More

    ಸೋಮವಾರದಿಂದ ದೇಶೀಯ ವಿಮಾನಯಾನ ಆರಂಭ

    ನವದೆಹಲಿ: ದೇಶೀಯ ವಿಮಾನ ಸಂಚಾರ ಸೋಮವಾರ ಮತ್ತೆ ಆರಂಭವಾಗಲಿದೆ. ಈ ಹಿಂದೆ ನಿರ್ಧರಿಸಿದಂತೆಯೇ ಹಂತಹಂತವಾಗಿ ಪುನರಾರಂಭಿಸಲಾಗುವುದು ಎಂದು ಕೇಂದ್ರ ಸರ್ಕಾರ ಬುಧವಾರ ತಿಳಿಸಿದೆ.
    ದೇಶಿಯ ನಾಗರಿಕ ವಿಮಾನಯಾನ ಕಾರ್ಯಾಚರಣೆ ಮೇ 25 ರಿಂದ ನಿರ್ಧರಿತ ರೀತಿಯಲ್ಲಿ ಮರು ಆರಂಭಗೊಳ್ಳಲಿದೆ. ಎಲ್ಲ ವಿಮಾನ ನಿಲ್ದಾಣಗಳು ಮತ್ತು ವಿಮಾನಗಳನ್ನು ಕಾರ್ಯಾಚರಣೆಗೆ ಸಿದ್ಧವಾಗಿರುವಂತೆ ತಿಳಿಸಲಾಗುತ್ತಿದೆ.

    ಇದನ್ನೂ ಓದಿ: ಐಬಿಪಿಎಸ್ ಪರೀಕ್ಷಾ ಫಲಿತಾಂಶ ಪ್ರಕಟ: ವೆಬ್​ಸೈಟ್​​ನಲ್ಲಿ ನೋಡಿ
    ಪ್ರಯಾಣಿಕರ ಸಂಚಾರಕ್ಕಾಗಿ ನಿಗದಿತ ಮಾರ್ಗಸೂಚಿಯನ್ನು ನಾಗರಿಕ ವಿಮಾನಯಾನ ಸಚಿವಾಲಯ ಪ್ರತ್ಯೇಕವಾಗಿ ನೀಡಲಿದೆ ಎಂದು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಟ್ವೀಟ್ ಮಾಡಿದ್ದಾರೆ.
    ಮಾರ್ಚ್ 25 ರಂದು ಪ್ರಾರಂಭವಾದ 54 ದಿನಗಳ ಲಾಕ್‌ಡೌನ್ ಅವಧಿಯಲ್ಲಿ ಎಲ್ಲ ದೇಶೀಯ ಪ್ರಯಾಣಿಕ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿತ್ತು. ಆದಾಗ್ಯೂ, ಸರಕು ವಿಮಾನಗಳು, ವೈದ್ಯಕೀಯ ಸಾಮಗ್ರಿ ರವಾನೆ ವಿಮಾನಗಳು ಮತ್ತು ವಾಯುಯಾನ ನಿಯಂತ್ರಕ ಸಂಸ್ಥೆ ಡಿಜಿಸಿಎ ಅನುಮೋದಿಸಿದ ವಿಶೇಷ ವಿಮಾನಗಳ ಸಂಚಾರಕ್ಕೆ ಅನುಮತಿ ನೀಡಲಾಗಿತ್ತು.

    ಇದನ್ನೂ ಓದಿ: VIDEO | ಅಳಿದ ಸಂತತಿಯ ಉಳಿದ ನೆನಪುಗಳು…


    ಮೇ ಆರಂಭದಲ್ಲಿ, ದೇಶಾದ್ಯಂತ ವಿಮಾನ ನಿಲ್ದಾಣ ವ್ಯವಸ್ಥಾಪಕರಿಗೆ ನೀಡಿದ ಮಾಹಿತಿಯಲ್ಲಿ ವಿಮಾನ ನಿಲ್ದಾಣಗಳ ಪ್ರಾಧಿಕಾರವು (ಎಎಐ) ಎಲ್ಲ ವಿಮಾನ ನಿಲ್ದಾಣಗಳಲ್ಲಿ ಕಾರ್ಯಾಚರಣೆ ನಿರ್ವಹಿಸಲು ಸನ್ನದ್ಧರಾಗಿರಬೇಕು ಎಂದು ತಿಳಿಸಿತ್ತು.
    ಲಾಕ್‌ಡೌನ್ ಅವಧಿ ಮುಗಿದ ನಂತರ ವಿಮಾನ ನಿಲ್ದಾಣಗಳು ವಿವಿಧ ಹಂತಗಳಲ್ಲಿ ಸೀಮಿತ ದೇಶೀಯ/ ಅಂತಾರಾಷ್ಟ್ರೀಯ ಮಾರ್ಗದಲ್ಲಿ ವಿಮಾನ ಸಂಚಾರಕ್ಕೆ ಮಾರ್ಗಸೂಚಿಗಳನ್ನು ಎಎಐನ ಕಾರ್ಯಾಚರಣಾ ನಿರ್ದೇಶನಾಲಯ ಬಿಡುಗಡೆ ಮಾಡಿದೆ.
    ವಿಮಾನಯಾನ ಕಾರ್ಯಾಚರಣೆಗಳು ಪ್ರಮುಖ ನಗರಗಳಿಗೆ ಸೀಮಿತವಾಗುವ ಸಾಧ್ಯತೆ ಇದೆ.  

    ಯಾವುದೇ ವಿಮಾನಯಾನ ಮಾಡುವಾಗ ಪ್ರಯಾಣಿಕರು ತಮ್ಮ ಫೋನ್‌ಗಳಲ್ಲಿ ಆರೋಗ್ಯ ಸೇತು ಆ್ಯಪ್ ಅಳವಡಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಲು ಕೇಂದ್ರ ಯೋಚಿಸುತ್ತಿದೆ.

    ಕರೊನಾ ಹೋರಾಟದ ಮುಂಚೂಣಿಯಲ್ಲಿರುವ ಡಾ. ಹರ್ಷ್​ ವರ್ಧನ್ ಇದೀಗ ವಿಶ್ವ ಆರೋಗ್ಯ ಸಂಸ್ಥೆಯ ಮಂಡಳಿಗೆ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts