿ. ಬೆಟ್ಟದ, ಡಿ.ಎಲ್. ಭಜಂತ್ರಿ, ರಾಮಚಂದ್ರಪ್ಪ, ಆನಂದ ಬೆಳವಟಗಿ, ಎಂ.ಜಿ. ದೊಡಮನಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts