More

    ನಕ್ಸಲರು-ಕಮ್ಯಾಂಡೋಗಳ ನಡುವೆ ಗುಂಡಿನ ಚಕಮಕಿ ; ಐವರ ಸಾವು

    ನಾಗಪುರ : ಮಹಾರಾಷ್ಟ್ರದ ಗಡಚಿರೋಲಿ ಜಿಲ್ಲೆಯ ಖೊಬ್ರಮೆಂದಾ ಅರಣ್ಯಪ್ರದೇಶದಲ್ಲಿ ನಡೆಯುತ್ತಿರುವ ಸೇನಾ ಕಾರ್ಯಾಚರಣೆಯಲ್ಲಿ ಐವರು ನಕ್ಸಲರು ಮೃತಪಟ್ಟಿದ್ದಾರೆ. ಈ ಪ್ರದೇಶದಲ್ಲಿ ಹೆಚ್ಚು ಸಂಖ್ಯೆಯಲ್ಲಿ ಸೇರಿ ತರಬೇತಿ ಮತ್ತು ‘ನಕ್ಸಲ್​ ವೀಕ್’ ಆಚರಿಸುತ್ತಿದ್ದರೆನ್ನಲಾದ ಶಂಕಿತ ಉಗ್ರವಾದಿಗಳನ್ನು ಹಿಡಿಯುವ ಪ್ರಯತ್ನದಲ್ಲಿ ಸಿ-60 ಕಮಾಂಡೋಗಳು ತೊಡಗಿದ್ದಾರೆ ಎನ್ನಲಾಗಿದೆ.

    ಮಾರ್ಚ್ 27 ರ ಶನಿವಾರ ಹೇತಲ್ಕಸ ಅರಣ್ಯದಲ್ಲಿ 60 ರಿಂದ 70 ಜನ ನಕ್ಸಲರು ಅಡಗಿರುವ ಮಾಹಿತಿಯ ಮೇಲೆ ಸಿ-60 ಕಮಾಂಡೋಗಳು ಕಾರ್ಯೋನ್ಮುಖರಾಗಿದ್ದರು. ಒಂದು ಗಂಟೆಯ ಗುಂಡಿನ ಚಕಮಕಿಯ ನಂತರ ನಕ್ಸಲರು ಜಾಗ ಖಾಲಿ ಮಾಡಿದ್ದು, 303 ರೈಫಲ್ ಮ್ಯಾಗ್​ಜೀನ್​ಗಳು, ಮೂರು ಪ್ರೆಷರ್ ಕುಕ್ಕರ್ ಬಾಂಬ್​ಗಳು ಮತ್ತು ಇತರ ಸರಕುಗಳನ್ನು ವಶಪಡಿಸಿಕೊಳ್ಳಲಾಗಿತ್ತು.

    ಇದನ್ನೂ ಓದಿ: ಸಂಬಳ ಕೇಳಲು ಬಂದ ನೌಕರನ ಕೊಲೆ! ಬಿಜೆಪಿ ಮಾಜಿ ಶಾಸಕನ ಮಗನ ವಿರುದ್ಧ ದೂರು

    ಇಂದು ಬೆಳಿಗ್ಗೆ ಮತ್ತೆ ಖೊಬ್ರಮೆಂದ ಅರಣ್ಯ ಪ್ರದೇಶದಲ್ಲಿ ನಕ್ಸಲರ ಹುಡುಕಾಟ ಆರಂಭಿಸಿದಾಗ 25-30 ನಕ್ಸಲರು ಕಮಾಂಡೋಗಳತ್ತ ಗುಂಡು ಹಾರಿಸಲು ಆರಂಭಿಸಿದರು. ಪ್ರತ್ಯುತ್ತರವಾಗಿ ಆಕ್ರಮಣ ನಡೆಸಿದ ಕಮಾಂಡೋಗಳ ಗುಂಡಿಗೆ ಸಿಕ್ಕಿ ಇಬ್ಬರು ಮಹಿಳೆಯರೂ ಸೇರಿದಂತೆ ಐದು ಜನ ನಕ್ಸಲರು ಸಾವಪ್ಪಿದರು. ಸ್ಥಳ ಪರಿಶೀಲನೆ ಮಾಡಿ, ಮೃತರನ್ನು ಗುರುತಿಸಲು ಹೆಚ್ಚಿನ ತನಿಖೆ ನಡೆಯುತ್ತಿದೆ. ಮತ್ತೊಂದೆಡೆ ಅರಣ್ಯದಲ್ಲಿ ಅಡಗಿರುವ ನಕ್ಸಲರ ಪತ್ತೆ ಕಾರ್ಯ ಮುಂದುವರಿದಿದೆ ಎನ್ನಲಾಗಿದೆ. (ಏಜೆನ್ಸೀಸ್)

    ಕೇರಳ : ವಿಶೇಷ ಅಕ್ಕಿ ವಿತರಣೆಗೆ ಹೈಕೋರ್ಟ್ ಹಸಿರು ನಿಶಾನೆ

    ಚಿಕ್ಕ ಮಕ್ಕಳಲ್ಲಿ ಹೆಚ್ಚಿದ ಕರೊನಾ ಸೋಂಕು; ಎಚ್ಚರವಾಗಿರಲು ಸಲಹೆ

    “ನಿವೃತ್ತ ಹೈಕೋರ್ಟ್ ನ್ಯಾಯಾಧೀಶರು ನನ್ನ ಮೇಲೆ ತನಿಖೆ ನಡೆಸಲಿದ್ದಾರೆ… ಸತ್ಯ ಹೊರಬರಲಿದೆ”

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts