More

    110 ದಶಲಕ್ಷ ವರ್ಷಗಳ ಹಿಂದಿನ ಡೈನೋಸರ್​ಗಳ ಹೆಜ್ಜೆ ಗುರುತು ಪತ್ತೆ ಹಚ್ಚಿದ ಬ್ರಿಟನ್!

    ಲಂಡನ್: ಡೈನೋಸರ್​ಗಳು ಭೂಮಿ ಮೇಲಿಂದ ಕಾಣೆಯಾಗಿ ಸಾಕಷ್ಟು ವರ್ಷಗಳೇ ಕಳೆದಿವೆ. ಇದೀಗ ಸುಮಾರು 110 ದಶಲಕ್ಷ ಹಿಂದೆ ಬ್ರಿಟನ್ ನೆಲದಲ್ಲಿ ಓಡಾಡಿದ್ದ ಕೊನೆಯ ಡೈನೋಸರ್​ಗಳ ಹೆಜ್ಜೆ ಗುರುತನ್ನು ಕಂಡುಹಿಡಿಯಲಾಗಿದೆ.


    ಹೇಸ್ಟಿಂಗ್ಸ್ ಮ್ಯೂಸಿಯಂ ಮತ್ತು ಆರ್ಟ್ ಗ್ಯಾಲರಿಯ ಕ್ಯುರೇಟರ್ ಮತ್ತು ಪೋರ್ಟ್ಸ್‌ಮೌತ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಈ ಹೆಜ್ಜೆ ಗುರುತನ್ನು ಪತ್ತೆ ಹಚ್ಚಿದ್ದಾರೆ. ಕೆಂಟ್ನ ಫೋಕ್ಸ್ಟೋನ್ನಲ್ಲಿನ ಬಂಡೆಗಳಲ್ಲಿ ಹೆಜ್ಜೆ ಗುರುತನ್ನು ಕಾಣಲಾಗಿದೆ. ಸುಮಾರು ಆರು ವಿಭಿನ್ನ ಜಾತಿಯ ಡೈನೋಸಾರ್‌ಗಳ ಹೆಜ್ಜೆ ಗುರುತು ಅಲ್ಲಿರುವುದಾಗಿ ಹೇಳಲಾಗಿದೆ.


    ಹೆಜ್ಜೆ ಗುರುತುಗಳನ್ನು ಈ ವಾರ ‘ಪ್ರೊಸೀಡಿಂಗ್ಸ್ ಆಫ್ ದಿ ಜಿಯಾಲಜಿಸ್ಟ್ಸ್ ಅಸೋಸಿಯೇಷನ್’ ಜರ್ನಲ್​ನಲ್ಲಿ ಪ್ರಕಟಿಸಲಾಗಿದೆ ಮತ್ತು ಕೆಲವು ಹೆಜ್ಜೆಗುರುತುಗಳನ್ನು ಫೋಕ್ಸ್ಟೋನ್ ಮ್ಯೂಸಿಯಂನಲ್ಲಿ ಪ್ರದರ್ಶನಕ್ಕಿಡಲಾಗಿದೆ.


    “ಫೋಕ್ಸ್ಟೋನ್ ರಚನೆ” ಎಂದು ಕರೆಯಲ್ಪಡುವ ಸ್ಥಳಗಳಲ್ಲಿ ಡೈನೋಸಾರ್ ಹೆಜ್ಜೆಗುರುತುಗಳು ಕಂಡುಬಂದಿರುವುದು ಇದೇ ಮೊದಲು. ಇದು ಮಹತ್ತರ ಸಂಶೋಧನೆಯಾಗಿದೆ ಎಂದು ಪೋರ್ಟ್ಸ್‌ಮೌತ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡೇವಿಡ್ ಮಾರ್ಟಿಲ್ ತಿಳಿಸಿದ್ದಾರೆ. ಈಗ ಮನುಷ್ಯರು ಓಡಾಡುವ ಡೋವರ್ನ ವೈಟ್ ಕ್ಲಿಫ್ಸ್ ಸ್ಥಳದಲ್ಲಿ 110 ದಶಲಕ್ಷ ವರ್ಷಗಳ ಹಿಂದೆ ಡೈನೋಸರ್​ಗಳು ಓಡಾಡುತ್ತಿದ್ದವು ಎಂದು ಅವರು ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್)

    ಜಮ್ಮು ಕಾಶ್ಮೀರದಲ್ಲಿ ರಾಜಕೀಯ ನಾಯಕರೊಂದಿಗೆ ಮೋದಿ ಸಭೆ; ಮೆಹಬೂಬಾ ಮುಫ್ತಿ, ಓಮರ್​​ ಅಬ್ದುಲ್ಲಾ ಸೇರಿ ಹಲವರಿಗೆ ಆಹ್ವಾನ

    ಗಂಡನೊಂದಿಗೆ ಫೋನ್​ನಲ್ಲಿ ಮಾತನಾಡುತ್ತಾ ಹೊರಹೋದವಳು ದೂರದ ರೈಲ್ವೆ ಹಳಿ ಬಳಿ ಮಾಂಸವಾಗಿ ಪತ್ತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts