More

    ಮಾಂಸದ ಹಸಿವಿನಿಂದ ಗರ್ಭಿಣಿ ಕಾಡೆಮ್ಮೆ ಹತ್ಯೆ, ಐವರ ಬಂಧನ

    ಮಲಪ್ಪುರಂ: ದೇಶಾದ್ಯಂತ ಕೋಲಾಹಲ ಎಬ್ಬಿಸಿದ್ದ ಕೇರಳದ ಗರ್ಭಿಣಿ ಆನೆ ಕೊಲೆ ಪ್ರಕರಣ ಜನ ಮಾನಸದಿಂದ ಮರೆಯಾಗುವ ಮುನ್ನವೇ ಅಂಥದ್ದೇ ಮತ್ತೊಂದು ಆತಂಕಕಾರಿ ಘಟನೆ ನಡೆದಿದೆ.
    ಕೇರಳದ ಮಲ್ಲಪುರಂ ಜಿಲ್ಲೆಯಲ್ಲಿ ಐವರು ದುರುಳರು ಗರ್ಭಿಣಿ ಕಾಡೆಮ್ಮೆಯನ್ನು ಬೇಟೆಯಾಡಿದ್ದಾರೆ. ಪಾಲಕ್ಕಾಡ್ ಜಿಲ್ಲೆಯ ಮನ್ನಾರ್​​ ಕಾಡ್ ಅರಣ್ಯ ವ್ಯಾಪ್ತಿಯಲ್ಲಿ ಗರ್ಭಿಣಿ ಆನೆ ದುರಂತ ಸಾವನ್ನಪ್ಪಿದ ಎರಡು ತಿಂಗಳ ನಂತರ ಈ ಘಟನೆ ನಡೆದಿದೆ.
    ಎಮ್ಮೆ ಹತ್ಯೆಗೆ ಸಂಬಂಧಿಸಿದಂತೆ ರಾಜ್ಯ ಅರಣ್ಯ ಇಲಾಖೆ ಈಗ ಐದು ಜನರನ್ನು ಬಂಧಿಸಿದೆ. ಆರೋಪಿಗಳನ್ನು ಪುಲ್ಲಾರ ಅಬು ಅಲಿಯಾಸ್ ನಾನಿಪ್ಪ (47), ಮುಹಮ್ಮದ್ ಬುಸ್ತಾನ್ (30), ಮುಹಮ್ಮದ್ ಅನ್ಸಿಫ್ (23), ಆಶಿಕ್ (27) ಮತ್ತು ಸುಹೇಲ್ (28) ಎಂದು ಗುರುತಿಸಲಾಗಿದೆ.

    ಇದನ್ನೂ ಓದಿ : ಎಣ್ಣೆ ವ್ಯಾಪಾರದಲ್ಲಿ 62 ಸಾವಿರ ರೂ. ವಂಚನೆ

    ಆಗಸ್ಟ್ 10 ರಂದು ರಾತ್ರಿ ಅರಣ್ಯಾಧಿಕಾರಿಗಳು ಆರೋಪಿಗಳ ಮನೆ ಮೇಲೆ ದಾಳಿ ನಡೆಸಿದ್ದು, ಈ ಸಂದರ್ಭದಲ್ಲಿ ಆರೋಪಿಯೊಬ್ಬನ ಮನೆಯಲ್ಲಿ ಎಮ್ಮೆ ಮಾಂಸ ಪತ್ತೆಯಾಗಿದೆ.
    ಅರಣ್ಯ ಅಧಿಕಾರಿಗಳು ಅಂದಾಜು 25 ಕೆಜಿ ಮಾಂಸವನ್ನು ವಶಪಡಿಸಿಕೊಂಡಿದ್ದು, ಒಟ್ಟು 200 ಕೆಜಿಯಷ್ಟು ಮಾಂಸ ಇದ್ದಿರಬಹುದೆಂದು ಅಂದಾಜಿಸಲಾಗಿದೆ. ಆರೋಪಿಗಳು ಎರಡು ತಲೆಬುರುಡೆ ಮತ್ತು ಇತರ ಅವಶೇಷಗಳನ್ನು ಕಾಡಿನಲ್ಲಿ ವಿಲೇವಾರಿ ಮಾಡಿದ್ದಾರೆ.
    ನಿಲಾಂಬೂರ್ ದಕ್ಷಿಣ ಅರಣ್ಯ ವಿಭಾಗದ ಕಾಳಿಕಾವ್ ವ್ಯಾಪ್ತಿಯಲ್ಲಿರುವ ಚಕ್ಕಿಕುಳಿ ಅರಣ್ಯ ವ್ಯಾಪ್ತಿಯ ಪುಂಚ ಅರಣ್ಯದಲ್ಲಿ ಆರೋಪಿಗಳು ಕಾಡೆಮ್ಮೆಯನ್ನು ಬೇಟೆಯಾಡಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ.
    ಈ ಕೃತ್ಯದಲ್ಲಿ ಮತ್ತಷ್ಟು ಜನ ಭಾಗಿಯಾಗಿರಬಹುದೆ ಎಂಬುದನ್ನು ಪತ್ತೆ ಹಚ್ಚಲು ತನಿಖೆ ನಡೆಸಲಾಗುತ್ತಿದೆ. ಆರೋಪಿಗಳನ್ನು ಬುಧವಾರ ಮಲಪ್ಪುರಂ ನ್ಯಾಯಾಲಯದಲ್ಲಿ ಹಾಜರುಪಡಿಸಲಾಯಿತು.

    ಮೃತ ಉದ್ಯೋಗದಾತನ ಎಟಿಎಂ ಕಾರ್ಡ್ ಬಳಸಿ ಆಕೆ ಕದ್ದದ್ದು ಬರೊಬ್ಬರಿ 35 ಲಕ್ಷ ರೂ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts